ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ; ಮಾಜಿ ಸಚಿವ ಸೋಮಣ್ಣಗೆ ಕೈತಪ್ಪಿದ ಟಿಕೆಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 11, 2024 | 8:50 PM

ರಾಜ್ಯಸಭೆ ಚುನಾವಣೆಗೆ (Rajya Sabha elections)ಇದೀಗ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ್ದು, ಮಾಜಿ ಸಚಿವ ಸೋಮಣ್ಣಗೆ ರಾಜ್ಯಸಭೆ ಟಿಕೆಟ್​ ಕೈತಪ್ಪಿದೆ. ವಿ.ಸೋಮಣ್ಣ ಅವರು ಟಿಕೆಟ್​ ಆಕಾಂಕ್ಷಿಯಾಗಿದ್ದರು. ಅವರ ಬದಲು ನಾರಾಯಣ ಭಾಂಡಗೆಗೆ ಟಿಕೆಟ್​​ ನೀಡಲಾಗಿದೆ.

ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ; ಮಾಜಿ ಸಚಿವ ಸೋಮಣ್ಣಗೆ ಕೈತಪ್ಪಿದ ಟಿಕೆಟ್​
ರಾಜ್ಯಸಭೆ ಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ
Follow us on

ನವದೆಹಲಿ, ಫೆ.11: ರಾಜ್ಯಸಭೆ ಚುನಾವಣೆಗೆ (Rajya Sabha elections)ಇದೀಗ BJP ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ್ದು, ಮಾಜಿ ಸಚಿವ ಸೋಮಣ್ಣಗೆ ರಾಜ್ಯಸಭೆ ಟಿಕೆಟ್​ ಕೈತಪ್ಪಿದೆ. ವಿ.ಸೋಮಣ್ಣ ಅವರು ಟಿಕೆಟ್​ ಆಕಾಂಕ್ಷಿಯಾಗಿದ್ದರು. ಅವರ ಬದಲು ನಾರಾಯಣ ಭಾಂಡಗೆಗೆ ಟಿಕೆಟ್​​ ನೀಡಲಾಗಿದೆ. ಜೊತೆಗೆ ಬಿಹಾರದಲ್ಲಿ ಡಾ.ಧರ್ಮಶೀಲಾ ಗುಪ್ತಾ ಹಾಗೂ ಡಾ.ಭೀಮಸಿಂಗ್​ ಸೇರಿ ಇಬ್ಬರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಛತ್ತೀಸ್​ಗಢದಲ್ಲಿ ರಾಜಾ ದೇವೇಂದ್ರಪ್ರತಾಪ್​ ಸಿಂಗ್​, ಹರಿಯಾಣದಲ್ಲಿ ಸುಭಾಷ್​ ಬಾರ್ಲಾಗೆ ಹಾಗೂ ಉತ್ತರ ಪ್ರದೇಶದಲ್ಲಿ ಆರ್​.ಪಿ.ಎನ್​ ಸಿಂಗ್​ಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

1.ಧರ್ಮಶೀಲಾ ಗುಪ್ತಾ: ಬಿಹಾರ
2.ಡಾ.ಭೀಮ್ ಸಿಂಗ್: ಬಿಹಾರ
3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್
4.ಸುಭಾಷ್ ಬರಲಾ: ಹರಿಯಾಣ
5.ನಾರಾಯಾಣ ಭಾಂಡಗೆ: ಕರ್ನಾಟಕ
6.ಆರ್​​ಪಿಎನ್​​​ ಸಿಂಗ್: ಉತ್ತರ ಪ್ರದೇಶ
7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ
8.ಚೌಧರಿ ತೇಜ್​ವೀರ್ ಸಿಂಗ್: ಉತ್ತರ ಪ್ರದೇಶ
9.ಸಾಧನಾ ಸಿಂಗ್: ಉತ್ತರ ಪ್ರದೇಶ
10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ
11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ
12.ನವೀನ್ ಜೈನ್: ಉತ್ತರ ಪ್ರದೇಶ
13.ಮಹೇಂದ್ರ ಭಟ್: ಉತ್ತರಾಖಂಡ್
14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

ರಾಜ್ಯಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಮಾತನಾಡಿದ ನಾರಾಯಣ ಭಾಂಡ, ‘ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಸಭೆ ಟಿಕೆಟ್ ನೀಡಿದ್ದಕ್ಕೆ ಸಂತಸವಾಗಿದೆ. ಇಂತಹ ಕಾರ್ಯ ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ನಾನು ಅಯೋದ್ಯಾ ರಾಮಮಂದಿರ‌ ಹೋರಾಟದಲ್ಲಿ ಭಾಗಿಯಾಗಿ ಆಗ ಜೈಲು ಸೇರಿದವನು. ಅಯೋದ್ಯಾ ವಿವಾಧಿತ ಕಟ್ಟಡ ಬೀಳೋದನ್ನು ಕಣ್ಣಾರೆ ಕಂಡವನು. ಈಗ ರಾಮಮಂದಿರ‌ ನಿರ್ಮಾಣವಾಗಿ ರಾಮಲಲ್ಲಾನ ಪ್ರತಿಷ್ಟಾಪನೆ ಕೂಡ ಕಂಡವನು. ನನಗೆ ಡಬಲ್ ಖುಷಿಯಾಗಿದೆ. ಆರ್​ಎಸ್​ಎಸ್​ನಲ್ಲಿ ಸಕ್ರೀಯನಾಗಿ ಬಿಜೆಪಿಯಲ್ಲಿ ದುಡಿದವನು. ಹತ್ತರಿಂದ ಹದಿನೈದು ಬಾರಿ ಜೈಲು ಸೇರಿದವನು.
ನನ್ನ ಸೇವೆ ಪರಿಗಣಿಸಿ ಟಿಕೆಟ್ ಘೋಷಣೆ ಮಾಡಿದ್ದಾರೆ. ಅಯೋದ್ಯಾ ರಾಮಮಂದಿರ‌ ಹೋರಾಟ ಕಾಶ್ಮೀರಿ ತಿರಂಗಾ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಯಡಿಯೂರಪ್ಪ ಹೆಚ್ ಎನ್ ಅನಂತಕುಮಾರ ಅವರನ್ನು ಸದಾ ಸ್ಮರಿಸಬೇಕು. ಕೇಂದ್ರದಲ್ಲಿ ನಾನು ವಾಜಪೇಯಿ, ಅಡ್ವಾಣಿ ಅವರ ಅನುಯಾಯಿಯಾಗಿದ್ದೇ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ನಿರ್ಮಲಾ ಸೀತಾರಾಮನ್ ಯಾವ ರಾಜ್ಯದವರು? ಎಲ್ಲಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ? ಅವರ ಮೊದಲ ಬಜೆಟ್ ಹೇಗಿತ್ತು?

ಫೆಬ್ರವರಿ 27 ರಂದು 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಭಾರತೀಯ ಚುನಾವಣಾ ಆಯೋಗ ಬಿಹಾರದ 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಿಸಿದೆ. ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ ಫೆಬ್ರವರಿ 15, 2024 ಆಗಿದ್ದು, ನಾಮಪತ್ರಗಳ ಪರಿಶೀಲನೆಯು ಫೆಬ್ರವರಿ 16, ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಸಮಯ 20 ಫೆಬ್ರವರಿ 2024 ಆಗಿದೆ. ಇನ್ನು ಫೆಬ್ರವರಿ 27 ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

15 ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸ್ಥಾನಗಳ ಸಂಖ್ಯೆ:

ಆಂಧ್ರ ಪ್ರದೇಶ: 3
ಬಿಹಾರ: 6
ಛತ್ತೀಸ್‌ಗಢ: 1
ಗುಜರಾತ್: 4
ಹರಿಯಾಣ: 1
ಹಿಮಾಚಲ ಪ್ರದೇಶ: 1
ಕರ್ನಾಟಕ: 4
ಮಧ್ಯಪ್ರದೇಶ: 5
ಮಹಾರಾಷ್ಟ್ರ: 6
ತೆಲಂಗಾಣ: 3
ಉತ್ತರ ಪ್ರದೇಶ: 10
ಉತ್ತರಾಖಂಡ: 1
ಪಶ್ಚಿಮ ಬಂಗಾಳ: 5
ಒಡಿಶಾ: 3
ರಾಜಸ್ಥಾನ: 3

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ​​

Published On - 8:05 pm, Sun, 11 February 24