ಅಧ್ಯಕ್ಷರಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಖರ್ಗೆ: ಗ್ರ್ಯಾಂಡ್ ವೆಲ್​​ಕಮ್​ಗೆ KPCC ಪ್ಲ್ಯಾನ್

| Updated By: ರಮೇಶ್ ಬಿ. ಜವಳಗೇರಾ

Updated on: Oct 28, 2022 | 6:24 PM

ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸ್ತಿರುವ ಖರ್ಗೆ ಅವರನ್ನು ಗ್ರ್ಯಾಂಡ್ ವೆಲ್​ ಕಮ್ ಕೋರಲು ಕೆಪಿಸಿಸಿ ತೀರ್ಮಾನಿಸಿದೆ.

ಅಧ್ಯಕ್ಷರಾಗಿ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಖರ್ಗೆ: ಗ್ರ್ಯಾಂಡ್ ವೆಲ್​​ಕಮ್​ಗೆ KPCC  ಪ್ಲ್ಯಾನ್
ಗಾಡ್ ಫಾದರ್ ಇಲ್ಲದೇ ರಾಜಕೀಯದಲ್ಲಿ ಬೆಳೆದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ ಅಧ್ಯಕ್ಷರಾದರು! ಖರ್ಗೆ ಜೀವನಗಾಥೆ ಇಲ್ಲಿದೆ
Follow us on

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ನವೆಂಬರ್ 6ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರನ್ನು ಗ್ರ್ಯಾಂಡ್​ ಆಗಿ ವೆಲ್​ ಕಮ್ ಮಾಡಿಕೊಳ್ಳಲು ಕರ್ನಾಟಕ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಕೆಪಿಸಿಸಿ ವತಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಿಂದ ಮೆರವಣಿಗೆ ಮೂಲಕ ಕರೆತರಲು ನಾಯಕರು ನಿರ್ಧರಿಸಿದ್ದಾರೆ.

ಬಳಿಕ ಬೆಂಗಳೂರು ಅರಮನೆ ಮೈದಾನದಲ್ಲಿ ಅಂದೆ(ನವೆಂಬರ್ 6) ಅರಮನೆ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ಮಾಡಲು ಕರ್ನಾಟಕ ಕಾಂಗ್ರೆಸ್ ತೀರ್ಮಾನಿಸಿದೆ. ಈ ಮೂಲಕ ಕಾಂಗ್ರೆಸ್​ ಪಕ್ಷದ ಹವಾ ಸೃಷ್ಟಿಸಲು ಕೈ ನಾಯಕರು ಮುಂದಾಗಿದ್ದಾರೆ.

ಚುನಾವಣಾ ತಜ್ಞ ನೀಡಿದ್ದ ವರದಿ ಬಗ್ಗೆ ಡಿಕೆಶಿ-ಸಿದ್ದು ಚರ್ಚೆ,150ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಕೈ ಸಿದ್ಧತೆ

ನಾಲ್ಕೈದು ತಿಂಗಳ ಮುಂಚೆಯೇ  ಅಭ್ಯರ್ಥಿಗಳ‌ ಘೋಷಣೆ

ಗದಗ: ಚುನಾವಣೆಗೆ 4-5 ತಿಂಗಳಿಗೂ ಮೊದಲೇ ಟಿಕೆಟ್​​ ಘೋಷಣೆಗೆ ಚಿಂತನೆ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರದ್ದೂ ಇದೇ ಅಭಿಪ್ರಾಯವಾಗಿದ್ದು, ಮೊದಲ ಪಟ್ಟಿಯಲ್ಲಿ 100 ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸ್ಟೇರಿಂಗ್ ಕಮಿಟಿ ಸದಸ್ಯ ಎಚ್​ಕೆ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಉತ್ತರ, ದಕ್ಷಿಣ ಯಾತ್ರೆಗಳಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಭಾರತ್​ ಜೋಡೋ ಯಾತ್ರೆಗೂ ಸಾಕಷ್ಟು ಜನರು ಬಂದಿದ್ದರು. ರಾಯಚೂರಿನಲ್ಲಿ ಸುಮಾರು 50 ಸಾವಿರ ಜನರು ಹೆಜ್ಜೆ ಹಾಕಿದ್ದರು. ಜೋಡೋ ಯಾತ್ರೆಯಿಂದ ಬಿಜೆಪಿಯವರು ತತ್ತರಿಸಿ ಹೋಗಿದ್ದಾರೆ ಎಂದರು.

ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಸ್ ರಾಜಕೀಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿನ ಯಾತ್ರೆಗಳಿಗೆ ಭಾರಿ ಸಂಖ್ಯೆಯಲ್ಲಿ ಜನರು ಬರ್ತಾರೆ. ಭಾರಿ ಉತ್ಸಾಹದಲ್ಲಿ ನಮ್ಮ ಕಾರ್ಯಕರ್ತರು ಇರ್ತಾರೆ. ಅವರು ಹೆಚ್ಚು ಅವರ ಕಡಿಮೆ ಅಂತಾ ಮಾಧ್ಯಮದವರು ಮಾಡ್ತಾರೆ. ಎರಡು ಕಡೇ ಅಷ್ಟೇ ಪ್ರಮಾಣದಲ್ಲಿ ಉತ್ಸಾಹ ಬರುತ್ತದೆ. ಸಿದ್ದರಾಮೋತ್ಸವ ಹಾಗೂ ತಿರಾಂಗ ಯಾತ್ರೆ, ಭಾರತ್ ಜೋಡೋ ಯಾತ್ರೆಯಲ್ಲಿ ಸಾಕಷ್ಟು ಜನರು ಬಂದಿದ್ರು. ಜಗತ್ತಿನಲ್ಲಿ ರಾಹುಲ್ ಗಾಂಧಿ ಯಾತ್ರೆ ಐತಿಹಾಸಿಕ ಯಾತ್ರೆಯಾಗಿದೆ ಎಂದು ತಿಳಿಸಿದರು.

Published On - 6:24 pm, Fri, 28 October 22