ನವದೆಹಲಿ: ಸಚಿವ ಸತ್ಯೇಂದ್ರ ಜೈನ್ (Satyendra Jain), ಕುಟುಂಬದ ನಕಲಿ ಕಂಪನಿಗಳಿವೆ. ಇವುಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಹವಾಲಾ ಮೂಲಕ ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ಹಣ ಹೋಗಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ (Smriti Irani) ಆರೋಪಿಸಿದ್ದಾರೆ. ಭ್ರಷ್ಟಾಚಾರ ಅಂದರೇ, ದೇಶದ್ರೋಹ ಇದ್ದಂತೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಅವರ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಭ್ರಷ್ಟಾಚಾರ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್, ಸತ್ಯೇಂದ್ರ ಜೈನ್ ಗೆ ಕ್ಲೀನ್ ಚಿಟ್ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಜಡ್ಜ್ ರೀತಿಯಲ್ಲಿ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejiriwal) ಅವರಿಗೆ ಪ್ರಶ್ನಿಸಿದ್ಧಾರೆ.
ಇದನ್ನು ಓದಿ: ಜೊಕೊವಿಕ್ಗೆ ಸೋಲುಣಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟ ನಡಾಲ್
ಸತ್ಯೇಂದ್ರ ಜೈನ್ ರಿಂದ ನಾಲ್ಕು ನಕಲಿ ಕಂಪನಿಗಳ ಮೂಲಕ 16.39 ಕೋಟಿ ಹಣ ಆಕ್ರಮ ವರ್ಗಾವಣೆಯಾಗಿದೆ. ಸತ್ಯೇಂದ್ರ ಜೈನ್ ಘೋಷಿಸಿದಂತೆ 16.39 ಕೋಟಿ ರೂಪಾಯಿ ಅಘೋಷಿತ ಆದಾಯ ಎಂದು 2016 ರಲ್ಲಿ ಘೋಷಣೆ ಮಾಡಿದ್ದಾರೆ. ಇದು ಸತ್ಯವೇ? ಎಂದು ಕೇಜ್ರಿವಾಲ್ ಗೆ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಎಚ್ಚರ ಡಿಕೆಶಿ ಎಚ್ಚರ: ಬಿಜೆಪಿಯಿಂದ ಕಾಂಗ್ರೆಸ್ ಬಣ ರಾಜಕೀಯದ ವ್ಯಂಗ್ಯ, ಸರಣಿ ಟ್ವೀಟ್
16.39 ಕೋಟಿ ರೂಪಾಯಿಗೆ ಸತ್ಯೇಂದ್ರ ಜೈನ್ ಮಾಲೀಕರೆಂದು ಅಂಕುಶ್ ಜೈನ್ ಹೇಳಿದ್ದಾರೆ. ದೆಹಲಿ ಹೈಕೋರ್ಟ್, 2019 ಐ.ಟಿ. ಕಮೀಷನರ್ ಅವರ ಆದೇಶ ಸತ್ಯೇಂದ್ರ ಜೈನ್ ಅವರೇ ಹಣದ ಮಾಲೀಕರು ಎಂದು ಹೇಳಿರುವುದನ್ನು ಎತ್ತಿ ಹಿಡಿದಿದೆ. ನಕಲಿ ಕಂಪನಿಗಳನ್ನು ಸತ್ಯೇಂದ್ರ ಜೈನ್ ನಿರ್ವಹಣೆ ಮಾಡುತ್ತಿದ್ದರು. ಭ್ರಷ್ಟಾಚಾರ ತಡೆ ಕಾಯಿದೆಯಡಿ ಸತ್ಯೇಂದ್ರ ಜೈನ್ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಸಚಿವೆ ವಾಗ್ದಾಳಿ ನಡೆಸಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Wed, 1 June 22