ದೆಹಲಿ, ಹರ್ಯಾಣ, ಗುಜರಾತ್ ಮತ್ತು ಗೋವಾದಲ್ಲಿ ಎಎಪಿ- ಕಾಂಗ್ರೆಸ್ ಸೀಟು ಹಂಚಿಕೆ; ಯಾವ ಕ್ಷೇತ್ರ ಯಾರಿಗೆ?
ಎಎಪಿ ಕಾಂಗ್ರೆಸ್ ಸೀಟು ಒಪ್ಪಂದದ ಪ್ರಕಾರ, ಗುಜರಾತ್‌ನ 26 ಲೋಕಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್ ತನ್ನ 24 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.ಭರೂಚ್ ಮತ್ತು ಭಾವನಗರದಲ್ಲಿ ಎಎಪಿ ಸ್ಪರ್ಧಿಸಲಿದೆ. ಹರ್ಯಾಣದಲ್ಲಿಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಎಎಪಿ ತನ್ನ ಅಭ್ಯರ್ಥಿಗಳನ್ನು ಕುರುಕ್ಷೇತ್ರದಲ್ಲಿ ಕಣಕ್ಕಿಳಿಸಲಿದೆ. ಚಂಡೀಗಢದ ಏಕೈಕ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್‌ಗೆ ಹಂಚಿಕೆ ಮಾಡಲಾಗಿದೆ.
ದೆಹಲಿ ಫೆಬ್ರವರಿ 24 : ಮುಂಬರುವ ಲೋಕಸಭೆ ಚುನಾವಣೆಗೆ (Lok sabha Election) ಮುನ್ನ ಇಂಡಿಯಾ ಬ್ಲಾಕ್‌ಗೆ (INDIA bloc) ಪ್ರಮುಖ ಉತ್ತೇಜನ ನೀಡುವಂತೆ, ಆಮ್ ಆದ್ಮಿ ಪಕ್ಷ (AAP) ಮತ್ತು ಕಾಂಗ್ರೆಸ್ (Congress) ಶನಿವಾರ ದೆಹಲಿ, ಗುಜರಾತ್, ಹರ್ಯಾಣ, ಗೋವಾ ಮತ್ತು ಚಂಡೀಗಢದಂತಹ ಇತರ ರಾಜ್ಯಗಳಿಗೆ ತಮ್ಮ ಸೀಟು ಹಂಚಿಕೆ ಒಪ್ಪಂದವನ್ನು ಘೋಷಿಸಿವೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ಅವರು ತಮ್ಮ ಪಕ್ಷವು ದೆಹಲಿಯಲ್ಲಿ ಮೂರು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ ನಾಲ್ಕರಲ್ಲಿ ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಚಾಂದಿನಿ ಚೌಕ್, ಈಶಾನ್ಯ ದೆಹಲಿ ಮತ್ತು ವಾಯುವ್ಯ ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿ ಸ್ಥಾನಗಳಲ್ಲಿ ಎಎಪಿ ಸ್ಪರ್ಧಿಸಲಿದೆ.
ಒಪ್ಪಂದದ ಪ್ರಕಾರ, ಗುಜರಾತ್‌ನ 26 ಲೋಕಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್ ತನ್ನ 24 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.ಭರೂಚ್ ಮತ್ತು ಭಾವನಗರದಲ್ಲಿ ಎಎಪಿ ಸ್ಪರ್ಧಿಸಲಿದೆ. ಹರ್ಯಾಣದಲ್ಲಿಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಎಎಪಿ ತನ್ನ ಅಭ್ಯರ್ಥಿಗಳನ್ನು ಕುರುಕ್ಷೇತ್ರದಲ್ಲಿ ಕಣಕ್ಕಿಳಿಸಲಿದೆ. ಚಂಡೀಗಢದ ಏಕೈಕ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್‌ಗೆ ಹಂಚಿಕೆ ಮಾಡಲಾಗಿದೆ.ಗೋವಾದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಜಂಟಿ ಸುದ್ದಿಗೋಷ್ಠಿ
Delhi | Congress and AAP announce seat-sharing in Delhi, Gujarat, Haryana, Chandigarh and Goa
In Delhi (7 seats), Congress to contest on 3 and AAP on 4 In Gujarat (26 seats), Congress to contest on 24 and AAP on 2 (in Bharuch and Bhavnagar) In Haryana (10 seats), Congress to… pic.twitter.com/vCauAdvkUm
— ANI (@ANI) February 24, 2024
ಭರೂಚ್ ಜನರಲ್ಲಿ ಕ್ಷಮೆಯಾಚಿಸಿದ ಮುಮ್ತಾಜ್ ಪಟೇಲ್
ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಹಿರಿಯ ನಾಯಕ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರಿ ಮುಮ್ತಾಜ್ ಪಟೇಲ್ ಟ್ವೀಟ್ ಮಾಡಿ, “ಭರೂಚ್ ಲೋಕಸಭಾ ಸ್ಥಾನವನ್ನು ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗದಿದ್ದಕ್ಕಾಗಿ ನಮ್ಮ ಜಿಲ್ಲಾ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ನಿಮ್ಮ ನಿರಾಶೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ಒಟ್ಟಾಗಿಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ನಾವು ಮರುಸಂಘಟಿಸುತ್ತೇವೆ. ಅಹ್ಮದ್ ಪಟೇಲ್ ಅವರ 45 ವರ್ಷಗಳ ಪರಂಪರೆ ವ್ಯರ್ಥವಾಗಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವರ್ಗಾವಣೆ ನೀತಿ ಅನುಷ್ಠಾನಕ್ಕೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಆಯೋಗ ನಿರ್ದೇಶನ
ಮುಕುಲ್ ವಾಸ್ನಿಕ್ ಅವರು ಮುಮ್ತಾಜ್ ಪಟೇಲ್ ಅವರನ್ನು ಸಮಾಧಾನಿಸಲು ಪ್ರಯತ್ನಿಸಿದ್ದು, ಎಲ್ಲಾ ಕಾರ್ಯಕರ್ತರು ಮತ್ತು ನಾಯಕರು ಎಎಪಿಗೆ ಭರೂಚ್ ಸ್ಥಾನವನ್ನು ನೀಡುವ ಪಕ್ಷದ ನಿರ್ಧಾರಕ್ಕೆ ಸಮ್ಮತಿ ನೀಡಿದ್ದಾರೆ. ಸುದೀರ್ಘ ಚರ್ಚೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ