ಮಾಟಮಂತ್ರವನ್ನು ಆಶ್ರಯಿಸುವುದು, ಕಪ್ಪು ಬಟ್ಟೆ ಧರಿಸುವುದರ ಮೂಲಕ ಹತಾಶೆ ಮುಗಿಯುವುದಿಲ್ಲ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಮಾಟಮಂತ್ರವನ್ನು ಪ್ರಚಾರ ಮಾಡುವ ಪ್ರಯತ್ನ ನಡೆದಿರುವುದನ್ನು ನಾವು ಆಗಸ್ಟ್ 5 ರಂದು ನೋಡಿದ್ದೇವೆ. ಈ ಜನರು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ತಮ್ಮ ಹತಾಶೆಯ ಅವಧಿಯು ಕೊನೆಗೊಳ್ಳುತ್ತದೆ...

ಮಾಟಮಂತ್ರವನ್ನು ಆಶ್ರಯಿಸುವುದು, ಕಪ್ಪು ಬಟ್ಟೆ ಧರಿಸುವುದರ ಮೂಲಕ ಹತಾಶೆ ಮುಗಿಯುವುದಿಲ್ಲ: ಕಾಂಗ್ರೆಸ್ ವಿರುದ್ಧ  ಮೋದಿ ವಾಗ್ದಾಳಿ
ನರೇಂದ್ರ ಮೋದಿ
TV9kannada Web Team

| Edited By: Rashmi Kallakatta

Aug 10, 2022 | 7:05 PM

ದೇಶದಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ (Congress) ಕಪ್ಪು ಬಟ್ಟೆ ಧರಿಸಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ವಾಗ್ದಾಳಿ ನಡೆಸಿದ್ದು, ‘ಕೆಲವರು ಹತಾಶೆ ಮತ್ತು ನಕಾರಾತ್ಮಕತೆಯಲ್ಲಿ ಮುಳುಗಿ ಮಾಟಮಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾಟಮಂತ್ರವನ್ನು ಪ್ರಚಾರ ಮಾಡುವ ಪ್ರಯತ್ನ ನಡೆದಿರುವುದನ್ನು ನಾವು ಆಗಸ್ಟ್ 5 ರಂದು ನೋಡಿದ್ದೇವೆ. ಈ ಜನರು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ತಮ್ಮ ಹತಾಶೆಯ ಅವಧಿಯು ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತಾರೆ ಎಂದು ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ. ಪಾಣಿಪತ್‌ನಲ್ಲಿ 900 ಕೋಟಿ ರೂಪಾಯಿ ಮೌಲ್ಯದ ಸೆಕೆಂಡ್ ಜನರೇಷನ್ ಎಥೆನಾಲ್ ಸ್ಥಾವರವನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ, ಕೆಲವು ವಿರೋಧ ಪಕ್ಷಗಳು ಉಚಿತ ಉಡುಗೊರೆ ನೀಡುವ ರಾಜಕೀಯದಲ್ಲಿ ತೊಡಗಿವೆ. ಇಂತಹ ವಿಷಯಗಳು ಹೊಸ ತಂತ್ರಜ್ಞಾನದ ಹೂಡಿಕೆಗೆ ಅಡ್ಡಿಯಾಗುವುದರಿಂದ ರಾಷ್ಟ್ರಕ್ಕೆ ಅಪಚಾರ ಮಾಡುತ್ತವೆ ಎಂದಿದ್ದಾರೆ ಮೋದಿ.

ಅವರು ಎಷ್ಟೇ ಮಾಟಮಂತ್ರ ಮಾಡಿದರೂ, ಮೂಢನಂಬಿಕೆಗಳನ್ನು ನಂಬಿದರೂ ಜನರು ಅವರನ್ನು ಎಂದಿಗೂ ನಂಬುವುದಿಲ್ಲ ಎಂದು ಈ ಜನರಿಗೆ ತಿಳಿದಿಲ್ಲ ಎಂದು ಮೋದಿ ಕಾಂಗ್ರೆಸ್​​ನ್ನು ಉಲ್ಲೇಖಿಸದೆಯೇ ಹೇಳಿದ್ದಾರೆ . ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಆಗಸ್ಟ್ 5 ರಂದು ಸಂಸತ್ತಿನಲ್ಲಿ ಮತ್ತು ಹೊರಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿತ್ತು.

ಕಾಂಗ್ರೆಸ್ ಪಕ್ಷದ ಈ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಅಮಿತ್ ಶಾ, ಆಗಸ್ಟ್ 5 ರಂದು ಕಾಂಗ್ರೆಸ್  ಕಪ್ಪು  ಬಟ್ಟೆ ತೊಟ್ಟಿದ್ದರ ಹಿಂದೆ ಬೇರೊಂದು ಉದ್ದೇಶವಿದೆ ಎಂದಿದ್ದಾರು. ಕಾಂಗ್ರೆಸ್  ಈ ದಿನವನ್ನು ಪ್ರತಿಭಟನೆಗಾಗಿ ಆಯ್ಕೆ ಮಾಡಿದ್ದು ಕಪ್ಪು ಬಟ್ಟೆಗಳನ್ನು ಧರಿಸಿದೆ. ಯಾಕೆಂದರೆ ಅವರು ತಮ್ಮ ತುಷ್ಟೀಕರಣದ ರಾಜಕೀಯವನ್ನು ಮತ್ತಷ್ಟು ಉತ್ತೇಜಿಸಲು ಸೂಕ್ಷ್ಮ ಸಂದೇಶವನ್ನು ನೀಡಲು ಬಯಸುತ್ತಾರೆ. 2020ರಲ್ಲಿ ದಿನವೇ ಪ್ರಧಾನಿ ಮೋದಿ ರಾಮ ಜನ್ಮಭೂಮಿಗೆ ಅಡಿಪಾಯ ಹಾಕಿದ್ದು ಎಂದಿದ್ದಾರೆ ಅಮಿತ್ ಶಾ.ಇಂದು ಅಯೋಧ್ಯೆಯಲ್ಲಿ ರಾಮ ಮಂದಿರದ (Ram temple in Ayodhya)ಶಂಕುಸ್ಥಾಪನಾ ಸಮಾರಂಭದ ವರ್ಷಾಚರಣೆ ಎಂದ ಅಮಿತ್ ಶಾ, ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ರಾಮ ಜನ್ಮಭೂಮಿಯ ಪ್ರತಿಷ್ಠಾಪನಾ ಸಮಾರಂಭದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಮತ್ತು ತುಷ್ಟೀಕರಣ ನೀತಿಯನ್ನು ಮುಂದುವರಿಸುತ್ತಿದ್ದೇವೆ ಎಂಬ ಸೂಕ್ಷ್ಮ ಸಂದೇಶವನ್ನು ರವಾನಿಸುತ್ತಿದೆ ಎಂದಿದ್ದಾರೆ.  “ಇದು ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ. ಅವರು ಪ್ರತಿದಿನ ಏಕೆ ಪ್ರತಿಭಟನೆಗಳನ್ನು ನಡೆಸುತ್ತಾರೆ? ಕಾಂಗ್ರೆಸ್ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ತುಷ್ಟೀಕರಣ ನೀತಿಯನ್ನು ಮರೆಮಾಚುವ ರೀತಿಯಲ್ಲಿ ವಿಸ್ತರಿಸಿದ್ದಾರೆ ಎಂದು ಶಾ ಹೇಳಿದ್ದಾರೆ.

ಪ್ರತಿಭಟನೆಯ ಸಮಯವನ್ನು ಪ್ರಶ್ನಿಸಿದ ಅಮಿತ್ ಶಾ ಇಂದು, ಜಾರಿ ನಿರ್ದೇಶನಾಲಯವು ಯಾರನ್ನೂ ಕರೆದಿಲ್ಲ ಅಥವಾ ಯಾರನ್ನೂ ವಿಚಾರಣೆ ಮಾಡಿಲ್ಲ, ಯಾವುದೇ ದಾಳಿ ನಡೆದಿಲ್ಲ .ಇಂದು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

550 ವರ್ಷಗಳ ಹಿಂದಿನ ಸಮಸ್ಯೆಗೆ ಶಾಂತಿಯುತ ಪರಿಹಾರ ಒದಗಿಸಿ, ರಾಮ ಜನ್ಮಭೂಮಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದು ಇದೇ ದಿನ. ದೇಶದಲ್ಲಿ ಎಲ್ಲಿಯೂ ಗಲಭೆ ಹಿಂಸಾಚಾರ ನಡೆದಿಲ್ಲ. ತುಷ್ಟೀಕರಣ ನೀತಿ ದೇಶಕ್ಕಾಗಲೀ, ಕಾಂಗ್ರೆಸ್‌ಗಾಗಲೀ ಒಳ್ಳೆಯದಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ಹೆಚ್ಚಿನ  ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada