ಅವರ ನಡುವಿನ ಕಿತ್ತಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ, ಕೆಡವಲು ನಾವ್ಯಾರು?: ಆರ್​ ಅಶೋಕ

| Updated By: ವಿವೇಕ ಬಿರಾದಾರ

Updated on: Nov 18, 2023 | 12:09 PM

ಕಾವೇರಿ ಹೊರಾಟದಲ್ಲಿ ಜನರಿಗೆ ಮಾಡಿದ ಮೋಸ, ಬರಗಾಲದಲ್ಲಿ ಮಂತ್ರಿಗಳು ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಟೀಮ್ ಮಾಡಿಕೊಂಡು ಸಭೆ ಮಾಡುತ್ತಿದ್ದಾರೆ.‌ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, 60% ಪರ್ಸೆಂಟ್ ಸರ್ಕಾರ ಅಂತ ಜನರು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್​ ಅಶೋಕ ಹೇಳಿದರು.

ಅವರ ನಡುವಿನ ಕಿತ್ತಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ, ಕೆಡವಲು ನಾವ್ಯಾರು?: ಆರ್​ ಅಶೋಕ
ವಿಪಕ್ಷ ನಾಯಕ ಆರ್ ಅಶೋಕ
Follow us on

ಬೆಂಗಳೂರು ನ.18: ರಾಜ್ಯ ಸರ್ಕಾರ ಶಾಸಕರಿಗೆ ಅನುದಾನ ನೀಡುತ್ತಿಲ್ಲ, ಹೀಗಾಗಿ ಅವರು ಜನರ ಬಳಿ ಹೋಗುತ್ತಿಲ್ಲ. ಉಚಿತ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಎಲ್ಲ ಹಣ ಪಂಚರಾಜ್ಯ ಚುನಾವಣೆಗೆ ಹೋಗುತ್ತಿದೆ. ಅವರ ಸರ್ಕಾರವನ್ನು ಕೆಡವಲು ನಾವ್ಯಾರು? ಹಿಂದೆ ಅವರ ಸರ್ಕಾರ (Karnataka Government) ಹೇಗೆ ಬಿದ್ದು ಹೋಯಿತು ಅಂತ ಅವರಿಗೆ ಗೊತ್ತಿದೆ. ಅವರ ನಡುವಿನ ಕಿತ್ತಾಟದಿಂದಲೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ (R Ashok) ಹೇಳಿದರು.

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು, ಏನೂ ಇಲ್ಲ ಅಂದರೆ ಗೃಹ ಸಚಿವ ಡಾ. ಜಿ ಪರಮೇಶ್ವರ ಮನೆಯಲ್ಲಿ ಯಾಕೆ ಸಭೆ ಮಾಡಿದರು? ಪಕ್ಕದ ಮನೆಯಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ದೂರ ಇಟ್ಟು ಸಭೆ ಮಾಡಿದ್ದೇಕೆ? ಎಂದು ಪ್ರಶ್ನಿಸಿದರು.

ಕಾವೇರಿ ಹೊರಾಟದಲ್ಲಿ ಜನರಿಗೆ ಮಾಡಿದ ಮೋಸ, ಬರಗಾಲದಲ್ಲಿ ಮಂತ್ರಿಗಳು ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಟೀಮ್ ಮಾಡಿಕೊಂಡು ಸಭೆ ಮಾಡುತ್ತಿದ್ದಾರೆ.‌ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, 60% ಪರ್ಸೆಂಟ್ ಸರ್ಕಾರ ಎಂದು ಜನರು ಹೇಳುತ್ತಿದ್ದಾರೆ ಎಂದು ಹೇಳಿದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ

ಇನ್ನು ರಾಜ್ಯಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಸ್ವಪಕ್ಷದ ಹಲವು ನಾಯಕರು ಅಸಮಾಧನಗೊಂಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಹೈಕಮಾಂಡ್ ಸೂಚನೆ ನೀಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಉತ್ತರ-ದಕ್ಷಿಣ ಕರ್ನಾಟಕ ಅಂತ ಇಲ್ಲ. ನಾವೆಲ್ಲರೂ ಒಟ್ಟಾಗಿ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮತೀಯ ವಿಚಾರಗಳ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ ಆರ್​ ಅಶೋಕ್​

ಆತ್ಮಿಯ ಗೆಳೆಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಪಕ್ಷದ ಸಂಘಟನೆ, ಬೆಳಗಾವಿ ಅಧಿವೇಶದಲ್ಲಿ ನಮ್ಮ ನಿಲುವು, ಲೋಕಸಭೆ ಚುನಾವಣೆ ಸಿದ್ದತೆ ಕುರಿತು ಒಂದು ಗಂಟೆ ಚರ್ಚೆ ಮಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಕೋರ್ ಕಮಿಟಿ ರಚನೆ ಮಾಡಿ, ಅಧಿವೇಶನದಲ್ಲಿ ಚರ್ಚಿಸುವ ಕುರಿತು ಸಭೆ ಮಾಡಲಾಗುವುದು ಎಂದು ತಿಳಿಸಿದರು.

ವಿರೋಧ ಪಕ್ಷ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಮಾಜಿ ಸಚಿವ ಆರ್​ ಅಶೋಕ ಸ್ವಪಕ್ಷದ ನಾಯಕರು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಭೇಟಿ ನೀಡಿದ ಬಳಿಕ ಇದೀಗ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಾಸಕ ಡಾ.ಅಶ್ವತ್ಥ್ ನಾರಾಯಣ ನಿವಾಸಕ್ಕೆ ಭೇಟಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ