ಬಿಜೆಪಿ ಟಿವಿಯಲ್ಲಿ ದೇವರನ್ನು ತೋರಿಸುತ್ತೆ, ನಾವು ದೇವಸ್ಥಾನಗಳಿಗೆ ಉಚಿತ ಪ್ರಯಾಣ ಕಲ್ಪಿಸಿದ್ದೇವೆ: ಸಂತೋಷ್ ಲಾಡ್

| Updated By: Rakesh Nayak Manchi

Updated on: Feb 05, 2024 | 9:14 PM

ಧಾರವಾಡದ ಕೆಸಿಡಿ ಮೈದಾನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಂತೋಷ್ ಲಾಡ್, ಗ್ಯಾರಂಟಿ ಯೋಜನೆಗಳನ್ನು ಹೊಗಳಿದರು. ಬಿಜೆಪಿಯವರು ಹಿಂದೂ ಹಾಗೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಈ‌ ಪದ ಬಳಕೆಗೆ ತಂದಿದ್ದು ಅಂಬೇಡ್ಕರ್ ಎಂದರು.

ಬಿಜೆಪಿ ಟಿವಿಯಲ್ಲಿ ದೇವರನ್ನು ತೋರಿಸುತ್ತೆ, ನಾವು ದೇವಸ್ಥಾನಗಳಿಗೆ ಉಚಿತ ಪ್ರಯಾಣ ಕಲ್ಪಿಸಿದ್ದೇವೆ: ಸಂತೋಷ್ ಲಾಡ್
ಧಾರವಾಡದಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಸಚಿವ ಸಂತೋಷ್ ಲಾಡ್
Follow us on

ಧಾರವಾಡ, ಫೆ.5: ಬಿಜೆಪಿಯವರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಾರೆ. ನಾವು (ಕಾಂಗ್ರೆಸ್) ದೇವಾಲಯಗಳಿಗೆ ಹೋಗಲು ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ಹೇಳಿದರು. ಧಾರವಾಡದ ಕೆಸಿಡಿ ಮೈದಾನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು (Guarantee Schemes) ಕೊಟ್ಟ ನಮ್ಮ ಸಿದ್ದರಾಮಯ್ಯ ಪರ ನೀವು ಇರಬೇಕೊ ಬೇಡವೋ? ಅದಕ್ಕೆ ತಾವು ಬೆಂಬಲ ಕೊಡಬೇಕು ಎಂದು ಫಲಾನುಭವಿಗಳಲ್ಲಿ ಮನವಿ ಮಾಡಿದರು.

ಧಾರವಾಡ ನಗರದ ಕೆಸಿಡಿ ಮೈದಾನದಲ್ಲಿ ಐದು ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶಕ್ಕೆ ದೀಪ ಬೆಳಗುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಚಾಲನೆ ನೀಡಿದರು. ಸಮಾವೇಶದಲ್ಲಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಧಾರವಾಡ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದರು.

ಇದನ್ನೂ ಓದಿ: ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್​ ಯಡವಟ್ಟು

ಬಳಿಕ ಮಾತನಾಡಿದ ಸಂತೋಷ್ ಲಾಡ್, ಬಿಜೆಪಿಯವರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಾರೆ. ನಮ್ಮ ಸರ್ಕಾರ ದೇವಸ್ಥಾನಗಳಿಗೆ ಉಚಿತವಾಗಿ ಹೋಗಲು ಅವಕಾಶ ಮಾಡಿಕೊಟ್ಟಿದೆ. ನಿಮಗೆ ಐದು ಕೆಜಿ ಅಕ್ಕಿ ಸಿಗುತ್ತಿದೆ, ಅಕ್ಕಿ ಬದಲಿಗೆ ದುಡ್ಡು ಬರುತ್ತಿದೆ. ಯಾರೂ ಹಸಿವಿನಿಂದ ಬಳಲಬಾರದು ಅಂತಾ ಕಾರ್ಯಕ್ರಮ ತಂದಿದ್ದೇವೆ. ಇದು ಬಿಜೆಪಿ ಗ್ಯಾರಂಟಿ ಅಲ್ಲ, ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ. 9 ವರ್ಷಗಳಿಂದ ಅವರು (ಬಿಜೆಪಿ) ಪ್ರಚಾರ ಮಾಡಲಿಲ್ಲ. ನಮ್ಮ ಗ್ಯಾರಂಟಿಗಳು ಬರುತಿದ್ದಂತೆ ಆ ಹೆಸರು ಕಾಪಿ ಮಾಡಿ ಮೋದಿ ಗ್ಯಾರಂಟಿ ಎನ್ನುತಿದ್ದಾರೆ. ಇತಿಹಾಸವನ್ನು ಸುಳ್ಳು ಹೇಳುವ ಕೆಲಸ ಆರಂಭವಾಗಿದೆ ಎಂದರು.

ಬಿಜೆಪಿಯವರು ಹಿಂದೂ ಹಾಗೂ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಈ‌ ಪದ ಬಳಕೆಗೆ ತಂದಿದ್ದು ಬೇರೆ ಯಾರೂ ಅಲ್ಲ ಡಾ.ಅಂಬೇಡ್ಕರ್. ಇವತ್ತು ಬಿಜೆಪಿಯವರು ಹಿಂದೂ ಎಂದು ಜೋರಾಗಿ ಹೇಳುತ್ತಾರೆ. ಆದರೆ ಕಾನೂನಾತ್ಮಕವಾಗಿ ಅದನ್ನು (ಹಿಂದೂ ಬಿಲ್) ತಂದಿದ್ದು ಬಿ.ಆರ್.ಅಂಬೇಡ್ಕರ್. ಬ್ರಾಹ್ಮಣ, ವೈಶ್ಯ, ಕ್ಷತ್ರೀಯ, ಶೂದ್ರರನ್ನು ಒಗ್ಗೂಡಿಸಿದ್ದು ಅಂಬೇಡ್ಕರ್ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ