ಬೆಂಗಳೂರು, ಮಾರ್ಚ್ 19: ಪ್ರಾರಂಭದಿಂದಲೂ ನಾವು ಮೂರು ಕ್ಷೇತ್ರ ಕೇಳಿದ್ದೇವೆ. ನಾವು ಕೇಳಿದ್ದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೌರವಿಸಿದ್ದಾರೆ. ಸಭೆಯಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ-ಜೆಡಿಎಸ್ (BJP-JDS) ಒಟ್ಟಾಗಿ ಹೋಗಬೇಕು ಅಂತ ಚರ್ಚೆಯಾಗಿದೆ. ಬಿಜೆಪಿ ಹೈಕಮಾಂಡ್ ನಾಯಕರು ಈ ಕ್ಷಣದವರೆಗೂ ಕ್ಷೇತ್ರ ಹಂಚಿಕೆಯನ್ನು ಅಂತಿಮಗೊಳಿಸಿಲ್ಲ. ಬಿಜೆಪಿ ಹೈಕಮಾಂಡರ್ ನಾಯಕರು ನಮ್ಮನ್ನು ತುಂಬಾ ಗೌರವಯುತವಾಗಿ ನೋಡಿಕೊಂಡಿದ್ದಾರೆ. ಜೆಡಿಎಸ್-ಬಿಜೆಪಿ ನಾಯಕರ ನಡುವೆ ಯಾವುದೇ ವಿಶ್ವಾಸ ಕಡಿಮೆಯಾಗಿಲ್ಲ. ನಮ್ಮ ಶಕ್ತಿ ಬಗ್ಗೆ ಮತನಾಡಿದ್ದೆನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.
ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ಕಾಂಗ್ರೆಸ್ನವರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ. ಜನ ತಿರಸ್ಕಾರ ಮಾಡಿದಾಗ ನಮ್ಮ ಮನೆ ಬಾಗಿಲಿಗೆ ಬಂದ್ದಿದ್ದು ನೀವು. ಈಗ ಬನ್ನಿ ಕಾಂಗ್ರೆಸ್ಗೆ ಅಂತ ಡಿ.ಕೆ.ಶಿವಕುಮಾರ್ ಕರೆಯುತ್ತಿದ್ದಾರೆ. ಕಾಂಗ್ರೆಸ್ ಜತೆ ಸರ್ಕಾರ ಮಾಡಿದಾಗ ಪಕ್ಷ ನಾಶಕ್ಕೆ ಹೊರಟಿದ್ದರು. ನಮ್ಮ ಶಾಸಕರಿಗೆ ಬ್ರೈನ್ ವಾಶ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡರು. ಹಂತ ಹಂತವಾಗಿ ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡಿದ್ರಿ. ಯಾವ ರೀತಿ ನಮ್ಮ ಶಕ್ತಿ ಕುಂದಿಸಲು ಯತ್ನಿಸಿದ್ದೀರಿ ಎಂದು ಗೊತ್ತು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿದರು.
ನಮ್ಮ ಮೈತ್ರಿ ಬಗ್ಗೆ ಡಿ.ಕೆ.ಶಿವಕುಮಾರ್ ಅಯ್ಯೋ ಪಾಪ ಎಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನೀವು ಮಂಡ್ಯದಲ್ಲಿ ಏನೂ ಮಾಡಿದ್ದಿರಾ ಅಂತ ಗೋತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಜಯದೇವ ಮಂಜುನಾಥ್ ಅವರನ್ನು ಕಣಕ್ಕಿಳಿಸಲು ನೀವು ಕಾರಣ. 2018 ರಲ್ಲಿ ನಾನು ಸಿಎಂ ಇದ್ದಾಗ ನೀವು ಹೇಗೆ ನೆಡೆಸಿಕೊಂಡಿದ್ದೀರಿ ಅಂತ ಗೊತ್ತಿದೆ. ನಾನು ಸಿಎಂ ಇದ್ದಾಗ ಒಂದು ದಿನ ನಮ್ಮ ಕೆಲಸದ ಬಗ್ಗೆ ನೀವು ಮಾತನಾಡಿಲ್ಲ. ರೈತರ ಸಾಲದ ಬಗ್ಗೆ ಒಂದು ಮತನಾಡಿಲ್ಲ. ಈಗ ನಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್ಗೆ ಬನ್ನಿ ಎಂದು ಕರೆ ಕೊಡುತ್ತಿರಾ? ನನ್ನ ಕಾರ್ಯಕರ್ತರಿಗೆ ನಿಮ್ಮಿಂದ ರಕ್ಷಣೆ ಪಡೆಯುವ ದುಸ್ಥಿತಿ ಬಂದಿಲ್ಲ. ಪದೇ ಪದೇ ಬಿಜೆಪಿ ಬಿಟೀಮ್ ಬಿಟೀಮ್ ಎಂದು ಹೇಳಿದ್ರಿ. ಹಂತ ಹಂತವಾಗಿ ನಮ್ಮ ಪಕ್ಷ ಮುಗಿಸಲು ಪ್ರಯತ್ನ ಪಟ್ಟಿದ್ದಾರೆ. ರಾಜಕೀಯವಾಗಿ ನಮಗೆ ವಿಷ ಹಾಕಿದ್ದಿರಿ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Lok Sabha Elections: ಕೊನೇ ಕ್ಷಣದಲ್ಲಿ ಮಂಡ್ಯದಲ್ಲಿ ಕಣಕ್ಕಿಳಿಯಲು ಕುಮಾರಸ್ವಾಮಿ ನಿರ್ಧಾರ; ಇದರ ಹಿಂದಿದೆ ಹಲವು ಲೆಕ್ಕಾಚಾರ!
ಚುನಾವಣೆ ಘೋಷಣೆಗೂ ಮುಂಚೆ ಸೀರೆ ಹಂಚಿದ್ದಾರೆ. ಈಗ ಮತ್ತೆ ಚುನಾವಣೆ ಘೋಷಣೆ ಆದಮೇಲೆ ಸೀರೆ, ಕುಕ್ಕರ್ ಹಂಚಿಕೆಯಾಗುತ್ತಿದೆ. ಹಣ ಬಲ ಮತ್ತು ತೋಳ್ ಬಲದಿಂದ ಚುನಾವಣೆ ಮಾಡಲು ಡಿಕೆ ಶಿವಕುಮಾರ್ ಹೊರಟ್ಟಿದ್ದಾರೆ. ಅದಕ್ಕೆ ನಾವು ಹೆರದಲ್ಲ. ನಾಲ್ಕು ಲಕ್ಷ ಕುಕ್ಕರ್ ಚುನಾವಣೆ ಘೋಷಣೆ ಆದಮೇಲೆ ಲೋಡ್ ಮಾಡಿದ್ದಾರೆ. ಮುಖ್ಯ ಚುನಾವಣಾ ಅಧಿಕಾರಿಗಳು ಇದನ್ನು ಗಮನಿಸಬೇಕು. ಹೀಗೆ ಚುನಾವಣೆ ನೆಡೆಸಿದರೆ ಹೇಗೆ. ಕುಕ್ಕರ್ ಜೊತೆಗೆ ಕುಕ್ಕರ್ ಸ್ಟವ್ ಕೂಡ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಮೇಲೆ ಆರೋಪ ಮಾಡಿದರು.
ಸಿದ್ದರಾಮಯ್ಯನವರೆ ಗ್ಯಾರಂಟಿ ಕೊಟ್ಟಿದ್ದಿರಿ, ಯಾಕೆ ಮತ್ತೆ ಕುಕ್ಕರ್ ಹಂಚುತ್ತಿದ್ದಿರಿ? ನಮ್ಮ ಕಾರ್ಯಕರ್ತರಿಗೆ ಕರೆ ಕೊಡುತ್ತೆನೆ ಸೀರೆ ,ಕುಕ್ಕರ್ ಸ್ಟಾಕ್ ಇಟ್ಟ ಜಾಗದಲ್ಲಿ ಬೆಂಕಿ ಇಡಿ. ಯಾರು ಕೇಸ್ ಹಾಕುತ್ತಾರೆ ನಾನು ನೋಡುತ್ತೆನೆ. ಮುಖ್ಯ ಚುನಾವಣಾ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ಯಾರಾ ಮಿಲಿಟರಿ ಪೋರ್ಸ್ ಗ್ರಾಮಾಂತರ ಕ್ಷೇತ್ರಕ್ಕೆ ಹಾಕಬೇಕು. ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮಿಲಿಟರಿ ಬರಲಿಲ್ಲ ಅಂದರೆ ಗ್ರಾಮಾಂತರ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆ ನೆಡೆಯಲ್ಲ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Tue, 19 March 24