ಯಾವುದೇ ಶಕ್ತಿ ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸಲಾಗಲ್ಲ: ಸಚಿವ ಈಶ್ವರ್ ಖಂಡ್ರೆ
ಯಾವುದೇ ಶಕ್ತಿ ವೀರಶೈವ-ಲಿಂಗಾಯತರನ್ನು ಬೇರೆ ಮಾಡಲು ಸಾಧ್ಯವಿಲ್ಲ. ನಮ್ಮೆಲ್ಲರ ಆರಾಧ್ಯ ದೇವರಾದ ಶತಾಯುಷಿ ಲಿಂಗೈಕ್ಯ ಪೂಜ್ಯ ಶಿವಕುಮಾರ್ ಸ್ವಾಮೀಜಿಗಳು ವೀರಶೈವ-ಲಿಂಗಾಯತರು ಭಿನ್ನ ಅಲ್ಲ, ಒಂದೇ ಅನ್ನೋ ತೀರ್ಪು ನೀಡಿದ್ದಾರೆ. ಇಂದು ನಮ್ಮ ಸಮುದಾಯದ ಎಲ್ಲರು ಒಂದೇ ಅನ್ನೋ ಭಾವನೆಯಿಂದ ಇದ್ದಾರೆ. ಯಾರೇ ಪ್ರತ್ಯೇಕ ಮಾಡಲು ಹೊರಟರೂ ಅದು ಸಾಧ್ಯವಾಗಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಬೆಂಗಳೂರು, ಅಕ್ಟೋಬರ್ 07: ಯಾವುದೇ ಕಾರಣಕ್ಕೂ ವೀರಶೈವ, ಲಿಂಗಾಯತರನ್ನು (Lingayat) ಪ್ರತ್ಯೇಕ ಮಾಡಲು ಆಗುವುದಿಲ್ಲ. ಹಾಗೇನಾದ್ರೂ ಬೇರೆ ಮಾಡಿದರೆ ವಿಪಕ್ಷ ಲಾಭ ಮಾಡಿಕೊಳ್ಳುತ್ತೆ. ಇದು ದಾರಿ ತಪ್ಪಿಸುವ ಪ್ರಯತ್ನವಾಗಿದ್ದು, ಅಪಪ್ರಚಾರ ಮಾಡಲಾಗ್ತಿದೆ. ಇದರಿಂದ ನಾವು ಜಾಗೃತವಾಗಿ ಎಚ್ಚರಿಕೆಯಿಂದ ಇರಬೇಕು. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬಹುದಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನ ಮಾಡಲು ಹೆಚ್ಚಿನ ಅವಕಾಶವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಸಿದ್ದರಾಮಯ್ಯ ಯಾವ ಧರ್ಮ, ಜಾತಿಯ ವಿರೋಧಿ ಕೂಡ ಅಲ್ಲ. ಬದಲಾಗಿ ಎಲ್ಲರಿಗೂ ಒಳ್ಳೆಯದು ಮಾಡುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಇದು ಅವರ ಸಿದ್ಧಾಂತ ಕೂಡ ಆಗಿದ್ದು, ಸಿದ್ದರಾಮಯ್ಯರನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರೆ ಅದು ತಪ್ಪು. ಮೊನ್ನೆ ಬೆಂಗಳೂರಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆದಿದೆ. ಅಭಿಯಾನ ಸ್ವಾಗತ ಮಾಡಿ ಬೀದರ್ನಲ್ಲಿ ನಡೆದಾಗ ನಾನೇ ಉದ್ಘಾಟನೆ ಮಾಡಿದ್ದೇನೆ. ಆದರೆ ಸಂಕುಚಿತ ಮನೋಭಾವ ಇರುವ ಕೆಲವರು ಇವತ್ತು ಬೇರೆ ಹೇಳಿಕೆ ನೀಡ್ತಿದ್ದಾರೆ. ದ್ವಂದ್ವ ನಿಲುವು ಇರುವವರನ್ನು ನಾವು ಸಮಾವೇಶಕ್ಕೆ ಕರೆದಿಲ್ಲ ಎಂದು ಹೇಳಿದ್ದಾರೆ. ಇದನ್ನ ಮೊದಲೇ ಹೇಳಬೇಕಿತ್ತು. ಬಸವಣ್ಣ ನಿಮ್ಮ ಖಾಸಗಿ ಆಸ್ತೀನಾ? ಬಸವಣ್ಣ ನಿಮಗಷ್ಟೇ ಸೀಮಿತವಾಗಿರುವವರಾ? ಎಂದು ಖಂಡ್ರೆ ಪ್ರಶ್ನಿಸಿದ್ದಾರೆ.
ಈಶ್ವರ್ ಖಂಡ್ರೆ ಹೇಳಿದ್ದೇನು?
ಯಾವುದೇ ಶಕ್ತಿ ವೀರಶೈವ-ಲಿಂಗಾಯತರನ್ನು ಬೇರೆ ಮಾಡಲು ಸಾಧ್ಯವಿಲ್ಲ.
ನಮ್ಮೆಲ್ಲರ ಆರಾಧ್ಯ ದೇವರಾದ ಶತಾಯುಷಿ ಲಿಂಗೈಕ್ಯ ಪೂಜ್ಯ ಶಿವಕುಮಾರ್ ಸ್ವಾಮೀಜಿಗಳು “ವೀರಶೈವ-ಲಿಂಗಾಯತರು ಭಿನ್ನ ಅಲ್ಲ, ಒಂದೇ” ಅನ್ನೋ ತೀರ್ಪು ನೀಡಿದ್ದಾರೆ.
ಇಂದು ನಮ್ಮ ಸಮುದಾಯದ ಎಲ್ಲರು ಒಂದೇ ಅನ್ನೋ ಭಾವನೆಯಿಂದ ಇದ್ದಾರೆ. ಯಾರೇ ಪ್ರತ್ಯೇಕ ಮಾಡಲು ಹೊರಟರೂ ಅದು… pic.twitter.com/MlmZY9hKJs
— Eshwar Khandre (@eshwar_khandre) October 6, 2025
ಬಸವಣ್ಣ ಎಲ್ಲರಿಗೂ ಬೇಕಾದವರಾಗಿದ್ದು, ಅವರ ತತ್ತ್ವಸಿದ್ಧಾಂತ ಯಾವತ್ತಿಗೂ ಪ್ರಸ್ತುತ. ಹೀಗಿರುವಾಗ ಅವರ ಹೆಸರನ್ನು ಸ್ವಾರ್ಥಕ್ಕಾಗಿ ಬಳಸಬೇಡಿ. ನಮ್ಮವರನ್ನೇ ನಮ್ಮವರು ಎನ್ನದ ನೀವು ಉಳಿದವರನ್ನ ಹೇಗೆ ಒಪ್ಪಿಕೊಳ್ಳುತ್ತೀರಿ? ಇದಕ್ಕೆ ಸ್ವಾಮೀಜಿಗಳು ಭಕ್ತರಿಗೆ ಉತ್ತರ ನೀಡಬೇಕು. ಹಾಗಂತ ನಾನು ಯಾವ ಮಠಾಧೀಶರನ್ನೂ ಟೀಕೆ ಮಾಡುತ್ತಿಲ್ಲ. ಎಲ್ಲ ಪೂಜ್ಯರ ಬಗ್ಗೆ ಅಪಾರ ಗೌರವವಿದ್ದು, ಭಕ್ತರ ಮನಸ್ಸಿನಲ್ಲಿ ಇರುವ ಪ್ರಶ್ನೆ ಗಮನಕ್ಕೆ ತರುತ್ತಿದ್ದೇನೆ ಅಷ್ಟೇ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:46 pm, Tue, 7 October 25




