ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಶೀಘ್ರ ಫೈನಲ್: ಜನವರಿ ಕೊನೆಯಲ್ಲಿ ಅಮಿತ್ ಶಾ ಜತೆ ಕುಮಾರಸ್ವಾಮಿ ಸಭೆ

| Updated By: Ganapathi Sharma

Updated on: Jan 25, 2024 | 9:59 AM

ಮಂಡ್ಯದಲ್ಲಿ ಜೆಡಿಎಸ್‌‌, ಬಿಜೆಪಿ ಮೈತ್ರಿಗೆ ವಿರೋಧ ಹೆಚ್ಚಾಗುವ ಸುಳಿವು ದೊರೆತಿದೆ. ಕ್ಷೇತ್ರ ಹಂಚಿಕೆ ಹತ್ತಿರವಾಗುತ್ತಿದ್ದಂತೆಯೇ ಅಸಮಾಧಾನಿತ ನಾಯಕರು ಅಲರ್ಟ್ ಆಗಿದ್ದಾರೆ. ಸರಣಿ ಸಭೆಗಳ ಮೂಲಕ ಮುಂದಿನ ಹೆಜ್ಜೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಶೀಘ್ರ ಫೈನಲ್: ಜನವರಿ ಕೊನೆಯಲ್ಲಿ ಅಮಿತ್ ಶಾ ಜತೆ ಕುಮಾರಸ್ವಾಮಿ ಸಭೆ
ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಶೀಘ್ರ ಫೈನಲ್: ಜನವರಿ ಕೊನೆಯಲ್ಲಿ ಅಮಿತ್ ಶಾ ಜತೆ ಕುಮಾರಸ್ವಾಮಿ ಸಭೆ
Follow us on

ಬೆಂಗಳೂರು, ಜನವರಿ 25: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Elections 2024) ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ (BJP, JDS seat sharing) ಶೀಘ್ರ ಅಂತಿಮಗೊಳ್ಳಲಿದೆ. ಜನವರಿ 27ರ ನಂತರ ದೆಹಲಿಯಲ್ಲಿ ಉಭಯ ಪಕ್ಷಗಳ ನಾಯಕರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಈಗಾಗಲೇ ಕ್ಷೇತ್ರದ ಹಂಚಿಕೆ ಕುರಿತು ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಬಿಜೆಪಿ ನಾಯಕರ ಜೊತೆ ಹೆಚ್​ಡಿ ಕುಮಾರಸ್ವಾಮಿ ಎರಡು ಸುತ್ತಿನ ಚರ್ಚೆ ಮಾಡಿದ್ದಾರೆ.

ನಾಲ್ಕು ಕ್ಷೇತ್ರಗಳ ಬದಲು 3 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಜೆಡಿಎಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ, ಹಾಸನ, ಮಂಡ್ಯ ಕ್ಷೇತ್ರ ಬಿಟ್ಟು ಕೊಡಲು ಬಿಜೆಪಿ ಕೂಡ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ಕ್ಷೇತ್ರ ತೆಗೆದುಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ. ಮಂಡ್ಯ, ಹಾಸನ ಸೇರಿ ಐದು ಲೋಕಸಭಾ ಕ್ಷೇತ್ರಗಳ ಸಮೀಕ್ಷೆಯನ್ನು ಜೆಡಿಎಸ್ ಮಾಡಿಸಿದೆ. ಈ ಪೈಕಿ ನಾಲ್ಕು ಲೋಕಸಭಾ ಕ್ಷೇತ್ರಗಳ ಸಮೀಕ್ಷಾ ವರದಿ ಜೆಡಿಎಸ್​ಗೆ ಪೂರಕವಾಗಿ ಬಂದಿದೆ. ಹೀಗಾಗಿ ಜೆಡಿಎಸ್ ಗೆಲ್ಲಲು ಅವಕಾಶ ಇರುವ ಮೂರೂ ಕ್ಷೇತ್ರಗಳನ್ನು ನೀಡುವಂತೆ ಕುಮಾರಸ್ವಾಮಿ ಬಿಜೆಪಿ ನಾಯಕರ ಬಳಿ ಕೇಳಿದ್ದಾರೆ. ಹೀಗಾಗಿ 27 ನಂತರ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಜೊತೆ ಕುಮಾರಸ್ವಾಮಿ ಅಂತಿಮ ಸಭೆ ನಡೆಸಿ ಕ್ಷೇತ್ರ ಹಂಚಿಕೆಯ ಅಂತಿಮ ಘೋಷಣೆ ಮಾಡುವ ಸಾಧ್ಯತೆ ಇದೆ.

ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಮಂಡ್ಯದಿಂದ ಕುಮಾರಸ್ವಾಮಿ ಅಥವಾ ಮಾಜಿ ಸಚಿವ ಸಿಎಸ್ ಪುಟ್ಟರಾಜು ಸ್ಪರ್ಧಿಸುವುದು ಬಹುತೇಕ ಅಂತಿಮಗೊಂಡಿದೆ.

ಮಂಡ್ಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಮತ್ತೊಂದೆಡೆ ಮಂಡ್ಯದಲ್ಲಿ ಜೆಡಿಎಸ್‌‌, ಬಿಜೆಪಿ ಮೈತ್ರಿಗೆ ವಿರೋಧ ಹೆಚ್ಚಾಗುವ ಸುಳಿವು ದೊರೆತಿದೆ. ಕ್ಷೇತ್ರ ಹಂಚಿಕೆ ಹತ್ತಿರವಾಗುತ್ತಿದ್ದಂತೆಯೇ ಅಸಮಾಧಾನಿತ ನಾಯಕರು ಅಲರ್ಟ್ ಆಗಿದ್ದಾರೆ. ಸರಣಿ ಸಭೆಗಳ ಮೂಲಕ ಮುಂದಿನ ಹೆಜ್ಜೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಇದರ ಅಂಗವಾಗಿ ಮಂಡ್ಯ ಸಂಸದೆ ಸುಮಲತಾ ನಿವಾಸದಲ್ಲಿಂದು ಮಹತ್ವದ ಸಭೆ‌ ಆಯೋಜಿಸಲಾಗಿದೆ. ಬೆಂಗಳೂರಿನ ಸುಮಲತಾ ನಿವಾಸದಲ್ಲಿ ಮಂಡ್ಯ ಬಿಜೆಪಿ ಅಸಮಾಧಾನಿತ ನಾಯಕರ‌ ಸಭೆ ನಡೆಯಲಿದೆ. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸೇರಿದಂತೆ ಜಿಲ್ಲೆಯ ಕೆಲವು ನಾಯಕರು ಮಧ್ಯಾಹ್ನ 3:30ಕ್ಕೆ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್​ಗೆ ಟಿಕೆಟ್ ಡೌಟ್; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ರೇಸ್​ನಲ್ಲಿ ಬ್ರಿಜೇಶ್ ಚೌಟಾ

ಮಂಡ್ಯ ಕ್ಷೇತ್ರ ಜೆಡಿಎಸ್‌‌ಗೆ ಬಿಟ್ಟು ಕೊಡುವುದು ಬಹುತೇಕ ಖಚಿತವಾದ ಹಿನ್ನೆಲೆ ಈ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಖಂಡರ ಅಭಿಪ್ರಾಯ ಸಂಗ್ರಹಿಸಲಿರುವ ಸಂಸದೆ ಸುಮಲತಾ, ಮಂಡ್ಯ ಕ್ಷೇತ್ರ ಜೆಡಿಎಸ್‌ ಪಾಲಾದ್ರೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಿಸಲಿದ್ದಾರೆ. ಮುಂದಿನ ನಿರ್ಧಾರ ಕೈಗೊಂಡಾಗ ಜತೆಗೆ ಇರುತ್ತೀರಾ ಎಂದು ಸುಮಲತಾ ಅವರು ಇತರ ನಾಯಕರ ಬಳಿ ಕೇಳುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ