ಜನರ ಆದಾಯ ಕಡಿಮೆ, ಖರ್ಚು ಹೆಚ್ಚಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

ಇವರ ನಾಯಕರು ಜೈಲಿಗೆ ಹೋಗಿ ಬಂದಿರಲಿಲ್ಲವೇ? ಯಡಿಯೂರಪ್ಪ, ಜನಾರ್ದನರೆಡ್ಡಿ ಜೈಲಿನಿಂದ ಬಂದವರಲ್ಲವೇ? ಬಿಜೆಪಿಯ 16 ಮಂತ್ರಿಗಳು ಜಾಮೀನು ಪಡೆದಿರಲಿಲ್ಲವೇ ಎಂದು ಸಹ ಅವರು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಗಿ ಪ್ರಶ್ನಿಸಿದರು.

ಜನರ ಆದಾಯ ಕಡಿಮೆ, ಖರ್ಚು ಹೆಚ್ಚಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ
Follow us
TV9 Web
| Updated By: guruganesh bhat

Updated on: Aug 23, 2021 | 4:58 PM

ಬೆಂಗಳೂರು: ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಕೊವಿಡ್ ನಿಯಮ ಉಲ್ಲಂಘಿಸಲಾಗಿದೆ. ಆದರೆ ನಮಗೆ ಕಾರ್ಯಕ್ರಮ ನಡೆಸಲು ಅವಕಾಶ ಕೊಡುತ್ತಿಲ್ಲ. ಜನಾಶೀರ್ವಾದ ಹೆಸರಿನಲ್ಲಿ 800 ಕಿ.ಮೀ. ಸುತ್ತಾಡುತ್ತಿದ್ದಾರೆ. ಇವರಿಗೆ ಮಾತ್ರ ಕೊವಿಡ್ ನಿಯಮ ಅನ್ವಯವಾಗುವುದಿಲ್ಲವೇ? ಸಾರ್ವಜನಿಕರಾದರೆ ತಪ್ಪು, ಕೇಂದ್ರ ಸಚಿವರ ತಪ್ಪು ತಪ್ಪಲ್ಲವೇ? ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತದ ವೇಳೆ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಇದನ್ನ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಸಂಪ್ರದಾಯ ಅಂತಾರೆ. ಗೃಹ ಸಚಿವರು ಕೂಡ ಇದು ಸಂಪ್ರದಾಯ ಎನ್ನುತ್ತಾರೆ. ಗುಂಡು ಹಾರಿಸಿದರೆ ಕೇಸ್ ಏಕೆ ದಾಖಲಿಸಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್ ಜಂಟಿ ಹೇಳಿಕೆಯಡಿ ಪ್ರಶ್ನಿಸಿದರು.

ಕೊವಿಡ್ ಸಂದರ್ಭದಲ್ಲಿ ಬಿಜೆಪಿ ಜನರ ಪರ ನಿಲ್ಲಲಿಲ್ಲ. ವೆಂಟಿಲೇಟರ್, ಬೆಡ್ ಎಲ್ಲದರಲ್ಲೂ ಹಣ ಹೊಡೆದರು. ಕೊವಿಡ್ ಲಸಿಕೆಯನ್ನೂ ಜನರಿಗೆ ತಲುಪಿಸುತ್ತಿಲ್ಲ. ಕೊವಿಡ್ ಸೋಂಕಿನ ನಿಯಂತ್ರಣ ಸರಿಯಾಗಿ ಮಾಡುತ್ತಿಲ್ಲ. ಗ್ಯಾಸ್, ಪೆಟ್ರೋಲ್ನಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನರ ಆದಾಯ ಕಡಿಮೆ, ಖರ್ಚು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ವಿರುದ್ಧ ಕಾಂಗ್ರೆಸ್ ನಾಯಕ ಮಾಜಿ ಸಚಿವ ಆರ್.ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಸ್ವಾಗತಿಸಿರುವುದಕ್ಕೆ ಬಿಜೆಪಿಯವರು ಲೇವಡಿ ಮಾಡಿದ್ದಾರೆ. ಇವರ ನಾಯಕರು ಜೈಲಿಗೆ ಹೋಗಿ ಬಂದಿರಲಿಲ್ಲವೇ? ಯಡಿಯೂರಪ್ಪ, ಜನಾರ್ದನರೆಡ್ಡಿ ಜೈಲಿನಿಂದ ಬಂದವರಲ್ಲವೇ? ಬಿಜೆಪಿಯ 16 ಮಂತ್ರಿಗಳು ಜಾಮೀನು ಪಡೆದಿರಲಿಲ್ಲವೇ ಎಂದು ಸಹ ಅವರು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಗಿ ಪ್ರಶ್ನಿಸಿದರು. ಬಿಜೆಪಿ ನಾಯಕ ಸಿ.ಟಿ.ರವಿ ತಮಿಳುನಾಡು ಪರ ಇದ್ದಾರೆಯೇ ಅಥವಾ ರಾಜ್ಯದ ಪರ ಇದ್ದಾರೆಯೇ ಎಂಬುದು ತಿಳಿಯುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಅನುದಾನದ ಬಗ್ಗೆ ಯಾವ ಸಚಿವರೂ ಮಾತನಾಡುವುದಿಲ್ಲ. ಬಿಜೆಪಿಯವರು ಮಾಡುತ್ತಿರುವುದು ಜನಾಶೀರ್ವಾದ ಯಾತ್ರೆಯಲ್ಲ, ಬದಲಿಗೆ ಇದು ಜನ ವಿರೋಧಿ ಯಾತ್ರೆ ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ: 

ಇನ್ನೊಬ್ಬರ ಜತೆ ಸರ್ಕಾರ ರಚಿಸಲು ಆಗದು, ಸ್ವತಂತ್ರ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ: ಕುಮಾರಸ್ವಾಮಿ ಮನವಿ

ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪಾಡ್; ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಕ್ರಾಂತಿ: ಬಸವರಾಜ ಬೊಮ್ಮಾಯಿ

(KPCC Leader Ramalinga Reddy questions Covid rules didnot apply to BJP leaders)