ವರ್ಗಾವಣೆ ನೀತಿ ಅನುಷ್ಠಾನಕ್ಕೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಆಯೋಗ ನಿರ್ದೇಶನ
ರಾಜ್ಯ ಸರ್ಕಾರಗಳು ಇದೇ ಸಂಸದೀಯ ಕ್ಷೇತ್ರದ ವ್ಯಾಪ್ತಿಯ ಪಕ್ಕದ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ/ ನಿಯೋಜನೆ ಮಾಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆಯೋಗವು ತನ್ನ ಅಸ್ತಿತ್ವದಲ್ಲಿರುವ ವರ್ಗಾವಣೆ ನೀತಿಯನ್ನು ಬಲಪಡಿಸಿದೆ ಎಂದು ಭಾರತದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ತಿಳಿಸಿದೆ
ದೆಹಲಿ ಫೆಬ್ರವರಿ 24: ಲೋಕಸಭೆ ಚುನಾವಣೆಗೆ (Lok sabha Election) ಮುನ್ನ, 3 ವರ್ಷ ಪೂರೈಸಿದ ನಂತರ ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ಅದೇ ಸಂಸದೀಯ ಕ್ಷೇತ್ರದೊಳಗೆ ಬೇರೆ ಜಿಲ್ಲೆಯಲ್ಲಿ ನಿಯೋಜಿಸದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ (Election Commission of India)ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಲಾಗಿದೆ. “ರಾಜ್ಯ ಸರ್ಕಾರಗಳು ಇದೇ ಸಂಸದೀಯ ಕ್ಷೇತ್ರದ ವ್ಯಾಪ್ತಿಯ ಪಕ್ಕದ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ/ ನಿಯೋಜನೆ ಮಾಡುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆಯೋಗವು ತನ್ನ ಅಸ್ತಿತ್ವದಲ್ಲಿರುವ ವರ್ಗಾವಣೆ ನೀತಿಯನ್ನು (transfer policy) ಬಲಪಡಿಸಿದೆ ಎಂದು ಭಾರತದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ಹೇಳಿದೆ. ಮುಂಬೈ ಮಹಾನಗರ ಪಾಲಿಕೆಯ ಆಯುಕ್ತರು ಅದೇ ಹುದ್ದೆಯಲ್ಲಿ ಮೂರು ವರ್ಷ ಪೂರೈಸಿರುವ ಪ್ರಕರಣದಲ್ಲಿ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳು ಇಲ್ಲಿವೆ.
“ಅಸ್ತಿತ್ವದಲ್ಲಿರುವ ಸೂಚನೆಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಮೂಲಕ, ಆಯೋಗವು ಎರಡು ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ, ಎಲ್ಲಾ ರಾಜ್ಯಗಳು ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳನ್ನು ಅದೇ ಸಂಸದೀಯ ಕ್ಷೇತ್ರದೊಳಗೆ ನಿಯೋಜನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ.” ಎಂದು ಪ್ರಕಟಣೆ ತಿಳಿಸಿದೆ.
Election Commission of India (ECI) instructed all State Govts to ensure that Officers who are transferred out of the district after completing 3 (three) years are “NOT POSTED” in another district within ‘same Parliamentary Constituency’. #Election2024 pic.twitter.com/MOO6YGfdQa
— Hari Krishnan Pongilath (@h_pongilath) February 24, 2024
ಆಯೋಗದ ವರ್ಗಾವಣೆ ನೀತಿಯನ್ನು ಅಕ್ಷರಶಃ ಪಾಲಿಸಬೇಕು ಎಂದು ಹೇಳಲಾಗಿದೆ. ಆಯೋಗದ ಪೂರ್ವ ಸೂಚನೆಗಳಿಗೆ ಅನುಸಾರವಾಗಿ ಈಗಾಗಲೇ ಜಾರಿಗೊಳಿಸಲಾದ ವರ್ಗಾವಣೆಗಳು ಮತ್ತು ನಿಯೋಜನೆಗಳಿಗೆ ಹಿಂದಿನ ನಿಯಮ ಅನ್ವಯಿಸುತ್ತದೆ.
“ಚುನಾವಣಾ ಆಯೋಗದ ನೀತಿಯ ಪ್ರಕಾರ, ತಮ್ಮ ತವರು ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಅಥವಾ ಮೂರು ವರ್ಷಗಳನ್ನು ಒಂದು ಸ್ಥಳದಲ್ಲಿ ಪೂರ್ಣಗೊಳಿಸಿದ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ನಿರ್ದೇಶಿಸಲಾಗಿದೆ. ಇದರಲ್ಲಿ ನೇರವಾಗಿ ಅಥವಾ ಮೇಲ್ವಿಚಾರಣಾ ಕೆಲಸಕ್ಕೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿರುವ ಅಧಿಕಾರಿಗಳು ಸೇರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿ ಕಾಯ್ದೆ ರದ್ದು: ಅಸ್ಸಾಂ ಸರ್ಕಾರದಿಂದ ಐತಿಹಾಸಿಕ ನಿರ್ಧಾರ
ಚುನಾವಣೆಯಲ್ಲಿ ಯಾವುದೇ ಕಾರ್ಯಕ್ಕೆ ಧಕ್ಕೆಯಾಗದಂತೆ ಆಯೋಗವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಿದೆ. ಇತ್ತೀಚೆಗೆ ನಡೆದ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಆಯೋಗವು ರಾಜ್ಯ(ಗಳಲ್ಲಿ) ವಿವಿಧ ಅಧಿಕಾರಿಗಳನ್ನು, ಹಿರಿಯ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದನ್ನು ನೆನಪಿಸಿಕೊಳ್ಳಬಹುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Sat, 24 February 24