Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇವಣ್ಣ ಏಕೆ ಈ ಬಾರಿ ಕೇವಲ 2,500 ಮತಗಳಿಂದ ಗೆದ್ದರು: ದೇವೇಗೌಡ ಹೇಳಿದ್ದಿಷ್ಟು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜೆಡಿಎಸ್​​ ವರಿಷ್ಠ ಹೆಚ್​​ಡಿ ದೇವೇಗೌಡ, ಚುನಾವಣೆಯಲ್ಲಿ ರೇವಣ್ಣ ಯಾಕೆ 2,500 ಮತಗಳಿಂದ ಗೆದ್ದರು. ಜಿಲ್ಲೆಯಲ್ಲಿ ಹೈನುಗಾರಿಕೆಗೆ ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ರೇವಣ್ಣ ತುಂಬಾ ಕೆಲಸ ಮಾಡುತ್ತಾರೆ, ಆದರೆ ಸ್ವಲ್ಪ ಕೋಪ ಜಾಸ್ತಿ ಎಂದು ಹೇಳಿದ್ದಾರೆ.

ರೇವಣ್ಣ ಏಕೆ ಈ ಬಾರಿ ಕೇವಲ 2,500 ಮತಗಳಿಂದ ಗೆದ್ದರು: ದೇವೇಗೌಡ ಹೇಳಿದ್ದಿಷ್ಟು
ಮಾಜಿ ಸಚಿವ ಹೆಚ್​​ಡಿ ರೇವಣ್ಣ, ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2024 | 9:42 PM

ಹಾಸನ, ಜನವರಿ 24: ಚುನಾವಣೆಯಲ್ಲಿ ರೇವಣ್ಣ ಯಾಕೆ 2,500 ಮತಗಳಿಂದ ಗೆದ್ದರು. ಜಿಲ್ಲೆಯಲ್ಲಿ ಹೈನುಗಾರಿಕೆಗೆ ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ರೇವಣ್ಣ ತುಂಬಾ ಕೆಲಸ ಮಾಡುತ್ತಾರೆ, ಆದರೆ ಸ್ವಲ್ಪ ಕೋಪ ಜಾಸ್ತಿ. ಯಾವ ಮಂತ್ರಿಯೂ ರೇವಣ್ಣಗೆ ಸರಿಸಾಟಿಯಾಗಲೂ ಸಾಧ್ಯವಿಲ್ಲ. ಆದರೆ ಮುಂಗೋಪ ಎಂದು ಜೆಡಿಎಸ್​​ ವರಿಷ್ಠ ಹೆಚ್​​ಡಿ ದೇವೇಗೌಡ (HD Deve Gowda) ಹೇಳಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮೆಲ್ಲರ ಮುಂದೆ ನಾನು ತುಂಬಾ ವಿನಯದಿಂದ ಹೇಳುತ್ತೇನೆ. ಎಷ್ಟೇ ಕೆಲಸ ಮಾಡಿದರೂ ಕೋಪ‌ ಇರಬಾರದು. ಮಾತನ್ನು ಸ್ವಲ್ಪ ಮಾರ್ಪಾಡು ಮಾಡಿಕೊಂಡರೆ ತುಂಬಾ ಒಳ್ಳೇದು ಎಂದು ರೇವಣ್ಣಗೆ ಕಿವಿಮಾತು ಹೇಳಿದ್ದಾರೆ.

ನಿನ್ನೆ ನನ್ನ ಲೆಟರ್ ತಗೊಂಡು ಝೋನಲ್ ಆಫೀಸರ್ ಭೇಟಿ ಮಾಡಿ ತಡವಾಗಿ ಬಂದರೂ ನಾನು ಎಲ್ಲಿದ್ದಾರೆ ಅಂತ ಕೇಳಿದೆ. ಹೀಗೆ ತುಂಬಾ ಕೆಲಸ ಮಾಡುತ್ತಾರೆ. ಅವರು ಏನೇನ್​ ಮಾಡಿದ್ದಾರೆ ಎನ್ನುವುದನ್ನು ಪಟ್ಟಿ ಮಾಡುವುದಾದರೆ ಬಹುಶಃ ಈ ರಾಜ್ಯದಲ್ಲಿ ಯಾವ ಮಂತ್ರಿಯೂ ಅವರಿಗೆ ಸರಿಸಾಟಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ದೇಶ ಉಳಿಯಬೇಕಾದರೆ ಮೋದಿ ಬೇಕು: ಮಾಜಿ ಸಚಿವ ಹೆಚ್​.ಡಿ.ರೇವಣ್ಣ

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಮಾತನಾಡಿ, ನಾವು ಬದುಕಿರುವವರೆಗೂ ಮುಸ್ಲಿಮರನ್ನು ಕೈಬಿಡಲ್ಲ. ಸಂಕಷ್ಟದ ಕಾಲದಲ್ಲಿ ಮುಸ್ಲಿಮರು ನಮ್ಮ ಕೈಹಿಡಿದಿದ್ದಾರೆ. ಈಗ ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ಕೊಡುತ್ತೇವೆ ಅಂತಾರೆ. ಲೋಕಸಭೆ ಚುನಾವಣೆ ಬಳಿಕ ಮುಸ್ಲಿಮರಿಗೆ 10 ರೂ. ಕೊಡಲ್ಲ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ನನ್ನ ಒಂದು ಸಣ್ಣ ತಪ್ಪು ಕಂಡು ಹಿಡಿಯಲು ಆಗಲಿಲ್ಲ: ಜೆಡಿಎಸ್​​ ವರಿಷ್ಠ ಹೆಚ್​ಡಿ ದೇವೇಗೌಡ

ಲೋಕಸಭಾ ಚುನಾವಣೆಯಲ್ಲಿ ನಮಗೆ ಸೀಟ್ ಬೇಕಾಗಿಲ್ಲ. ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಮಂತ್ರಿ ಮಾಡಬೇಕು. ಈ ದೇಶ ಉಳಿಯಬೇಕಾದರೆ ಮೋದಿ ಬೇಕು. ದೇವೇಗೌಡರಿಗೆ ಅತಿಹೆಚ್ಚು ಗೌರವ ಕೊಡುವ ಪ್ರಧಾನಿ ಮೋದಿ, ಹಾಸನ ಕ್ಷೇತ್ರದಿಂದ ಯಾರೇ ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ.

ಅಧಿಕಾರಕ್ಕೆ ಬಂದರೆ ಕ್ವಿಂಟಾಲ್ ಕೊಬ್ಬರಿ 15,000 ರೂ. ಎಂದಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈಗಿನ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಅವರು ಹೇಳಿದ್ದಾರೋ ಇಲ್ವೋ ಚೌಡೇಶ್ವರಿ ಮೇಲೆ ಆಣೆ ಮಾಡಲಿ. ಆಗ ದೇವೇಗೌಡರನ್ನು ಮೋದಿ ಬಳಿಗೆ ಕರೆದೊಯ್ಯೋಣ ಎಂದಿದ್ದೆ. ಅದೇ ರೀತಿ ಮೋದಿ ಬಳಿ ಹೆಚ್​ಡಿಡಿ ಕರೆದುಕೊಂಡು ಹೋದೆವು.

ಇದನ್ನೂ ಓದಿ: ಫೆ.8ರಂದು‌ ಸಿಎಂ 2ನೇ ಹಂತದ ಜನಸ್ಪಂದನಾ ಕಾರ್ಯಕ್ರಮ: ಮೆಜೆಸ್ಟಿಕ್​ನಿಂದ ವಿಧಾನಸೌಧಕ್ಕೆ ಬಸ್ ಸೌಲಭ್ಯ

3 ದಿನದಲ್ಲಿ ಕ್ಯಾಬಿನೆಟ್‌ಗೆ ತಂದು ಕೊಬ್ಬರಿ ಬೆಲೆ ಜಾಸ್ತಿ ಮಾಡಿದರು. ಈ ಕ್ವಿಂಟಾಲ್ ಕೊಬ್ಬರಿಗೆ 12 ಸಾವಿರ ರೂ. ಘೋಷಣೆ ಮಾಡಿದರು. ನಿಮಗೆ ರೈತರ ಪರ ಕಾಳಜಿಯಿದ್ದರೆ ಹೆಚ್ಚುವರಿ 3 ಸಾವಿರ ರೂ. ಘೋಷಿಸಿ. ಇಲ್ಲವಾದರೆ ಚುನಾವಣೆ ಗೆಲ್ಲಲು ಸುಳ್ಳು ಹೇಳಿದ್ದೆವು ಅಂತಾ ಹೇಳಿ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ