Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆ.27ರಂದು ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಮೋದಿ ಮೆಗಾ ರ‍್ಯಾಲಿ; ಇಲ್ಲಿದೆ ಎರಡು ದಿನಗಳ ಭೇಟಿಯ ವೇಳಾಪಟ್ಟಿ

ಪ್ರಧಾನಿ ಕಚೇರಿ ಪ್ರಕಾರ, ಫೆಬ್ರವರಿ 27 ರಂದು ಮಧ್ಯಾಹ್ನ ಕೊಯಮತ್ತೂರಿನ ಸೂಲೂರು ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪಲ್ಲಡಂಗೆ ತೆರಳಲಿದ್ದಾರೆ. ಮಧ್ಯಾಹ್ನ 2.45ರ ಸುಮಾರಿಗೆ ಮಾದಾಪುರ ತಲುಪಿ, ರಾಜ್ಯ ಬಿಜೆಪಿ ಆಯೋಜಿಸಿರುವ ಮೆಗಾ ರ‍್ಯಾಲಿಯಲ್ಲಿ ಭಾಗವಹಿಸಿ, ನಂತರ ಮಧುರೈಗೆ ತೆರಳಲಿದ್ದಾರೆ.

ಫೆ.27ರಂದು ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಮೋದಿ ಮೆಗಾ ರ‍್ಯಾಲಿ; ಇಲ್ಲಿದೆ ಎರಡು ದಿನಗಳ ಭೇಟಿಯ ವೇಳಾಪಟ್ಟಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 24, 2024 | 2:22 PM

ತಿರುಪ್ಪೂರ್ ಫೆಬ್ರವರಿ 24: ಪ್ರಧಾನಿ ನರೇಂದ್ರ ಮೋದಿ (Narendra Modi) ಫೆಬ್ರವರಿ 27 ರಂದು ತಮಿಳುನಾಡಿನ (Tamil nadu) ತಿರುಪ್ಪೂರ್‌ಗೆ ಭೇಟಿ ನೀಡಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರ ಎನ್ ಮಣ್ಣ್ ಎನ್ ಮಕ್ಕಳ್ (ನನ್ನ ಮಣ್ಣು, ನನ್ನ ಜನ) ಯಾತ್ರೆ ಮುಕ್ತಾಯಗೊಳ್ಳುವ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಣ್ಣಾಮಲೈ ಅವರು ರಾಜ್ಯದ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳ ಪ್ರವಾಸವನ್ನು ಪಲ್ಲಡಂ ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತಾಯಗೊಳಿಸಲಿದ್ದಾರೆ. 13 ಲಕ್ಷ ಜನರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ದೊಡ್ಡ ರೀತಿಯಲ್ಲಿ ಕೊಡುಗೆ ನೀಡಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ನಾಯಕರ ಪ್ರಕಾರ ಇದು ತಮಿಳುನಾಡಿನಲ್ಲಿ ಬಿಜೆಪಿ ಆಯೋಜಿಸಿರುವ ಅತಿದೊಡ್ಡ ಸಾರ್ವಜನಿಕ ಸಭೆಯಾಗಿದೆ. ಐದು ಲಕ್ಷ ಜನರಿಗೆ ಆಸನ ವ್ಯವಸ್ಥೆ ಇರುತ್ತದೆ ಎಂದು ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ . ಪಲ್ಲಡಂ ಸಮೀಪದ ಮಾದಾಪುರ ಗ್ರಾಮದಲ್ಲಿ ಪ್ರಧಾನಿ ಪಾಲ್ಗೊಳ್ಳುವ ಸಾರ್ವಜನಿಕ ಸಭೆಗೆ ಬಿಜೆಪಿ ವಿಶಾಲವಾದ ಮೈದಾನವನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ. ಈ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಪ್ರಧಾನಿ ಪ್ರವಾಸದ ವೇಳಾಪಟ್ಟಿ

ಪ್ರಧಾನಿ ಕಚೇರಿ ಪ್ರಕಾರ, ಫೆಬ್ರವರಿ 27 ರಂದು ಮಧ್ಯಾಹ್ನ ಕೊಯಮತ್ತೂರಿನ ಸೂಲೂರು ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪಲ್ಲಡಂಗೆ ತೆರಳಲಿದ್ದಾರೆ. ಮಧ್ಯಾಹ್ನ 2.45ರ ಸುಮಾರಿಗೆ ಮಾದಾಪುರ ತಲುಪಿ, ರಾಜ್ಯ ಬಿಜೆಪಿ ಆಯೋಜಿಸಿರುವ ಮೆಗಾ ರ‍್ಯಾಲಿಯಲ್ಲಿ ಭಾಗವಹಿಸಿ, ನಂತರ ಮಧುರೈಗೆ ತೆರಳಲಿದ್ದಾರೆ. ಮಧುರೈನ ಟಿವಿಎಸ್ ಲಕ್ಷ್ಮಿ ಸ್ಕೂಲ್​​ನಲ್ಲಿ ‘ಡಿಜಿಟಲ್ ಮೊಬಿಲಿಟಿ ಇನಿಶಿಯೇಟಿವ್ ಫಾರ್ ಆಟೋಮೋಟಿವ್ ಎಂಎಸ್‌ಎಂಇ’ ಎಂಬ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಮೋದಿ ರಾತ್ರಿ ಮಧುರೈನಲ್ಲಿ ತಂಗಲಿದ್ದಾರೆ. ಫೆ.28ರಂದು ಬೆಳಗ್ಗೆ ತೂತುಕುಡಿಗೆ ತೆರಳಿ ಅಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲಿಂದ ತಿರುನಲ್ವೇಲಿಗೆ ತೆರಳಲಿರುವ ಪ್ರಧಾನಿ ಮೋದಿ, ದಕ್ಷಿಣ ಜಿಲ್ಲೆಯಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಬಳಿಕ ಕೇರಳದ ತಿರುವನಂತಪುರಕ್ಕೆ ತೆರಳಲಿದ್ದಾರೆ.

ದಕ್ಷಿಣದಲ್ಲಿ ಸ್ಥಾನ ಹೆಚ್ಚಿಸಿಕೊಳ್ಳಲು ಬಿಜೆಪಿ ಪ್ಲಾನ್

ಬಿಜೆಪಿ ದುರ್ಬಲ ಕ್ಷೇತ್ರಗಳನ್ನು ಬಲಪಡಿಸಲು ನಿರ್ದಿಷ್ಟ ಯೋಜನೆಗಳನ್ನು ರೂಪಿಸಿದೆ, ಜೊತೆಗೆ ಹಿಂದಿನ ಚುನಾವಣೆಗಳಲ್ಲಿ ಸ್ವಲ್ಪ ಅಂತರದಲ್ಲಿ ಕಳೆದುಕೊಂಡ ಸ್ಥಾನಗಳನ್ನು ಮರಳಿ ಪಡೆಯಲು ಕಾರ್ಯತಂತ್ರ ರೂಪಿಸಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಸ್ತಿತ್ವವನ್ನು ಹೆಚ್ಚಿಸಲು ಸಂಘಟಿತ ಪ್ರಯತ್ನವನ್ನು ಮಾಡಲಾಗಿದೆ, ಪ್ರತಿ ಪ್ರದೇಶಕ್ಕೂ ಸೂಕ್ತವಾದ ತಂತ್ರಗಳನ್ನು ಮಾಡಲಾಗಿದೆ. ಪಕ್ಷವು ತನ್ನ ಚುನಾವಣಾ ಪ್ರಚಾರವನ್ನು ಹೆಚ್ಚಿಸಲಿದ್ದು ಸಮಸ್ಯೆಗಳನ್ನು ಪರಿಹರಿಸಲು ಉತ್ಸುಕವಾಗಿದೆ. ಜೊತೆಗೆ ಎನ್‌ಡಿಎ ಘಟಕಗಳೊಂದಿಗೆ ಸಂಬಂಧವನ್ನು ಬಲಪಡಿಸುವುದು ಮತ್ತು ಅದರ ಬೆಂಬಲದ ನೆಲೆಯನ್ನು ವಿಸ್ತರಿಸಲು ಫಲಾನುಭವಿ ವರ್ಗಗಳೊಂದಿಗೆ ಸಂಪರ್ಕ ಸಾಧಿಸುವ ಕೆಲಸ ಮಾಡಲಿದೆ ಈ ಕಾರ್ಯತಂತ್ರದ ಮೂಲಕ ಬಿಜೆಪಿ ಆರ್ಥಿಕವಾಗಿ ಹಿಂದುಳಿದವರು, ಯುವಕರು, ಅಗತ್ಯ ಸೇವೆಗಳ ಪೂರೈಕೆದಾರರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಲಿದೆ.

ಇದನ್ನೂ ಓದಿ: ದೆಹಲಿ, ಹರ್ಯಾಣ, ಗುಜರಾತ್ ಮತ್ತು ಗೋವಾದಲ್ಲಿ ಎಎಪಿ- ಕಾಂಗ್ರೆಸ್ ಸೀಟು ಹಂಚಿಕೆ; ಯಾವ ಕ್ಷೇತ್ರ ಯಾರಿಗೆ? 

ಏತನ್ಮಧ್ಯೆ, ವಿರೋಧ ಪಕ್ಷಗಳು ಸಹ ಮುಂಬರುವ ಚುನಾವಣಾ ಸಮರಕ್ಕೆ ಸಜ್ಜಾಗಿವೆ. ಆಮ್ ಆದ್ಮಿ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿಯನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಮಮತಾ ಬ್ಯಾನರ್ಜಿಯವರ ಟಿಎಂಸಿ ಜೊತೆಗಿನ ಹೊಂದಾಣಿಕೆಯ ಬಗ್ಗೆ ಅನಿಶ್ಚಿತತೆಗಳಿವೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Sat, 24 February 24

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ