ಚಾಮರಾಜಪೇಟೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ: ಅವರು ಈ ಕ್ಷೇತ್ರದ ಅಳಿಯ -ಶಾಸಕ ಜಮೀರ್ ಅಹ್ಮದ್

ಚಾಮರಾಜಪೇಟೆ ಕ್ಷೇತ್ರದಿಂದ ಸಿದ್ದರಾಮಯ್ಯ​ ಸ್ಪರ್ಧೆ ವಿಚಾರ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್, ಕ್ಷೇತ್ರ ಬಿಟ್ಟು ಕೊಡುವುದಾಗಿ ಹೇಳಿದ್ದಾರೆ.

ಚಾಮರಾಜಪೇಟೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ: ಅವರು ಈ ಕ್ಷೇತ್ರದ ಅಳಿಯ -ಶಾಸಕ ಜಮೀರ್ ಅಹ್ಮದ್
ಸಿದ್ದರಾಮಯ್ಯ, ಶಾಸಕ ಜಮೀರ್ ಅಹ್ಮದ್
Follow us
TV9 Web
| Updated By: ಆಯೇಷಾ ಬಾನು

Updated on:Dec 05, 2022 | 3:14 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜ್ಯ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿವೆ. ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮಾತ್ರ ಇನ್ನೂ ತಮ್ಮ ಕ್ಷೇತ್ರವನ್ನು ಅಂತಿಮ ಮಾಡಿಲ್ಲ. ಇದೀಗ ಚಾಮರಾಜಪೇಟೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ. ಸಿದ್ದರಾಮಯ್ಯಗೆ ಈಗಲೂ ಆಹ್ವಾನ ಕೊಡ್ತೇನೆ ಎಂದು ಸಿದ್ದರಾಮಯ್ಯಗೆ ಚಾಮರಾಜಪೇಟೆ ಕ್ಷೇತ್ರವನ್ನು ಬಿಟ್ಟು ಕೊಡಲು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​(Zameer Ahmad Khan) ಮುಂದಾಗಿದ್ದಾರೆ.

ಚಾಮರಾಜಪೇಟೆ ಕ್ಷೇತ್ರದಿಂದ ಸಿದ್ದರಾಮಯ್ಯ​ ಸ್ಪರ್ಧೆ ವಿಚಾರ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜಪೇಟೆ ಅಳಿಯ. ನಾನು ಚಾಮರಾಜಪೇಟೆ ಮನೆ ಮಗ. ಚಾಮರಾಜಪೇಟೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದ್ರೆ ಗೆದ್ದೇ ಗೆಲ್ತಾರೆ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆ ಮಾತಿಗೆ ಈಗಲೂ ನಾನು ಬದ್ದನಿದ್ದೇನೆ. ಸಿದ್ದರಾಮಯ್ಯನೇ ಮತ್ತೆ ಮುಂದಿನ ಮುಖ್ಯಮಂತ್ರಿ ಆಗಬೇಕು. ಆದರೆ ಇದರಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್‌ ಎಂದು ಕರೆಯುವುದೇಕೆ? 8 ಕಾರಣ ಕೊಟ್ಟು ಪಟ್ಟಿ ಟ್ವೀಟ್ ಮಾಡಿದ ಬಿಜೆಪಿ

ಸಿ.ಟಿ.ರವಿಗೆ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ

ಸಿದ್ರಾಮುಲ್ಲಾಖಾನ್ ಎಂದು ಶಾಸಕ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ. ಸಿ.ಟಿ.ರವಿಗೆ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ರಾಜ್ಯದಕ್ಕೆ ಮೋದಿ, ಶಾ ಬಂದರೂ ಸಿದ್ದರಾಮಯ್ಯನೇ ನೆನಪಾಗ್ತಾರೆ ಎಂದು ಗರಂ ಆದ್ರು.

ಜೆಡಿಎಸ್​ ಪಕ್ಷ ಏನಿದ್ರೂ 25ರಿಂದ 30 ಸ್ಥಾನಕ್ಕೆ ಮಾತ್ರ ಸೀಮಿತ

JDS ಅಧಿಕಾರಕ್ಕೆ ಬಂದ್ರೆ ಮುಸ್ಲಿಮರನ್ನು ಸಿಎಂ ಮಾಡುವ ವಿಚಾರಕ್ಕೆ ಶಾಸಕ ಜಮೀರ್ ಅಹ್ಮದ್ ಜೆಡಿಎಸ್​ ವಿರುದ್ಧ ಕಿಡಿಕಾರಿದ್ದಾರೆ. ಜೆಡಿಎಸ್​ ಪಕ್ಷ 113 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲ್ಲ. ಜೆಡಿಎಸ್​ ಪಕ್ಷ ಏನಿದ್ರೂ 25ರಿಂದ 30 ಸ್ಥಾನಕ್ಕೆ ಮಾತ್ರ ಸೀಮಿತ. ಜೆಡಿಎಸ್​ 113 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲ್ಲ, ಅದಕ್ಕೆ ಹೇಳ್ತಿದ್ದಾರೆ. ಮೈತ್ರಿ ಸರ್ಕಾರ ಬಂದಾಗ ಮುಸ್ಲಿಮರನ್ನು ಹೆಚ್​ಡಿಕೆ ಸಿಎಂ ಮಾಡಲಿ ನೋಡೋಣ ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ ಅಧ್ಯಕ್ಷ ಡಿಕೆ ಶಿವಕುಮಾರ್ ​ರೌಡಿ ಕೊತ್ವಾಲ್ ರಾಮಚಂದ್ರನ ಶಿಷ್ಯ: ರೇಣುಕಾಚಾರ್ಯ

ನಾನು ಸೋತರೆ ನನ್ನ ತಲೆ ಕತ್ತರಿಸಿಕೊಳ್ತೇನೆ ಅಂತಾ ಹೇಳಿದ್ದೆ

ಇನ್ನು ಇದೇ ವೇಳೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಸೈಲೆಂಟ್​​ ಸುನೀಲ್​ ಸ್ಪರ್ಧೆ ವಿಚಾರಕ್ಕೆ ಶಾಸಕ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಲಿ. 2018ರಲ್ಲಿ ಎಲ್ಲಾ ಶಕ್ತಿಗಳು ಒಂದಾಗಿದ್ದವು, ಆಗ ಏನಾಯಿತು? ಹೆಚ್​.ಡಿ.ದೇವೇಗೌಡರೇ ಚಾಲೆಂಜ್ ತೆಗೆದುಕೊಂಡಾಗ ಏನಾಯ್ತು? ಇದೇ ದೇವೇಗೌಡರು ಜೆಡಿಎಸ್​​ನಲ್ಲಿ ಮುಸ್ಲಿಂ ಆಗಲು ಹೊರಟ್ಟಿದ್ದರು. ಜಮ್ಮು-ಕಾಶ್ಮೀರದಿಂದ ಫಾರೂಕ್ ಅಬ್ದುಲ್ಲಾ ಕರೆತಂದು ನಿಲ್ಲಿಸಿ ಎಂದಿದ್ದೆ. ಇಲ್ಲದಿದ್ದರೆ ಹೆಚ್​.ಡಿ.ಕುಮಾರಸ್ವಾಮಿ, ರೇವಣ್ಣರನ್ನು ನಿಲ್ಲಿಸಿ ಎಂದಿದ್ದೆ. ನಾನು ಸೋತರೆ ನನ್ನ ತಲೆ ಕತ್ತರಿಸಿಕೊಳ್ತೇನೆ ಅಂತಾ ಹೇಳಿದ್ದೆ. ಕೊನೆಗೆ ಏನಾಯ್ತು? ಆ ಚುನಾವಣೆಯಲ್ಲಿ ಇನ್ನೂ ಹೆಚ್ಚು ಲೀಡ್​​ ಬಂತು. ನಾನು​ ಚಾಮರಾಜಪೇಟೆ ಮಗ, ಮನೆ ಮಗನನ್ನು ಯಾರೂ ಬಿಟ್ಟುಕೊಡಲ್ಲ. ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದ್ರೂ ಹೆಚ್ಚು ಲೀಡ್​​ನಲ್ಲಿ ಗೆಲ್ತೇನೆ ಎಂದರು.

ರಾಜ್ಯ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:14 pm, Mon, 5 December 22