ಬೆಂಗಳೂರು, ಡಿ.21: ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಲು ಯತ್ನ ನಡೆಯುತ್ತಿದೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಬಿವೈ ವಿಜಯೇಂದ್ರ (B.Y. Vijayendra) ಅವರಿಗೆ ಮಾಹಿತಿಯ ಕೊರತೆ ಇದ್ದು, ಹಿಂದೂ ಸಂಘಟನೆಗಳ ರಾಜಕೀಯ ಪ್ರೇರಿತ ಆರೋಪ ರಾಜಕೀಯಕ್ಕೆ ಬಳಕೆ ಮಾಡಲಾಗುತ್ತಿದೆ ಎಂದರು.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಾಹಿತಿ ಕೊರತೆಯಿದೆ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ರೀತಿಯ ನೋಟಿಸ್ ಜಾರಿಮಾಡಿಲ್ಲ. ಖಾಸಗಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿಸುವ ವಿಷಯ ಪ್ರಸ್ತಾಪಿಸಿಲ್ಲ ಎಂದು ಟ್ವೀಟ್ ಮೂಲಕ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದರು.
ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ರೀತಿಯ ನೋಟೀಸ್ ಆಗಲಿ ಯಾವುದೇ ಖಾಸಗಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡಿಸುವ ವಿಷಯ ಬಂದಿರುವುದಿಲ್ಲ , ರಾಜಕೀಯವಾಗಿ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ರಾಜ್ಯಾಧ್ಯಕ್ಷರು ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಹಿಂದೂ ದೇವಾಲಯಗಳನ್ನು ವಶ ಪಡಿಸಿಕೊಳ್ಳಲು ಮುಂದಾದ ಸರ್ಕಾರ: ಹಿಂದೂ ಜನ ಜಾಗೃತಿ ಸಮಿತಿ ಆಕ್ರೋಶ
ಹಿಂದಿನ ಅವರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸಿರುತ್ತಾರೆ. ಬಿಜೆಪಿ ಬೆಂಬಲಿತ ಕೆಲ ಹಿಂದೂ ಸಂಘಟನೆಗಳು ಈ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಇದನ್ನು ಬಳಸಿಕೊಂಡು ರಾಜಕೀಯ ಮಾಡಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊರಟಿರುವ ರಾಜ್ಯಾಧ್ಯಕ್ಷರ ಗಮನಕ್ಕೆ ಯಾವುದಾದರೂ ದಾಖಲೆ ಇದ್ದರೆ ನೀಡಿ. ನಿಮ್ಮ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಶೋಭೆ ತರುವ ರೀತಿ ನಿಮ್ಮ ಹೇಳಿಕೆಗಳು ಇರಬೇಕೆ ಹೊರತು, ಕೇವಲ ಸುಳ್ಳು ಆರೋಪ ಮಾಡಿ ಹಿಟ್ ಆ್ಯಂಡ್ ರನ್, ರಾಜಕೀಯ ಲಾಭಕ್ಕಾಗಿ ಇರಬಾರದು ಎಂದರು.
ಕೆಲ ಹಿಂದೂ ಸಂಘಟನೆಗಳ ಸುಳ್ಳು ನಿರಾಧಾರ ರಾಜಕೀಯ ಪ್ರೇರಿತ ಆರೋಪವನ್ನು ,
ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅವರಿಗೆ ಮಾಹಿತಿ ಕೊರತೆ ಇದೆ.ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ರೀತಿಯ ನೋಟೀಸ್ ಆಗಲಿ ಯಾವುದೇ ಖಾಸಗಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡಿಸುವ ವಿಷಯ ಬಂದಿರುವುದಿಲ್ಲ , ರಾಜಕೀಯವಾಗಿ…
— Ramalinga Reddy (@RLR_BTM) December 20, 2023
ಎರಡು ದಿನಗಳ ಹಿಂದೆಯಷ್ಟೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದ ಸಚಿವರು, ಕೆಲವು ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ನಮ್ಮ ಸರ್ಕಾರ ಬಂದ ಮೇಲೆ ಪಡೆದುಕೊಂಡಿಲ್ಲ ಮತ್ತು ಪಡೆದುಕೊಳ್ಳುವುದು ಇಲ್ಲ ಎಂದಿದ್ದರು. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸಾವಿರಾರು ‘ಸಿ’ ದರ್ಜೆ ದೇವಸ್ಥಾನಗಳು ಇದ್ದು, ಖಾಸಗಿಯವರು ದತ್ತು ಪಡೆದುಕೊಂಡು ಹೆಚ್ಚಿನ ಅಭಿವೃದ್ಧಿ ಮಾಡಲು ಇಚ್ಛಿಸಿದರೆ ಅವುಗಳನ್ನು ಸಹ ನೀಡುತ್ತೇವೆ ಎಂದಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ