Sign In

By signing in or creating an account, you agree with Associated Broadcasting Company's Terms & Conditions and Privacy Policy.

Nalin Kumar Kateel: ಉಡುಪಿ ಕೃಷ್ಣ ಮಠ ಕುರಿತ ಹೇಳಿಕೆ; ಮಿಥುನ್​ ರೈ ವಿರುದ್ಧ ಕಟೀಲ್ ಕಿಡಿ

ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚನ್ನರಾಯಪಟ್ಟಣದಲ್ಲಿ ತಿರುಗೇಟು ನೀಡಿದ್ದಾರೆ.

Nalin Kumar Kateel: ಉಡುಪಿ ಕೃಷ್ಣ ಮಠ ಕುರಿತ ಹೇಳಿಕೆ; ಮಿಥುನ್​ ರೈ ವಿರುದ್ಧ ಕಟೀಲ್ ಕಿಡಿ
ನಳಿನ್ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)
Follow us
Ganapathi Sharma
|

Updated on: Mar 08, 2023 | 8:41 PM

ಹಾಸನ: ಉಡುಪಿ ಕೃಷ್ಣ ಮಠಕ್ಕೆ (Udupi Sri Krishna Matha) ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಕಾಂಗ್ರೆಸ್ ನಾಯಕ ಮಿಥುನ್ ರೈ (Mithun Rai) ಹೇಳಿಕೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ (Channarayapatna) ಮಾತನಾಡಿದ ಅವರು, ‘ಇಂಥ ಹೇಳಿಕೆಗಳು ಹಾಗೂ ರಾಜಕಾರಣದಿಂದಲೇ ದೇಶದಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ’ ಎಂದು ಹೇಳಿದ್ದಾರೆ. ಕುಕ್ಕರ್​ ಬಾಂಬ್ ಸ್ಫೋಟ​​ ಮಾಡಿದವನನ್ನು ಅಮಾಯಕ ಎನ್ನುತ್ತಾರೆ. ಅಂಥ ಕಾಂಗ್ರೆಸ್ ನಾಯಕರು ಕುಕ್ಕರ್ ಬಾಂಬ್ ಸ್ಫೋಟದಿಂದ ಗಾಯಗೊಂಡ ಆಟೋ ಚಾಲಕನ ಬಗ್ಗೆ ಕನಿಕರ ತೋರಿಸಲಿಲ್ಲ. ಇದೀಗ ಐಸಿಸ್​ ಉಗ್ರ ಸಂಘಟನೆ ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ಈಗ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ ಎಂದು ಕಟೀಲ್ ಪ್ರಶ್ನಿಸಿದ್ದಾರೆ.

ಲೋಕಾಯುಕ್ತಕ್ಕೆ ಸಂಬಂದಿಸಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಕಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸುಳ್ಳುಗಾರ, ಮೋಸಗಾರ, ವಂಚನೆಗಾರ. ಅಹಿಂದ ಹೆಸರು ಹೇಳಿಕೊಂಡು ಚಳವಳಿ ಮಾಡಿ ಮುಖ್ಯಮಂತ್ರಿ ಆದರು. ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಕನಿಷ್ಠ ಕುರುಬ ಸಮಾಜಕ್ಕೂ ನ್ಯಾಯ ಕೊಡದೇ ಕಡೆಗಣಿಸಿದ್ದಾರೆ. ಹೋದಲ್ಲೆಲ್ಲಾ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಬಡವರಿಗೆ ಉಚಿತವಾಗಿ ನಾನೇ ಅಕ್ಕಿ ಕೊಟ್ಟೆ ಅಂತ ಹೇಳುತ್ತಿದ್ದಾರೆ. ಅವರು ಕೊಟ್ಟಿದ್ದು ಬರೀ 3 ರೂಪಾಯಿ ಮಾತ್ರ. ಕೇಂದ್ರ ಕೊಟ್ಟಿದ್ದು 27 ರೂಪಾಯಿ. ನಮ್ಮ ರಾಜ್ಯಕ್ಕೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ ಎಂದು ಕಟೀಲ್ ಟೀಕಿಸಿದ್ದಾರೆ.

ಹಾಸನ, ಹಳೇ ಮೈಸೂರು ಭಾಗದಲ್ಲಿ ನಮಗೆ ಬೆಂಬಲ ಸಿಗುತ್ತಿದೆ. ಹಾಸನ, ಮಂಡ್ಯ, ರಾಮನಗರ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು: ಚುನಾವಣೆ ಹೊತ್ತಲ್ಲೇ ವಿವಾದದ ಕಿಡಿ ಹೊತ್ತಿಸಿದ ಮಿಥುನ್​ ರೈ, ಭುಗಿಲೆದ್ದ ಆಕ್ರೋಶ

ಬಿಜೆಪಿ 40 ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ನಾಗಾಲ್ಯಾಂಡ್​ ಚುನಾವಣೆಯಲ್ಲಿ ಈ ಬಾರಿ ಏನು ಫಲಿತಾಂಶ ಬಂದಿದೆಯೋ ಅದೇ ಫಲಿತಾಂಶ ಕರ್ನಾಟಕದಲ್ಲೂ ಬರಲಿದೆ ಎಂದು ಹೇಳಿದ್ದಾರೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು ಎಂದು ಜನರು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೇರೆ ಪಕ್ಷದ ನಾಯಕರು ಸಂಪರ್ಕದಲ್ಲಿದ್ದಾರೆ; ಕಟೀಲ್ ಬಾಂಬ್

ಬೇರೆ ಪಕ್ಷದ ಪ್ರಮುಖ ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಜೆಡಿಎಸ್​ ಹಾಗೂ ಕಾಂಗ್ರೆಸ್​​ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು ಎಂಬುದಾಗಿ ನಾವು ಯೋಚನೆ ಮಾಡುತ್ತಿದ್ದೇವೆ. ಪಕ್ಷಕ್ಕೆ ಬರುವವರು ತುಂಬಾ ಜನ ಇದ್ದಾರೆ, ಯಾರೆಂದು ಕಾದು ನೋಡಿ ಎಂದು ಅವರು ಹೇಳಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರ್ಪಡೆ ಅವರ ವೈಯಕ್ತಿಕ ವಿಚಾರ. ಸುಮಲತಾ ಸಂಸದರಾಗಿದ್ದಾರೆ, ಆ ಬಗ್ಗೆ ಈಗ ಯಾಕೆ ಚರ್ಚೆ? ನಮ್ಮದು ರಾಷ್ಟ್ರೀಯ ಪಕ್ಷ, ಒತ್ತಡಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ. ಸುಮಲತಾ ಪಕ್ಷಕ್ಕೆ ಸೇರಿದರೆ ಆ ನಂತರ ಕ್ಷೇತ್ರದ ಬಗ್ಗೆ ಚರ್ಚಿಸೋಣ. ಅವರು ಪಕ್ಷಕ್ಕೆ ಬರಲು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದೂ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ