AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೃತೀಯ ರಂಗ ಸಂಘಟನೆ ಚುರುಕು: ಮಮತಾ ಬ್ಯಾನರ್ಜಿ-ಶರದ್ ಪವಾರ್ ಚರ್ಚೆ

‘ಯುಪಿಎ ಎಂದರೇನು? ಯುಪಿಎ ಎಲ್ಲಿದೆ?’ ಎಂದು ಪ್ರಶ್ನಿಸಿದ ಮಮತಾ ಬ್ಯಾನರ್ಜಿ, ಕಾಂಗ್ರೆಸ್​ ಜೊತೆಗಿರುವ ಪಕ್ಷಗಳನ್ನು ಗಮನದಲ್ಲಿರಿಸಿಕೊಂಡು ಹೊಸ ರಾಜಕೀಯ ದಾಳ ಉರುಳಿಸಿದರು

ತೃತೀಯ ರಂಗ ಸಂಘಟನೆ ಚುರುಕು: ಮಮತಾ ಬ್ಯಾನರ್ಜಿ-ಶರದ್ ಪವಾರ್ ಚರ್ಚೆ
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಎನ್​ಸಿಪಿ ನಾಯಕ ಶರದ್ ಪವಾರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 01, 2021 | 5:51 PM

ಮುಂಬೈ: ಬಿಜೆಪಿಗೆ ಪರ್ಯಾಯ ಕಟ್ಟುವ ಪ್ರಯತ್ನಗಳನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಚುರುಕುಗೊಳಿಸಿವೆ. ಮಹಾರಾಷ್ಟ್ರದ ಎನ್​ಸಿಪಿ ನಾಯಕ ಶರದ್ ಪವಾರ್ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬುಧವಾರ ಭೇಟಿಯಾಗಿ ಚರ್ಚೆ ನಡೆಸಿದರು. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳು ಒಂದೇ ವೇದಿಕೆಗೆ ಬರಬೇಕು. ಒಂದೇ ಮನಃಸ್ಥಿತಿಯ ಪಕ್ಷಗಳು ಒಗ್ಗೂಡಿ ಬಿಜೆಪಿ ವಿರುದ್ಧ ಗಟ್ಟಿಯಾದ ಪರ್ಯಾಯ ರಚಿಸಬೇಕಿದೆ ಎಂದು ಮುಂಬೈನಲ್ಲಿ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು.

ಮುಂದಿನ ದಿನಗಳಲ್ಲಿ ಸಂಯುಕ್ತ ಪ್ರಗತಿಶೀಲ ಮೈತ್ರಿಕೂಟ (United Progressive Alliance – UP) ಎನ್ನುವುದು ಇರುವುದಿಲ್ಲ. ಯುಪಿಎ ಎನ್ನುವುದು ಇತಿಹಾಸವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಬಿಜೆಪಿ ವಿರುದ್ಧ ಹೋರಾಟ ನಡೆಸಲು ಪರ್ಯಾಯ ವ್ಯವಸ್ಥೆ ಬೇಕು. ಹೋರಾಟ ಮಾಡದ ಪಕ್ಷಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಯುಪಿಎ ಎಂದರೇನು? ಯುಪಿಎ ಎಲ್ಲಿದೆ?’ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್​ ಜೊತೆಗಿರುವ ಪಕ್ಷಗಳನ್ನು ಗಮನದಲ್ಲಿರಿಸಿಕೊಂಡು ಹೊಸ ರಾಜಕೀಯ ದಾಳ ಉರುಳಿಸಿದರು. ಇನ್ನು ಎರಡು ವರ್ಷಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹೊತ್ತಿಗೆ ದೇಶದಲ್ಲಿ ಹೊಸ ರಾಜಕೀಯ ಸಮೀಕರಣ ನಡೆಸುವ ಇಚ್ಛೆಯನ್ನೂ ಈ ಮೂಲಕ ಹೊರಹಾಕಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವಲ್ಲಿ ಯಶಸ್ವಿಯಾದ ಶರದ್​ ಪವಾರ್​ ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗ ರೂಪಿಸಲು ಶ್ರಮಿಸುತ್ತಿದ್ದಾರೆ. ಮಮತಾ ಭೇಟಿಯ ಬಗ್ಗೆ ಪ್ರತಿಕ್ರಿಯಿಸುವಾಗ, ‘2024ರ ಚುನಾವಣೆಯ ಹಾದಿ’ (ಟೆಂಪ್ಲೇಟ್ ಫಾರ್ 2024) ಎಂದು ಹೇಳಿದರು.

ಮಮತಾರನ್ನು ಭೇಟಿಯಾದ ನಂತರ ಫೋಟೊಗಳನ್ನು ಟ್ವೀಟ್ ಮಾಡಿದ ಶರದ್ ಪವಾರ್, ‘ನನ್ನ ಮುಂಬೈ ನಿವಾಸದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದೆ. ನಮ್ಮ ಮೈತ್ರಿಯನ್ನು ಬಲಪಡಿಸಿಕೊಳ್ಳಬೇಕು. ಜನರ ಹಿತದೃಷ್ಟಿಯಿಂದ ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಬದ್ಧತೆ ಪ್ರದರ್ಶಿಸಬೇಕು’ ಎಂಬ ಬಗ್ಗೆ ಇಬ್ಬರಲ್ಲೂ ಸಹಮತವಿತ್ತು ಎಂದು ಪವಾರ್ ಟ್ವೀಟ್​ನಲ್ಲಿ ಹೇಳಿದ್ದಾರೆ.

ನಿನ್ನೆಯಷ್ಟೇ (ನ.30) ಮಮತಾ ಬ್ಯಾನರ್ಜಿ ಶಿವಸೇನೆಯ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿಯಾಗಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗುವ ಉದ್ದೇಶ ಮಮತಾ ಅವರಿಗೆ ಇತ್ತಾದರೂ ಸಾಧ್ಯವಾಗಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಉದ್ಧವ್ ಸದ್ಯಕ್ಕೆ ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕ ವಾಸದಲ್ಲಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್​ ಸ್ಪರ್ಧಿಸುತ್ತದೆ ಎಂದಾದರೆ ನಾವ್ಯಾಕೆ ಗೋವಾದಲ್ಲಿ ಸ್ಪರ್ಧಿಸಬಾರದು?-ಮಮತಾ ಬ್ಯಾನರ್ಜಿ ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಮಮತಾ ಬ್ಯಾನರ್ಜಿ; ಬಿಎಸ್‌ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ ಹಿಂಪಡೆಯಲು ಒತ್ತಾಯ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ