ಲೋಕಸಭೆ ಚುನಾವಣೆ 2024: ಉತ್ತರ ಕನ್ನಡದಲ್ಲಿ ತೇಲಿ ಬಂತು ಮತ್ತೊಂದು ಹೆಸರು, ಚಕ್ರವರ್ತಿ ಸೂಲಿಬೆಲೆಗೆ ಟಿಕೆಟ್​ ಸಾಧ್ಯತೆ

| Updated By: ವಿವೇಕ ಬಿರಾದಾರ

Updated on: Mar 11, 2024 | 2:03 PM

ಯುವಾ ಬ್ರಿಗೇಡ್​ ಸ್ಥಾಪಕ, ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ. ಚಕ್ರವರ್ತಿ ಸೂಲಿಬೆಲೆ ಮೂಲತಃ ಉತ್ತರ ಕನ್ನಡ ಜಿಲ್ಲೆಯವರೇ ಆಗಿದ್ದು, ಬಲಪಂಥೀಯ ಚಿಂತಕರಾಗಿದ್ದಾರೆ. ಇಷ್ಟೇ ಅಲ್ಲದೆ ಬಿಜೆಪಿ ಹೈಕಮಾಂಡ್​​ ನಾಯಕರ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದಾರೆ.ಬಿಜೆಪಿ ಹೈಕಮಾಂಡ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಚಕ್ರವರ್ತಿ ಸೂಲಿಬೇಲೆ ಹೆಸರು ಘೋಷಿಸುತ್ತಾ ಕಾದು ನೋಡಬೇಕಿದೆ.

ಲೋಕಸಭೆ ಚುನಾವಣೆ 2024: ಉತ್ತರ ಕನ್ನಡದಲ್ಲಿ ತೇಲಿ ಬಂತು ಮತ್ತೊಂದು ಹೆಸರು, ಚಕ್ರವರ್ತಿ ಸೂಲಿಬೆಲೆಗೆ ಟಿಕೆಟ್​ ಸಾಧ್ಯತೆ
ಚಕ್ರವರ್ತಿ ಸೂಲಿಬೆಲೆ
Follow us on

ಉತ್ತರ ಕನ್ನಡ, ಮಾರ್ಚ್​ 11: ಚುನಾವಣೆ ಹತ್ತಿರವಾಗುತ್ತಿದ್ದಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ (Uttara Kannada Lok Sabha Constituency) ಬಿಜೆಪಿ (BJP) ಟಿಕೆಟ್​ಗಾಗಿ ಲಾಬಿ ಜೋರಾಗಿದೆ. ಟಿಕೆಟ್​ಗಾಗಿ ಸಂಸದ ಅನಂತಕುಮಾರ್​ ಹೆಗಡೆ (Anantkumar Hegde) ಮತ್ತು ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅನಂತಕುಮಾರ್ ಹೆಗಡೆ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಯಾವುದೇ ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಮುಖ್ಯವಾಗಿ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಜಿಲ್ಲೆಗೆ ಬಂದಿದ್ದರೂ ಸಹ ಅನಂತಕುಮಾರ್ ಹೆಗಡೆ ಮಾತ್ರ ಸುಳಿದಿರಲಿಲ್ಲ. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೊಮ್ಮೆ ಟಿಕೆಟ್​ಗಾಗಿ ಮುನ್ನಲೆಗೆ ಬಂದಿದ್ದಾರೆ.

ಇನ್ನು ಅತ್ತ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ನಿರಾಶೆಯಲ್ಲಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಲೋಕಸಭೆ ಟಿಕೆಟ್​ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇವರಿಬ್ಬರ ಹಗ್ಗ-ಜಗ್ಗಟಾದ ಮಧ್ಯೆ ಮತ್ತೊಂದು ಹೆಸರು ಮುನ್ನಲೆಗೆ ಬಂದಿದೆ. ಅದು ಯುವಾ ಬ್ರಿಗೇಡ್​ ಸ್ಥಾಪಕ, ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele). ಚಕ್ರವರ್ತಿ ಸೂಲಿಬೆಲೆ ಮೂಲತಃ ಉತ್ತರ ಕನ್ನಡ ಜಿಲ್ಲೆಯವರೇ ಆಗಿದ್ದು, ಬಲಪಂಥೀಯ ಚಿಂತಕರಾಗಿದ್ದಾರೆ. ಇಷ್ಟೇ ಅಲ್ಲದೆ ಬಿಜೆಪಿ ಹೈಕಮಾಂಡ್​​ ನಾಯಕರ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ರೇಸ್​ನಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಹೆಸರೂ ಕೇಳಿಬಂದಿದೆ. ಅನಂತ ಕುಮಾರ್ ಹೆಗಡೆಗೆ ಟಿಕೆಟ್ ನೀಡದಿದ್ದಲ್ಲಿ ಹಿಂದುತ್ವದ ಆಧಾರದಲ್ಲೇ ಸೂಲಿಬೆಲೆಗೆ ಟಿಕೆಟ್ ನೀಡವ ಸಾಧ್ಯಾ ಸಾಧ್ಯತೆಗಳ ಬಗ್ಗೆ ಚರ್ಚೆ ಆಗಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಅನಂತಕುಮಾರ್​ ಹೆಗಡೆಯ ಸಂವಿಧಾನ ತಿದ್ದುಪಡಿ ಹೇಳಿಕೆ ವೈಯಕ್ತಿಕ: ಅಂತರ ಕಾಯ್ದುಕೊಂಡ ಬಿಜೆಪಿ

ಅನಂತ ಕುಮಾರ್ ಹೆಗಡೆಗೆ ಪರ್ಯಾಯವಾಗಿ ಸೂಲಿಬೆಲೆ ಎಷ್ಟು ಸೂಕ್ತ ಎಂದು ಬಿಜೆಪಿ ರಾಜ್ಯ ನಾಯಕರು ಅಭಿಪ್ರಾಯ ಹೇಳಿದ್ದಾರಂತೆ. ಚಕ್ರವರ್ತಿ ಸೂಲಿಬೆಲೆ ಕೆಲವು ದಿನಗಳ ಹಿಂದೆ ಆರ್​ಎಸ್​ಎಸ್ ಕಚೇರಿಗೆ ಭೇಟಿ ನೀಡಿದ್ದರಂತೆ. ಸೂಲಿಬೆಲೆಗೆ ಸಾಂಭವ್ಯ ಟಿಕೆಟ್ ಬಗ್ಗೆ ರಾಜ್ಯ ನಾಯಕರ ಮಧ್ಯೆ ಚರ್ಚೆ ನಡೆದಿದೆ.

ಅನಂತಕುಮಾರ್ ಹೆಗಡೆಗೆ ಟಿಕೆಟ್ ನಿರಾಕರಿಸಲ್ಪಟ್ಟರೆ ಹಿಂದುತ್ವದ ಆಧಾರದಲ್ಲೇ ಬೇರೆಯವರಿಗೆ ಟಿಕೆಟ್ ನೀಡಬೇಕಾಗುತ್ತದೆ. ಹೀಗಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆಗೆ ಸೂಲಿಬೆಲೆ ಹೆಸರು ಚಾಲ್ತಿಗೆ ಬಂದಿದೆ. ಸೂಲಿಬೆಲೆಗೆ ಟಿಕೆಟ್ ನೀಡಿದರೆ ಹಿಂದೂ ಮತಗಳು ಚದುರುವುದಿಲ್ಲ ಎಂಬ ಭಾವನೆ ಹಿನ್ನೆಲೆಯಲ್ಲಿ ಟಿಕೆಟ್​ ನೀಡುವ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಚಕ್ರವರ್ತಿ ಸೂಲಿಬೇಲೆ ಹೆಸರು ಘೋಷಿಸುತ್ತಾ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:44 pm, Mon, 11 March 24