Arun Singh: ಕೋರ್​ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ದ ಉಸ್ತುವಾರಿ ಅರುಣ್ ಸಿಂಗ್ ಫುಲ್ ಗರಂ!

| Updated By: ಸಾಧು ಶ್ರೀನಾಥ್​

Updated on: Oct 07, 2022 | 2:08 PM

Pay CM: ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ದ ಫುಲ್ ಗರಂ ಆಗಿದ್ದಾರೆ. ಕಾಂಗ್ರೆಸ್​ನ ಪೇ ಸಿಎಂ ಕ್ಯಾಂಪೇನ್​ ವಿರುದ್ಧ ಅರುಣ್ ಸಿಂಗ್ ಗರಂ ಆಗಿದ್ದಾರೆ.

Arun Singh: ಕೋರ್​ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ದ ಉಸ್ತುವಾರಿ ಅರುಣ್ ಸಿಂಗ್ ಫುಲ್ ಗರಂ!
Arun Singh: ಕೋರ್​ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರ ವಿರುದ್ದ ಉಸ್ತುವಾರಿ ಅರುಣ್ ಸಿಂಗ್ ಫುಲ್ ಗರಂ!
Follow us on

ಬೆಂಗಳೂರು: ಇಂದು ಬೆಳಗ್ಗೆಯಿಂದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಾಂದ್ಲಾಜೆ, ಸಿಟಿ ರವಿ, ಜಗದೀಶ್ ಶೆಟ್ಟರ್, ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದ ಭಗಂವತ ಖೂಬಾ, ನಾರಾಯಣ ಸ್ವಾಮಿ, ಅರುಣಾ ಸೇರಿದಂತೆ ಹಲವರು ಸಭಣೆಯಲ್ಲಿ ಭಾಗವಹಿಸಿದ್ದಾರೆ. ಸಚಿವ ಗೋವಿಂದ ಕಾರಜೋಳ ಹಾಗೂ ಶ್ರೀರಾಮುಲು ಸಹ ಉಪಸ್ಥಿತರಿದ್ದಾರೆ.

ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಅವರು (BJP national general secretary and Karnataka in-charge Arun Singh) ರಾಜ್ಯ ಬಿಜೆಪಿ ನಾಯಕರ ವಿರುದ್ದ ಫುಲ್ ಗರಂ ಆಗಿದ್ದಾರೆ. ಕಾಂಗ್ರೆಸ್​ನ ಪೇ ಸಿಎಂ ಕ್ಯಾಂಪೇನ್​ ವಿರುದ್ಧ ಅರುಣ್ ಸಿಂಗ್ ಗರಂ ಆಗಿದ್ದಾರೆ. ಅಭಿಯಾನ ನಡೆಯುವವರೆಗೂ ಸರ್ಕಾರ ಏನು ಮಾಡ್ತಿತ್ತು? ಸಚಿವರು ಏನ್ ಮಾಡ್ತಾ ಇದ್ದರು ಎಂದು ಪ್ರಶ್ನೆಗಳ ಮೂಲಕ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ‘ಪೇ ಸಿಎಂ’ ಅಭಿಯಾನ (Pay CM) ದೇಶದಲ್ಲೇ ರಿಜಿಸ್ಟರ್ ಆಗಿದೆ. ಪೇ ಸಿಎಂಗೆ ಕೌಂಟರ್ ಕೊಡುವಲ್ಲಿ ರಾಜ್ಯ ಬಿಜೆಪಿ ವಿಫಲವಾಗಿದೆ ಎಂಬುದು ಅರುಣ್ ಸಿಂಗ್​ ಅವರ ಪ್ರಮುಖ ಆಕ್ಷೇಪಣೆಯಾಗಿತ್ತು.

ಹೆದರಿಕೊಳ್ಳಲು ಕಾಂಗ್ರೆಸ್ ನವರು ಪ್ರೇತ-ಭೂತಗಳಲ್ಲ ಅಂತಾ ಅಂದುಕೊಂಡಿದ್ದೇನೆ: ಸಿ ಟಿ ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಡಿಸೆಂಬರ್ ಅಂತ್ಯದೊಳಗೆ ಬೇರೆ ಬೇರೆ ಸಮುದಾಯಗಳು ಹಾಗೂ ಮೋರ್ಚಾ ಸಮಾವೇಶ ಮಾಡಲು ತೀರ್ಮಾನ ಮಾಡಿದ್ದೇವೆ. ಕಾಂಗ್ರೆಸ್ ಪಾದಯಾತ್ರೆಯಿಂದ ಹೆದರಿದ ಸಮಾವೇಶನಾ? ಇದು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರಜಾಪ್ರಭುತ್ವ ದಲ್ಲಿ ಹೆದರಿಕೆಗೆ ಅವಕಾಶ ಇಲ್ಲ. ಹೆದರಿಕೊಳ್ಳಲು ಕಾಂಗ್ರೆಸ್ ನವರು ಪ್ರೇತ-ಭೂತಗಳಲ್ಲ ಅಂತಾ ನಾನು ಅಂದುಕೊಂಡಿದ್ದೇನೆ. ಅವರು ಭೂತ-ಪ್ರೇತ ಅಂತಾದರೆ ಅವರೇ ಹೇಳಲಿ ಎಂದು ಕಟಕಿಯಾಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಿ.ಟಿ. ರವಿ ಸ್ವಾತಂತ್ರ್ಯ ಬಂದಾಗ ಜನ ಸಂಖ್ಯೆ 38 ಕೋಟಿ ಇತ್ತು. ಈಗ 138 ಕೋಟಿ ಆಗಿದ್ದು ಸುಳ್ಳಾ? ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವವರು ಸಿದ್ದರಾಮಯ್ಯ! ಸುಳ್ಳನ್ನ ಅವರಷ್ಟು ಕರಗತ ಮಾಡಿಕೊಂಡವರು ಯಾರೂ ಇಲ್ಲ. ಸುಳ್ಳಿನ ವಿಚಾರದಲ್ಲಿ ಅವರಿಗೆ ಪೈಪೋಟಿ ನೀಡಲು ಆಗುವುದಿಲ್ಲ. ಸತ್ಯದ ತಲೆ ಮೇಲೆ ಹೊಡೆಯುವ ಹಾಗೆ ಸುಳ್ಳು ಹೇಳುತ್ತಾರೆ. ಸುಳ್ಳೇ ಎಲ್ಲವಯ್ಯ ಎಂಬುದು ಸಿದ್ದರಾಮಯ್ಯನವರ ಸಿದ್ಧಾಂತ ಎಂದು ವಾಗ್ದಾಳಿ ನಡೆಸಿದರು. ರವಿ ಸುಳ್ಳುಗಾರ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಪ್ರಸ್ತಾಪಿಸಿ ಅವರು ಮಾತನಾಡಿದರು.

ಪಿಎಂ ಮೋದಿ ಸಮಯ ಲಭ್ಯತೆ ನೋಡಿ ಯುವ ಸಮಾವೇಶ:

ಬಿಜೆಪಿಯ ವಿವಿಧ ಸಮಾವೇಶಗಳ ಬಗ್ಗೆ ಇಂದಿನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪ್ರತಿ ಸಮುದಾಯವನ್ನೂ ಸಂಪರ್ಕಿಸುವ ನಿಟ್ಟಿನಲ್ಲಿ ಸಮಾವೇಶ ನಡೆಸಲು ಚರ್ಚೆ ನಡೆಯಿತು. ಬಿಜೆಪಿ ರೈತ, ಎಸ್ ಸಿ, ಎಸ್ ಟಿ, ಓಬಿಸಿ, ಮಹಿಳಾ ಹಾಗೂ ಯುವ ಸಮಾವೇಶ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರುಗಳನ್ನು ಈ ಸಮಾವೇಶಗಳಿಗೆ ಆಹ್ವಾನಿಸಲು ತೀರ್ಮಾನ ಮಾಡಲಾಯಿತು. ಪ್ರಧಾನಿ ಮೋದಿ ಅವರ ಸಮಯ ಲಭ್ಯತೆ ನೋಡಿಕೊಂಡು ಶಿವಮೊಗ್ಗ ಅಥವಾ ಮಂಗಳೂರಿನಲ್ಲಿ ಯುವ ಸಮಾವೇಶ ನಡೆಸಲು ಚಿಂತಿಸಲಾಗಿದೆ.

Published On - 1:29 pm, Fri, 7 October 22