ಉಡುಪಿ: ಕಾರ್ಕಳ ಶಾಸಕ ಸುನೀಲ್ ಕುಮಾರ್ (Sunil Kumar) ಅವರ ವಿರುದ್ಧ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಮಾನಹಾನಿ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಸುನೀಲ್ ಕುಮಾರ್ ಬಿಜೆಪಿ (BJP) ವಿಜಯೋತ್ಸವ ಸಮಾರಂಭದಲ್ಲಿ ಸುನೀಲ್ ಕುಮಾರ್ ಪ್ರಮೋದ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್, ಹಣ ಪಡೆದು ಸ್ಪರ್ಧೆ ಮಾಡುತ್ತಾರೆ ಎಂದು ಆರೋಪ ಮಾಡಿದ್ದರು. ಇದೇ ಹೇಳಿಕೆ ವಿರುದ್ಧ ಪ್ರಮೋದ್ ಮುತಾಲಿಕ್ ಕಾರ್ಕಳ ನಗರದ ಠಾಣೆಗೆ ಸಂಗಡಿಗರೊಂದಿಗೆ ತೆರಳಿ ಶಾಸಕ ಸುನೀಲ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಮತ್ತು ಶಿಷ್ಯ, ಮಾಜಿ ಸಚಿವ ಸುನಿಲ್ ಕುಮಾರ್ ಮಧ್ಯದ ಕಾಳಗ ಅಂತ್ಯವಾಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಶಿಷ್ಯನ ವಿರುದ್ಧ ಗುರು ಪ್ರಮೋದ್ ಮುತಾಲಿಕ್ ತೊಡೆ ತಟ್ಟಿದ್ದರು. ಈ ವೇಳೆ ಗುರುವಿನ ವಿರುದ್ಧ ಸುನಿಲ್ ಕುಮಾರ್ ತುಟಿ ಪಿಟಿಕ್ ಎಂದಿರಲಿಲ್ಲ.
ಮೇ.15 ರಂದು ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರಮೋದ್ ಮುತಾಲಿಕ್ ಅವರು ಕಾಂಗ್ರೆಸ್ನವರಿಂದ ಹಣ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಆರೋಪ ಮಾಡಿದ್ದರು. ಇದಕ್ಕೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದರು. ಎಂದು ಸುನಿಲ್ ಕುಮಾರ್ ವಿರುದ್ಧ ಆರೋಪಿಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಬರುವ ಕೇಂದ್ರದ ಹಣ ಕಡಿಮೆ ಎಂಬ ಆರೋಪಕ್ಕೆ ಅಂಕಿ-ಸಂಖ್ಯೆಯೊಂದಿಗೆ ತಿರುಗೇಟು ಕೊಟ್ಟ ಸಚಿವ ಜೋಶಿ
ತನ್ನ ವಿರುದ್ಧದ ಆರೋಪಕ್ಕೆ ಮಾರಿಗುಡಿಯಲ್ಲಿ ಪ್ರಮಾಣ ಮಾಡಿ ಬಂದಿದ್ದೇನೆ. ನಾನು ಕೇವಲ ಆರೋಪ ಮಾಡಿಲ್ಲ ದಾಖಲೆ ಬಹಿರಂಗಗೊಳಿಸಿದ್ದೇನೆ. ಅಭಿವೃದ್ಧಿ ಜೊತೆ ಕಮಿಷನ್ ಮತ್ತು ಕಲೆಕ್ಷನ್ ಕೂಡ ಮಾಡಿದ್ದೀರಿ. ನನ್ನನ್ನು ಡೀಲ್ ಮಾಸ್ಟರ್ ಎಂದು ಕರೆದಿದ್ದೀರಿ. ಹಣ ಗಳಿಸುವ ಉದ್ದೇಶ ಇದ್ದಿದ್ದರೇ ಧಾರವಾಡದಿಂದ ಕಾರ್ಕಳಕ್ಕೆ ಬರಬೇಕಾಗಿರಲಿಲ್ಲ. 48 ವರ್ಷ ಹೋರಾಟ ಮಾಡಬೇಕಾಗಿ ಇರಲಿಲ್ಲ. ನಾನು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಯಾವುದೇ ಉತ್ತರ ನೀಡಿಲ್ಲ. ಕಾರ್ಕಳಕ್ಕೆ ಬಂದು ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ ಎಂದು ಹೇಳಿದ್ದರು.
ಸುನಿಲ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಕನ್ನಡಿ ಮುಂದೆ ನಿಂತು ಸುನಿಲ್ ಕುಮಾರ್ ಅವಲೋಕನ ಮಾಡಿಕೊಳ್ಳಬೇಕು. ಮಾಜಿ ಸಚಿವ ಈಶ್ವರಪ್ಪ ಇಂಧನ ಇಲಾಖೆ ಭ್ರಷ್ಟಾಚಾರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದರು. ಕಾರ್ಕಳದ ಅಧಿಕಾರಿಗಳು ಕೂಡ ಆರೋಪ ಮಾಡಿದ್ದರು. ಕಾರ್ಕಳದ ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡಿ ಬಂದಿದ್ದೇನೆ. ಮಾರಿಗುಡಿಗೆ ಹೋಗಿ ತೆಂಗಿನಕಾಯಿ ಇಟ್ಟು ಪ್ರಮಾಣ ಮಾಡುವ ನೈತಿಕತೆ ನಿಮಗೆ ಇದೆಯಾ? ಭ್ರಷ್ಟತೆ, ವಂಚನೆ, ಮೋಸದಿಂದ ಗೆದ್ದಿದ್ದೀರಿ ನಿಮಗೆ ಅಭಿನಂದನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Sun, 21 May 23