ಕಾಂಗ್ರೆಸ್ ಕುತಂತ್ರ ರಾಜಕಾರಣದಿಂದಲೇ ರೆಡ್ಡಿ & ಯಡ್ಡಿಯೂರಪ್ಪ ಜೈಲುಪಾಲಾಗಿದ್ದರು: ಶ್ರೀರಾಮುಲು ಸ್ಫೋಟಕ ಹೇಳಿಕೆ

| Updated By: ವಿವೇಕ ಬಿರಾದಾರ

Updated on: Dec 04, 2022 | 6:21 PM

ಕಾಂಗ್ರೆಸ್ ಕುತಂತ್ರ ರಾಜಕಾರಣದಿಂದಲೇ ಜನಾರ್ದನ ರೆಡ್ಡಿ ಮತ್ತು ಬಿ. ಎಸ್​ ಯಡಿಯೂರಪ್ಪ ಜೈಲುಪಾಲಾಗಿದ್ದರು ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಆರೋಪಿಸಿದ್ದಾರೆ.

ಕಾಂಗ್ರೆಸ್ ಕುತಂತ್ರ ರಾಜಕಾರಣದಿಂದಲೇ ರೆಡ್ಡಿ & ಯಡ್ಡಿಯೂರಪ್ಪ ಜೈಲುಪಾಲಾಗಿದ್ದರು: ಶ್ರೀರಾಮುಲು ಸ್ಫೋಟಕ ಹೇಳಿಕೆ
ಸಾರಿಗೆ ಸಚಿವ ಬಿ ಶ್ರೀರಾಮುಲು
Follow us on

ಬಳ್ಳಾರಿ: ಕಾಂಗ್ರೆಸ್ ಕುತಂತ್ರ ರಾಜಕಾರಣದಿಂದಲೇ ಜನಾರ್ದನ ರೆಡ್ಡಿ (Janardhana Reddy) ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್​ ಯಡಿಯೂರಪ್ಪ (B. S Yediyurappa) ಜೈಲುಪಾಲಾಗಿದ್ದರು ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು (Sriramulu) ಆರೋಪಿಸಿದ್ದಾರೆ. ಕಾಂಗ್ರೆಸ್​ ಕುತಂತ್ರ ರಾಜಕಾರಣಕ್ಕೆ ಬಲಿಪಶುಗಳಾದರು. ರೆಡ್ಡಿ ಮತ್ತು ಯಡ್ಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದವರು ಯಾರು? ಜನಾರ್ದನ ರೆಡ್ಡಿ ಎಲ್ಲ ಆರೋಪಗಳಿಂದ ದೋಷಮುಕ್ತ ಆಗಲಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ರೌಡಿ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿದೆ

ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ರೌಡಿ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿದೆ. ಬಿಜೆಪಿಯಲ್ಲಿ ಇಲ್ಲ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಅಖಂಡ ಶ್ರೀನಿವಾಸ್ ಪೂಜಾರಿ ನಿವಾಸಕ್ಕೆ ಬೆಂಕಿ ಹಚ್ಚಿದ್ದು‌ ಯಾರು? ಮಾಜಿ ಮೇಯರ್ ಸಂಪತ್ ​ಕುಮಾರ್ ಬೆಂಕಿ ಹಚ್ಚಲಿಲ್ಲವೇ? ಬೆಂಕಿ ಹಚ್ಚುವ ಮತ್ತು ರೌಡಿ ಸಂಸ್ಕೃತಿ ಕಾಂಗ್ರೆಸ್​ ಪಕ್ಷದಲ್ಲಿದೆ. ಡಿಕೆ ಶಿವಕುಮಾರ್​ ಸುತ್ತಮುತ್ತಲೂ ನೋಡಿ ಸಿದ್ದರಾಮಯ್ಯ ಮಾತಾಡಲಿ. ಯಾಕೆಂದರೆ ಡಿಕೆಶಿ ಸುತ್ತಮುತ್ತ ಇರೋರು ರೌಡಿಶೀಟರ್​ಗಳು ಎಂದರು.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್  ಮಾಡಿ

Published On - 6:19 pm, Sun, 4 December 22