AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra Politics: ಗುವಾಹತಿಯಿಂದ ಗೋವಾಕ್ಕೆ ಮಹಾರಾಷ್ಟ್ರದ ಬಂಡಾಯ ಶಾಸಕರು, ಮುಂಬೈಗೆ ಸಿಟಿ ರವಿ ದೌಡು, ಇಂದು ವಿಧಾನಸಭೆ ಅಧಿವೇಶನ

ಸರ್ಕಾರದ ರಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂಬೈನಲ್ಲೇ ಇರುವಂತೆ ಸಿ.ಟಿ.ರವಿಗೆ ಸೂಚನೆ ನೀಡಲಾಗಿದೆ.

Maharashtra Politics: ಗುವಾಹತಿಯಿಂದ ಗೋವಾಕ್ಕೆ ಮಹಾರಾಷ್ಟ್ರದ ಬಂಡಾಯ ಶಾಸಕರು, ಮುಂಬೈಗೆ ಸಿಟಿ ರವಿ ದೌಡು, ಇಂದು ವಿಧಾನಸಭೆ ಅಧಿವೇಶನ
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 30, 2022 | 6:44 AM

Share

ಮುಂಬೈ: ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ಮುನಿಸಿಕೊಂಡಿರುವ ಶಿವಸೇನೆಯ ಬಂಡಾಯ ಶಾಸಕರು (Shiv Sena Rebel MLAs) ಬುಧವಾರ ಮಧ್ಯರಾತ್ರಿ ಗೋವಾ ತಲುಪಿದ್ದಾರೆ. ಗುವಾಹತಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಶಾಸಕರು ಎರಡು ವಿಶೇಷ ಬಸ್​ಗಳಲ್ಲಿ ಗೋವಾದ ಡೋನಾಪಾಲ್​ನಲ್ಲಿರುವ ತಾಜ್​ ಕನ್​ವೆಷನ್ ಸೆಂಟರ್ ಹೋಟೆಲ್​ಗೆ ತೆರಳಿದರು. ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆಯನ್ನು (Eknath Shinde) ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಭೇಟಿಯಾಗಿ, ರಹಸ್ಯ ಮಾತುಕತೆ ನಡೆಸಿದರು. ಸುಮಾರು ಒಂದು ತಾಸು ಇವರ ಮಾತುಕತೆ ನಡೆಯಿತು. ಈ ವೇಳೆ ಬಂಡಾಯ ಶಾಸಕರ ಮುಂದಿನ ರಾಜಕೀಯ ನಡೆಯ ಬಗ್ಗೆ ಚಿಂತನೆ ನಡೆಯಿತು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರಿಗೆ ಫೋನ್ ಮಾಡಿದ ಪ್ರಮೋದ್ ಸಾವಂತ್, ಏಕನಾಥ್ ಶಿಂಧೆ ಅವರೊಂದಿಗೆ ಮಾತನಾಡಿಸಿದರು. ಇಂದು ಈ ಶಾಸಕರು ಗೋವಾದಿಂದ ಮುಂಬೈಗೆ ತೆರಳಲಿದ್ದಾರೆ.

ಮುಂಬೈಗೆ ಸಿಟಿ ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕದ ಪ್ರಮುಖ ಬಿಜೆಪಿ ನಾಯಕ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಗೆ ಮುಂಬೈಗೆ ತೆರಳುವಂತೆ ಹೈಕಮಾಂಡ್​ ಸೂಚನೆ ನೀಡಿದೆ. ಸರ್ಕಾರದ ರಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂಬೈನಲ್ಲೇ ಇರುವಂತೆ ಸಿ.ಟಿ.ರವಿಗೆ ಸೂಚನೆ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಸಿ.ಟಿ.ರವಿ ಮಹಾರಾಷ್ಟ್ರದ ಉಸ್ತುವಾರಿಯಾಗಿದ್ದರು.

ಔರಂಗಾಬಾದ್, ಉಸ್ಮಾನಾಬಾದ್ ಹೆಸರು ಬದಲಾವಣೆ

ಮಹಾರಾಷ್ಟ್ರದಲ್ಲಿ ಬಹುದಿನಗಳಿಂದ ಚರ್ಚೆಯಲ್ಲಿದ್ದ ಔರಂಗಾಬಾದ್ ಮತ್ತು ಉಸ್ಮಾನಾಬಾದ್​ ನಗರಗಳ ಹೆಸರನ್ನು ಬದಲಿಸುವ ಪ್ರಸ್ತಾವಕ್ಕೆ ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ರಾತ್ರಿ ಒಪ್ಪಿಗೆ ಸೂಚಿಸಿತು. ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿನಗರವೆಂದು, ಉಸ್ಮಾನಾಬಾದ್ ನಗರಕ್ಕೆ ಧಾರಾಶಿವ ಎಂದು ಹೆಸರು ಇರಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಶರದ್ ಪವಾರ್ ಹಾಗೂ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಹೇಳಿದರು. ಶಿವಸೇನೆ ಸಂಘಟನೆ ಪ್ರಾರಂಭಿಸಿ ಜೂನ್ 19ಕ್ಕೆ 56 ವರ್ಷವಾಗುತ್ತದೆ. ಆರಂಭದ ದಿನದಿಂದಲೂ ಎಲ್ಲಾ ರೀತಿಯ ಜನರನ್ನೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ರಿಕ್ಷಾ ಓಡಿಸವವರು, ಕೂಲಿನಾಲಿ ಮಾಡುವವರು, ಅತ್ಯಂತ ಶೋಷಿತ ವರ್ಗದವರು ನನ್ನ ಜೊತೆಗೆ ಇದ್ದರು ಎಂದು ಉದ್ಧವ್ ಹೇಳಿದರು.

ಅಧಿಕಾರ ಶಿವಸೇನೆಗೆ ಬಂದ ನಂತರ ಅವರಿಗೆ ಬೇಕಾದ ರೀತಿಯ ಸಚಿವ ಸ್ಥಾನ ಹಾಗೂ ಪದವಿಯನ್ನು ನೀಡಿದ್ದೆವು. ಇಂತಹ ಜನ ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾನು ಮಾತೋಶ್ರೀಗೆ ಬಂದ ನಂತರ ಸಾಕಷ್ಟು ಜನ ಬಂದರು. ಅದರಲ್ಲಿ ಎಲ್ಲಾ ರೀತಿಯ ಜನರು ಇರುತ್ತಾರೆ. ಅವರು ನನಗೆ ಮನೋಬಲ ತುಂಬುವ ಕಾರ್ಯ ಮಾಡಿದ್ದಾರೆ. ಸಾಹೇಬರೆ ನೀವು ಏನು ಯೋಜನೆ ಮಾಡಬೇಡಿ ನಿಮ್ಮ ಜೊತೆ ನಾವಿದ್ದೇವೆ ನಿಮ್ಮ ಹೋರಾಟ ಮುಂದುವರೆಸಿ ಎಂದು ಜನರು ನನಗೆ ಆತ್ಮಸೈರ್ಯ ತುಂಬಿದರು ಎಂದು ನೆನಪಿಸಿಕೊಂಡರು.

ಕಳೆದ ಬುಧವಾರವೇ ನಮ್ಮ ಎಲ್ಲರಿಗೂ ಹೇಳಿ ಸರ್ಕಾರಿ ನಿವಾಸ ‘ವರ್ಷಾ’ದಿಂದ ನನ್ನ ಖಾಸಗಿ ನಿವಾಸ ‘ಮಾತೋಶ್ರೀ’ಗೆ ಬಂದೆ. ಇವತ್ತು ನಿಮ್ಮ ಎಲ್ಲರ ಸಮ್ಮಖದಲ್ಲೇ ಮುಖ್ಯಮಂತ್ರಿ ಪದವಿಯನ್ನು ತ್ಯಾಗ ಮಾಡುತ್ತಿದ್ದೇನೆ. ನಾವೇನು ಗಾಬರಿ ಸಹ ಆಗಿಲ್ಲಾ. ಹೆದರುವವನೂ ನಾನಲ್ಲ ಎಂದು ಹೇಳಿದರು.

Published On - 6:41 am, Thu, 30 June 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!