Udupi News: ಉಡುಪಿಯಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಫ್ಲೆಕ್ಸ್ಗೆ ಹಾನಿ
ಪ್ರಮಾಣವಚನದ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಶುಭಕೋರುವ ಫ್ಲೆಕ್ಸ್ಗಳನ್ನು ಕಿತ್ತೆಸೆಯಲಾಗಿತ್ತು. ಇದೀಗ ಉಡುಪಿಯಲ್ಲಿ ಈ ನಾಯಕರಿಗೆ ಶುಭಕೋರುವ ಫ್ಲೆಕ್ಸ್ ಹಾನಿಗೊಳಿಸಲಾಗಿದೆ.
ಉಡುಪಿ: ಪ್ರಮಾಣವಚನದ ಸಂದರ್ಭದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಅವರಿಗೆ ಶುಭಕೋರುವ ಇಂಗ್ಲಿಷ್ ಫ್ಲೆಕ್ಸ್ಗಳನ್ನು ಕಿತ್ತೆಸೆಯಲಾಗಿತ್ತು. ಇದೀಗ ಉಡುಪಿಯಲ್ಲಿ (Udupi) ಈ ನಾಯಕರಿಗೆ ಶುಭಕೋರುವ ಫ್ಲೆಕ್ಸ್ ಹಾನಿಗೊಳಿಸಲಾಗಿದೆ. ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶುಭಾಶಯ ಕೋರಿ ಉಡುಪಿ ಜಿಲ್ಲೆಯ ಮಲ್ಪೆಯ (Malpe) ಪಡುಕರೆ ಸೇತುವೆ ಬಳಿ ಅಭಿಮಾನಿಗಳು ಫ್ಲೆಕ್ಸ್ ಹಾಕಿದ್ದರು. ಈ ಫ್ಲೆಕ್ಸ್ ಅನ್ನು ಅಲ್ಲಲ್ಲಿ ಹರಿದು ಹಾಕಲಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಮೇ 20ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಬ್ಯಾನರ್ಗಳನ್ನು ಹಾಕಿ ಶುಭಕೋರಲಾಗಿತ್ತು. ಕೆಲವೆಡೆ ಸಿದ್ದರಾಮಯ್ಯಗೆ ಶುಭಕೋರುವ ಪೋಸ್ಟರ್ಗಳನ್ನು ಇಂಗ್ಲಿಷ್ನಲ್ಲಿ ಹಾಕಲಾಗಿತ್ತು. ಇದನ್ನು ನೋಡಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಇಂಗ್ಲಿಷ್ ಪೋಸ್ಟರ್ಗೆ ಮಸಿ ಬಳಿದು ಕಿತ್ತೆಸೆದಿದ್ದರು.
ಇದನ್ನೂ ಓದಿ: ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ
ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಅವರು ಫ್ರೀಡಂಪಾರ್ಕ್ ಸೇರಿದಂತೆ ಒಟ್ಟು ಎರಡು ಕಡೆಗಳಲ್ಲಿ ಪೋಸ್ಟರ್ಗಳನ್ನು ಹಾಕಿದ್ದರು. ಇದಕ್ಕೆ ಮಸಿ ಬಳಿದ ಕನ್ನಡ ಪರ ಕಾರ್ಯಕರ್ತರು ಕನ್ನಡ ಬಳಸಿ ಎಂದು ಪೋಸ್ಟರ್ನಲ್ಲಿ ಬರೆದು ನಂತರ ಹರಿದು ಹಾಕಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Tue, 23 May 23