ಲೋಕಸಭಾ ಟಿಕೆಟ್ ಹಂಚಿಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದ ಕಾಂಗ್ರೆಸ್, ಕರ್ನಾಟಕದ ಐವರು ಸಚಿವರ ಮಕ್ಕಳಿಗೆ ಟಿಕೆಟ್!

|

Updated on: Mar 21, 2024 | 11:13 PM

Congress Family Politics In Karnataka: ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳದ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಕೇಳಿಬರುತ್ತಿದೆ. ಆದರೆ, ಅದೇ ಆರೋಪ ಮಾಡುವ ಇತರೆ ಪಕ್ಷಗಳು ಅದೇ ಹಾದಿಯಲ್ಲಿಯೇ ಸಾಗುವುದನ್ನು ಕಾಣಬಹುದು. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ವಂಶಪಾರಂಪರ್ಯ ರಾಜಕಾರಣ ವೃದ್ಧಿಗೊಳ್ಳುತ್ತಿದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್​ ಒಂದೆಜ್ಜೆ ಮುಂದೆ ಇದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದೆ. ಸಚಿವರ ಮಕ್ಕಳು, ಶಾಸಕರು, ಸಂಬಂಧಿ, ಸಹೋದರರಿಗೆ ಟಿಕೆಟ್ ನೀಡಲಾಗಿದೆ.ಈ ಮೂಲಕ ಕಾಂಗ್ರೆಸ್ ಕುಟುಂಬದ ಸದಸ್ಯರನ್ನು ಮೀರಿ ಟಿಕೆಟ್ ನೀಡಲು ಆಗದೇ ಒದ್ದಾಡಿರುವುದು ಸ್ಪಷ್ಟವಾದಂತಾಗಿದೆ

ಲೋಕಸಭಾ ಟಿಕೆಟ್ ಹಂಚಿಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದ ಕಾಂಗ್ರೆಸ್, ಕರ್ನಾಟಕದ ಐವರು ಸಚಿವರ ಮಕ್ಕಳಿಗೆ ಟಿಕೆಟ್!
ಕರ್ನಾಟಕದ ಸಚಿವರು
Follow us on

ಬೆಂಗಳೂರು, (ಮಾರ್ಚ್ 21): ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ (Loksabha Elections 2024) ಸ್ಪರ್ಧಿಸುವ ಕಾಂಗ್ರೆಸ್ (Congress)​ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಆಗಿದೆ. ಇಂದು(ಮಾರ್ಚ್ 21) ಎಐಸಿಸಿ, ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ. ಇದರೊಂದಿಗೆ ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ  24 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಇನ್ನೂ ನಾಲ್ಕು ಕ್ಷೇತ್ರಗಳು ಬಾಕಿ ಉಳಿದುಕೊಂಡಿವೆ. ಮುಖ್ಯವಾಗಿ ಕಾಂಗ್ರೆಸ್ ಹೈಕಮಾಂಡ್, ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದ್ದು, ಸಚಿವರ ಮಕ್ಕಳು, ಶಾಸಕರರ ಸಹೋದರ, ಸಂಬಂಧಿಗಳಿಗೆ ಮಣೆ ಹಾಕಿದೆ.

ಐವರು ಸಚಿವರ ಮಕ್ಕಳಿಗೆ ಮಣೆ

ಈ ಬಾರಿ ಲೋಕಸಭೆ ಚುನಾವಣೆಗೆ ಕರ್ನಾಟಕದ ಐವರು ಸಚಿವರ  ಮಕ್ಕಳಿಗೆ ಟಿಕೆಟ್ ನೀಡಲಾಗಿದೆ.  ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್​ ಖಂಡ್ರೆಗೆ ಬೀದರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಗ ಮೃಣಾಲ್ ಹೆಬ್ಬಾಳ್ಕರ್‌, ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಚಿಕ್ಕೋಡಿ, ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯಾರೆಡ್ಡಿಗೆ ಬೆಂಗಳೂರು ದಕ್ಷಿಣ ಟಿಕೆಟ್, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್‌ ಅವರಿಗೆ ಬಾಗಲಕೋಟೆ ಲೋಕಸಭಾ ಟಿಕೆಟ್ ನೀಡಲಾಗಿದೆ. ಈ ಮೂಲಕ ಕುಟುಂಬದ ಸದಸ್ಯರನ್ನು ಮೀರಿ ಟಿಕೆಟ್ ನೀಡಲು ಆಗದೇ ಒದ್ದಾಡಿರುವುದು ಸ್ಪಷ್ಟವಾದಂತಾಗಿದೆ.

ಇದನ್ನೂ ಓದಿ: ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ, ಸಚಿವರ ಮಕ್ಕಳಿಗೆ ಮಣೆ

ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದ ಕಾಂಗ್ರೆಸ್

  •  ಪ್ರಿಯಾಂಕ ಜಾರಕಿಹೊಳಿ(ಚಿಕ್ಕೋಡಿ ಕ್ಷೇತ್ರ)- ಸಚಿವ ಸತೀಶ್ ಜಾರಕಿಹೊಳಿ ಪುತ್ರಿ
  •  ಮೃಣಾಲ್ ಹೆಬ್ಬಾಳಕರ್(ಬೆಳಗಾವಿ ಕ್ಷೇತ್ರ)- ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ
  •  ಸಂಯುಕ್ತ ಪಾಟೀಲ್(ಬಾಗಲಕೋಟೆ ಕ್ಷೇತ್ರ)- ಸಚಿವ ಶಿವಾನಂದ ಪಾಟೀಲ್ ಪುತ್ರಿ
  •  ಡಾ. ರಾಧಾಕೃಷ್ಣ ದೊಡ್ಡಮನಿ(ಕಲಬುರಗಿ ಕ್ಷೇತ್ರ)- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ
  •  ಸಾಗರ್ ಖಂಡ್ರೆ(ಬೀದರ್ ಕ್ಷೇತ್ರ)- ಸಚಿವ ಈಶ್ವರ್ ಖಂಡ್ರೆ ಪುತ್ರ
  •  ರಾಜಶೇಖರ್ ಹಿಟ್ನಾಳ್(ಕೊಪ್ಫಳ ಕ್ಷೇತ್ರ)- ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ
  •  ಪ್ರಭಾವತಿ ಮಲ್ಲಿಕಾರ್ಜುನ್(ದಾವಣಗೆರೆ ಕ್ಷೇತ್ರ)- ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ
  • ಮನ್ಸೂರ್ ಖಾನ್ (ಬೆಂಗಳೂರು ಕೇಂದ್ರ ಕ್ಷೇತ್ರ)- ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ
  •  ಸೌಮ್ಯ ರೆಡ್ಡಿ (ಬೆಂಗಳೂರು ದಕ್ಷಿಣ)- ಸಚಿವ ರಾಮಲಿಂಗಾರೆಡ್ಡಿ ಪುತ್ರಿ
  • ಗೀತಾ ಶಿವರಾಜ್ ಕುಮಾರ್(ಶಿವಮೊಗ್ಗ ಕ್ಷೇತ್ರ)- ಸಚಿವ ಮಧು ಬಂಗಾರಪ್ಪ ಸಹೋದರಿ
  •  ಶ್ರೇಯಸ್ ಪಟೇಲ್( ಹಾಸನ ಕ್ಷೇತ್ರ) ಮಾಜಿ ಸಂಸದ ದಿ. ಪುಟ್ಟಸ್ವಾಮಿ ಗೌಡರ ಮೊಮ್ಮಗ
  •  ವೆಂಕಟರಮಣೇಗೌಡ (ಮಂಡ್ಯ ಕ್ಷೇತ್ರ) ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಸಹೋದರ

ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಬಲೆಯೊಳಗೆ ಸಿಲುಕಿದ ಕೈ

ರಾಜ್ಯದಲ್ಲಿ ಜಾತ್ಯಾತೀತ ಜನತಾದಳದ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಕೇಳಿಬರುತ್ತಿದೆ. ಆದರೆ, ಅದೇ ಆರೋಪ ಮಾಡುವ ಇತರೆ ಪಕ್ಷಗಳು ಅದೇ ಹಾದಿಯಲ್ಲಿಯೇ ಸಾಗುವುದನ್ನು ಕಾಣಬಹುದು. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ವಂಶಪಾರಂಪರ್ಯ ರಾಜಕಾರಣ ವೃದ್ಧಿಗೊಳ್ಳುತ್ತಿದೆ. ಇನ್ನು ಬಿಜೆಪಿಯಲ್ಲೂ ಕುಟುಂಬ ರಾಜಕಾರಣವನ್ನು ನೋಡುವುದಾದರೆ ದೊಡ್ಡ ಪಟ್ಟಿಯೇ ಇದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಬೆನ್ನಲ್ಲೇ ಕುಟುಂಬ ರಾಜಕಾರಣದ ಚರ್ಚೆ ಮುನ್ನಲೆಗೆ ಬಂದಿದೆ.

ಅದರಲ್ಲೂ ಈಶ್ವರಪ್ಪ, ಸದಾನಂದಗೌಡ ಸೇರಿದಂತೆ ಇತರೆ ನಾಯಕರು ಪರೋಕ್ಷವಾಗಿ ಬಿಎಸ್​ವೈ ಕುಟುಂಬ ರಾಜಕಾರಣವನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರು ಕೂಡಾ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಟೀಕೆ ಮಾಡುತ್ತಿದ್ದಾರೆ. ಆದ್ರೆ, ಇದೀಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ ಕುಟುಂಬ ರಾಜಕಾರಣಕ್ಕೆ ಜೋತುಬಿದ್ದಿರುವುದು ಸ್ಪಷ್ಟವಾಗಿದೆ.

ರಾಜಕಾರಣಿಗಳು ಮತ್ತು ಅವರ ಕುಟುಂಬಸ್ಥರು ತಮ್ಮ ವಂಶವಾಹಿ ರಾಜಕಾರಣವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಹೊಸ ತಲೆಮಾರಿನ ಯುವಕರಿಗೆ ರಾಜಕೀಯ ಕನಸಷ್ಟೇ, ರಾಜಕೀಯಕ್ಕೆ ಬಂದು ಬದಲಾವಣೆ ತರ ಬಯಸುವ ಯುವ ಸಮುದಾಯ ರಾಜಕೀಯದಲ್ಲಿ ಬೆಳೆಯುವುದು ಹೇಗೆ ಅಲ್ವಾ?

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:54 pm, Thu, 21 March 24