ನನ್ನ ಅವಧಿ ಮುಗಿದಿದೆ ಅಂತಾ ಹೇಳಿದವರು ಯಾರು? ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​

ನನ್ನ ಅವಧಿ ಮುಗಿದಿದೆ ಅಂತಾ ಹೇಳಿದವರು ಯಾರು ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​ ಬೆಂಗಳೂರಿನನಲ್ಲಿ ಹೇಳಿದ್ದಾರೆ.

ನನ್ನ ಅವಧಿ ಮುಗಿದಿದೆ ಅಂತಾ ಹೇಳಿದವರು ಯಾರು? ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್
Edited By:

Updated on: Aug 10, 2022 | 5:05 PM

ಬೆಂಗಳೂರು:  ನನ್ನ ಅವಧಿ ಮುಗಿದಿದೆ ಅಂತಾ ಹೇಳಿದವರು ಯಾರು? ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​ (Nalin Kumar Kateel) ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವಧಿ ಮುಗಿದಾಗ ಸಹಜವಾಗಿ ಬದಲಾವಣೆ ಆಗುತ್ತದೆ. ಇದನ್ನೇ ಮಾಜಿ  ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ (BS Yadiyurappa) ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು ಮುಖ್ಯಮಂತ್ರಿ ಬದಲಾವಣೆಯಿಲ್ಲ. ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿವೆ. ರಾಜ್ಯದಲ್ಲಿ ನೆರೆ ಇದ್ದರೂ ೧೦೦ ಕೋಟಿ ಹಣ ಖರ್ಚು ಮಾಡಿ ಸಿದ್ದರಾಮೋತ್ಸವ ಮಾಡಿದ್ದಾರೆ. ಕಾಂಗ್ರೆಸ್ ಆಂತರಿಕ ಜಗಳ ಮುಂದುವರೆದಿದೆ. ಅದನ್ನೆಲ್ಲಾ ಮುಚ್ಚಲು ಇದನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

2023ರ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ವಾರ್ ರೂಮ್ ತೆರೆದಿದೆ. ಸಾಮಾಜಿಕ ಜಾಲತಾಣದ ಅನುಕೂಲತೆಗೆ ತೆರೆದಿದ್ದೇವೆ. ಕಾರ್ಯ ಯೋಜನೆಗಳನ್ನು ಜನರಿಗೆ ತಿಳಿಸಲು ಕಾಲ್ ಸೆಂಟರ್ ಆರಂಭ ಮಾಡುತ್ತಿದ್ದೇವೆ ಎಂದರು.

Published On - 5:05 pm, Wed, 10 August 22