ನಿಮ್ಮ ಕ್ಷೇತ್ರದಲ್ಲಿ ಲೀಡ್ ಕಡಿಮೆ ಆಗಿದ್ದರೆ ಸಮಸ್ಯೆ ಆಗಲಿದೆ: ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಗೆ

| Updated By: ವಿವೇಕ ಬಿರಾದಾರ

Updated on: Jun 09, 2024 | 9:01 AM

ಲೋಕಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್ ಕೊಡಿಸುವಲ್ಲಿ ವಿಫಲರಾದ ರಾಜ್ಯದ 17 ಸಚಿವರ ಕಾಂಗ್ರೆಸ್​ ಹೈಕಮಾಂಡ್​ ಗರಂ ಆಗಿದೆ. ಸೋಲಿನ ಪರಾಮರ್ಶೆಗೆ ಎಐಸಿಸಿ ಸಮಿತಿ ರಚಿಸಲು ನಿರ್ಧರಿಸಿದೆ. ಎಐಸಿಸಿ ಮಟ್ಟದ ಹಾಗೂ ರಾಜ್ಯ ನಾಯಕರು ಒಳಗೊಂಡ ಸಮಿತಿ ರಚನೆಯಾಗಲಿದ್ದು, ಕ್ಷೇತ್ರವಾರು ಮಾಹಿತಿ ಪಡೆದು ಪರಿಶೀಲನೆ ನಡೆಸಲಿದೆ.

ನಿಮ್ಮ ಕ್ಷೇತ್ರದಲ್ಲಿ ಲೀಡ್ ಕಡಿಮೆ ಆಗಿದ್ದರೆ ಸಮಸ್ಯೆ ಆಗಲಿದೆ: ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಗೆ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಜೂನ್​ 09: ಲೋಕಸಭೆ ಚುನಾವಣೆಯಲ್ಲಿ (Lok Sabha Election) ರಾಜ್ಯದಲ್ಲಿ ಕಾಂಗ್ರೆಸ್​ಗೆ​​ (Congress) ತಾನು ನಿರೀಕ್ಷಿಸಿದಷ್ಟು ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಆತಂರಿಕ ಸಮೀಕ್ಷೆಯಲ್ಲಿ ಎರಡಂಕಿ ದಾಟುತ್ತೇವೆ ಅಂತ ಅಂದುಕೊಂಡಿದ್ದ ಕಾಂಗ್ರೆಸ್​ ಗೆದ್ದಿದ್ದು ಮಾತ್ರ 9 ಸ್ಥಾನಮಾನಗಳನ್ನು ಮಾತ್ರ. ಪತ್ನಿ, ಪುತ್ರ ಹಾಗೂ ಸಂಬಂಧಿಕರೇ ಸ್ಪರ್ಧಿಸಿದ್ದರೂ ಅವರಿಗೆ ಲೀಡ್​ ಕೊಡಿಸಲು ಸಚಿವರಿಗೆ ಸಾಧ್ಯವಾಗಿಲ್ಲ. ಇದರಿಂದ ಹೈಕಮಾಂಡ್​ ವಿಚಲಿತವಾಗಿದ್ದು, ರಾಜ್ಯ ನಾಯಕರ ಮೇಲೆ ಗರಂ ಆಗಿದೆ. ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಭೇಟಿಗೆ ಬರುವ ಶಾಸಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ತಮ್ಮ ಭೇಟಿಗೆ ಬಂದ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ನಿಮ್ಮ ಕ್ಷೇತ್ರದಲ್ಲಿ ಎಷ್ಟು ಲೀಡ್ ಬಂದಿದೆ” ಎಂದು ಪ್ರಶ್ನಿಸುತ್ತಿದ್ದಾರೆ. ಲೀಡ್ ಕಡಿಮೆ ಬಂದಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆ ಆಗಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಇದು ಸಹಜವಾಗಿ ಶಾಸಕರಲ್ಲಿ ಆತಂಕ ಶುರುವಾಗಿದೆ. 18 ಕ್ಕೂ ಹೆಚ್ಚು ಸಚಿವರ ಕ್ಷೇತ್ರಗಳಲ್ಲಿ ಲೀಡ್ ಕಡಿಮೆ ಬಂದಿರುವ ಬಗ್ಗೆ ಹೈಕಮಾಂಡ್​ ಕೈ ಸೇರಿದೆ. ಬೂತ್ ಮಟ್ಟದಲ್ಲಿ ಪಕ್ಷ ಕೊಂಡೊಯ್ಯುವ ತಯಾರಿ‌ ಮಾಡಿಕೊಂಡಿದ್ದ ಕಾಂಗ್ರೆಸ್​ಗೆ ಸಚಿವರಿಂದಲೇ ಸರಿಯಾದ ಸಹಕಾರ ಸಿಕ್ಕಿಲ್ಲ ಎಂಬಂತಾಗಿದೆ.

ಸಮಿತಿ ರಚನೆಗೆ ನಿರ್ಧಾರ

ಕರ್ನಾಟಕದಲ್ಲಿ ಫಲಿತಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಸೋಲಿನ ಪರಾಮರ್ಶೆಗೆ ಎಐಸಿಸಿ ಸಮಿತಿ ರಚಿಸಲು ನಿರ್ಧರಿಸಿದೆ. ಎಐಸಿಸಿ ಮಟ್ಟದ ಹಾಗೂ ರಾಜ್ಯ ನಾಯಕರು ಒಳಗೊಂಡ ಸಮಿತಿ ರಚನೆಯಾಗಲಿದ್ದು, ಕ್ಷೇತ್ರವಾರು ಮಾಹಿತಿ ಪಡೆದು ಪರಿಶೀಲನೆ ನಡೆಸಲಿದೆ. ಯಾವ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ ಎಂದು ತಿಳಿದುಕೊಳ್ಳಲಾಗುತ್ತದೆ. ಬಳಿಕ ಆಯಾ ಕ್ಷೇತ್ರದ ಶಾಸಕರ ಮತ್ತು ಸಚಿವರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ತಮ್ಮ ಭವಿಷ್ಯಕ್ಕೆ ಯಾವುದೇ ಆತಂಕವಿಲ್ಲ ಎಂದು ಕೆಲವು ಸಚಿವರು ಭಾವಿಸಿದ್ದರು. ಆದರೆ ಸಮಿತಿ ರಚನೆ ಮೂಲಕ ಭವಿಷ್ಯಕ್ಕೂ ತೂಗುಗತ್ತಿ ನೇತಾಡುತ್ತಿದೆ.

ಎಚ್ಚರಿಕೆ ನೀಡಿದ ರಾಹುಲ್​ ಗಾಂಧಿ

ಲೋಕಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್ ಕೊಡಿಸುವಲ್ಲಿ ವಿಫಲರಾದ ರಾಜ್ಯದ 17 ಸಚಿವರಿಗೆ ವರಿಷ್ಠ ರಾಹುಲ್‌ ಗಾಂಧಿ ಕೆಂಗಣ್ಣು ಬೀರಿದ್ದು, ಈ ಸಚಿವರು ಪ್ರತಿನಿಧಿಸಿದ್ದ ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವೇನು ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ನಾಯಕತ್ವಕ್ಕೆ ತಾಕೀತು ಮಾಡಿ ದ್ದರು.

ರಾಹುಲ್ ಗಾಂಧಿ ಅವರು ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ನಾಯಕರು, ಸಚಿವರು, ನೂತನ ಸಂಸ ದರು ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ನಡೆಸಿದ ಸಭೆ ವೇಳೆ ಈ ನಿರ್ದೇಶನ ನೀಡಿದ್ದರು. ಇದರಿಂದ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ತೋರದ ಸಚಿವರ ಸ್ಥಾನಗಳಿಗೆ ಕುತ್ತು ಬರುವುದೇ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ