ವಿಶೇಷ ಪೂಜೆ ವೇಳೆಯೇ ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ: ಸಂಚಲನ ಮೂಡಿಸಿದ ಈಶ್ವರಪ್ಪ ಹೇಳಿಕೆ

| Updated By: ರಮೇಶ್ ಬಿ. ಜವಳಗೇರಾ

Updated on: Sep 10, 2023 | 3:04 PM

ವಿಶೇಷ ಹೋಮ ನಡೆಯುತ್ತಿದ್ದ ವೇಳೆ ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆಎಸ್ ಈಶ್ವರಪ್ಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​-ಬಿಜೆಪಿ ಮೈತ್ರಿ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ. ಇದರ ಮಧ್ಯೆ ಈಶ್ವರಪಪ್ಪನವರ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಪೂಜೆ ವೇಳೆಯೇ ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ: ಸಂಚಲನ ಮೂಡಿಸಿದ ಈಶ್ವರಪ್ಪ ಹೇಳಿಕೆ
ಕೆಎಸ್ ಈಶ್ವರಪ್ಪ
Follow us on

ಬಳ್ಳಾರಿ, ಸೆಪ್ಟೆಂಬರ್ 10): ಲೋಕಸಭೆ ಚುನಾವಣೆಯಲ್ಲಿ (Loksabha Elections 2024) ಹೇಗಾದ್ರೂ ಮಾಡಿ 20 ಪ್ಲಸ್ ಸೀಟ್ ಗೆಲ್ಲಬೇಕು ಎಂದು ಕಾಂಗ್ರೆಸ್ ಪ್ಲ್ಯಾನ್ ಮಾಡುತ್ತಿದ್ದರೆ. ಅತ್ತ ಕೇಸರಿ ಪಡೆ, ಈಗ ಶತ್ರುಗಳ ಶತ್ರುಮಿತ್ರ ಅನ್ನೋ ಸೂತ್ರಕ್ಕೆ ಮೊರೆ ಹೋಗಿದೆ. ರಾಜ್ಯದಲ್ಲಿ ಸೊರಗಿರುವ ಬಿಜೆಪಿ, ಲೋಕಸಭೆ ಚುನಾವಣೆಯಲ್ಲಾದ್ರೂ ಕಾಂಗ್ರೆಸ್​ಗೆ ತಿರುಗೇಟು ಕೊಡಬೇಕೆಂದು ಜೆಡಿಎಸ್​ ಜೊತೆ ಮೈತ್ರಿಗೆ(BJP-JDS alliance) ಮುಂದಾಗಿದೆ. ಈ ಬಗ್ಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬಳ್ಳಾರಿಯಲ್ಲಿ ಇಂದು (ಸೆಪ್ಟೆಂಬರ್ 10) ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ. ಬಳ್ಳಾರಿಯಲ್ಲಿ ಕುಟುಂಬದ ಆರಾಧ್ಯ ದೇವರ ಪೂಜೆ ನಡೆಯುತ್ತಿದೆ. ಮಲ್ಲೇಶ್ವರ, ಚೌಡೇಶ್ವರಿ ದೇಗುಲದಲ್ಲಿ ವಿಶೇಷ ಹೋಮ ನಡೆಯುತ್ತಿದೆ. ಇದೇ ವೇಳೆ ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ಹೇಳಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್​ ದೋಸ್ತಿ: ಸುಮಲತಾ ಅಂಬರೀಶ್​ ಅತಂತ್ರದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು

ಪೂಜೆ ಮಾಡುವಾಗ ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ಶುಭ ಸಂದೇಶ. ಅಲ್ಲದೇ ರಾಜ್ಯದ ಜನತೆ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಶುಭ ಸಂದೇಶ. ಏಕೆ ನೀವು ಕರೆ ಮಾಡಿಲ್ಲ ಎಂದು ಹೆಚ್​.ಡಿ.ಕುಮಾರಸ್ವಾಮಿ ಕೇಳಿದ್ರು. ಎರಡು ದಿನ ಬಿಟ್ಟು ಬೆಂಗಳೂರಿಗೆ ಬಂದು ಮಾತನಾಡುವೆ ಎಂದಿದ್ದೇನೆ. ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಹೊಸದಾಗಿ ಮೈತ್ರಿ ಆಗಿಲ್ಲ. ಈ ಹಿಂದೆಯೂ ಮೈತ್ರಿ ಮಾಡಿಕೊಂಡು ಒಳ್ಳೇ ಸರ್ಕಾರ ನೀಡಿದ್ದೇವೆ. ಕಾಂಗ್ರೆಸ್ ದೂರ ಇಡಬೇಕೆಂಬ ಕಾರಣಕ್ಕೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ