ಮೊಹಮ್ಮದ್ ನಲಪಾಡ್ 2022ರ ಜನವರಿ 31ರಿಂದ ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ; ಅಲ್ಲಿಯವರೆಗೆ ರಕ್ಷಾ ರಾಮಯ್ಯ ಮುಂದುವರಿಕೆ

ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ ತಮಗೇ ಬೇಕು ಎಂದು ಚುನಾವಣೆಯಲ್ಲಿ ಜಯ ಸಾಧಿಸಿದ್ದ ನಲಪಾಡ್ ಹ್ಯಾರಿಸ್ ಪಟ್ಟು ಹಿಡಿದಿದ್ದರು. ಅಧ್ಯಕ್ಷ ಪಟ್ಟ ಬಿಟ್ಟು ಬೇರೆ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.

ಮೊಹಮ್ಮದ್ ನಲಪಾಡ್ 2022ರ ಜನವರಿ 31ರಿಂದ ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ; ಅಲ್ಲಿಯವರೆಗೆ ರಕ್ಷಾ ರಾಮಯ್ಯ ಮುಂದುವರಿಕೆ
ನಲಪಾಡ್​-ರಕ್ಷಾ ರಾಮಯ್ಯ
Follow us
TV9 Web
| Updated By: guruganesh bhat

Updated on:Jul 05, 2021 | 11:16 PM

ಬೆಂಗಳೂರು: ಭಾರಿ ಹಣಾಹಣಿಯ ಸ್ಪರ್ಧೆ ನಡೆದಿದ್ದ ರಾಜ್ಯ ಕಾಂಗ್ರೆಸ್​​ ಯುವ ಅಧ್ಯಕ್ಷ ಸ್ಥಾನಕ್ಕೆ ಅಂತೂ ಹೆಸರು ಘೋಷಣೆಯಾಗಿದೆ. 2022ರ ಜನವರಿ 31ರಂದು ನಲಪಾಡ್ ಹ್ಯಾರಿಸ್ ಅಧಿಕಾರ ಸ್ವೀಕರಿಸಲಿದ್ದು, 2022 ಜನವರಿ31ರವರೆಗೆ ರಕ್ಷಾ ರಾಮಯ್ಯ ಕಾಂಗ್ರೆಸ್ ಯುವ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಈ ಕುರಿತು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅಧಿಕೃತ​ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪಕ್ಷ ಯಾವುದೇ ಅಧಿಕಾರ, ಹೊಣೆ ನೀಡಿದರೂ ನಿರ್ವಹಿಸುವೆ. ಕಾಂಗ್ರೆಸ್‌ ಈಗ ಅಧಿಕಾರ ನೀಡಿದೆ, ಪಕ್ಷ ತಾಯಿ ಇದ್ದಂತೆ. ಯುವಕರನ್ನು ಕಾಂಗ್ರೆಸ್‌ಗೆ ಸೇರಿಸಲು ನನಗೆ ಹುದ್ದೆ ಬೇಕಿತ್ತು. ಅಧ್ಯಕ್ಷ ಸ್ಥಾನ ನೀಡುವ ತನಕ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವುದಾಗಿ ಪಕ್ಷ ಹೇಳಿದೆ. ಪಕ್ಷ ನೀಡಿದ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುವೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ನನಗೆ ಸೂಚನೆ ನೀಡಿದ್ದಾರೆ ಎಂದು ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಭೇಟಿ ಬಳಿಕ ಮೊಹಮ್ಮದ್ ನಲಪಾಡ್ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ ತಮಗೇ ಬೇಕು ಎಂದು ಚುನಾವಣೆಯಲ್ಲಿ ಜಯ ಸಾಧಿಸಿದ್ದ ನಲಪಾಡ್ ಹ್ಯಾರಿಸ್ ಪಟ್ಟು ಹಿಡಿದಿದ್ದರು. ಅಧ್ಯಕ್ಷ ಪಟ್ಟ ಬಿಟ್ಟು ಬೇರೆ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.

ಇತಿಹಾಸದಲ್ಲಿ ಯಾರೂ ಪಡೆಯದಷ್ಟು ಮತ ಪಡೆದಿದ್ದೇನೆ. 64,203 ಮತ ಬಂದಿದೆ. ಮತದಾರರು ನನಗೆ ಅಧ್ಯಕ್ಷನಾಗಲೆಂದೇ ಮತ ಹಾಕಿದ್ದಾರೆ. ಕಾಂಗ್ರೆಸ್ ನನಗೆ ತಾಯಿ ಇದ್ದಂತೆ ನನಗೆ ಅನ್ಯಾಯವಾಗಲ್ಲ ಎಂದು ಭಾವಿಸಿದ್ದೇನೆ. ಅಧ್ಯಕ್ಷ ಸ್ಥಾನ ಸಿಗದಿದ್ದರೆ ಕಾರ್ಯಕರ್ತನಾಗಿರುತ್ತೇನೆ. ಯಾವುದೇ ಕಾರಣಕ್ಕೂ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡಲ್ಲ ಎಂದು ನಲಪಾಡ್ ಹ್ಯಾರಿಸ್ ತಿಳಿಸಿದ್ದರು.

ಇನ್ನು ಮತ್ತೊಂದು ಕಡೆ ರಕ್ಷ ರಾಮಯ್ಯ ಅವರು ಎರಡನೆಯ ಸ್ಥಾನದಲ್ಲಿದ್ದು 57,271 ಸಾವಿರ ಮತ ಪಡೆದಿದ್ದರು. ಆದರೆ ರಕ್ಷ ರಾಮಯ್ಯ ಅವರು ಮರು ಎಣಿಕೆ ಮಾಡಿದ್ರೆ ನನ್ನ ಜಯ ಪಕ್ಕಾ ಎಂದು ಮರು ಮತ ಎಣಿಕೆಗೆ ಒತ್ತಾಯಿಸಿದ್ದರು. ಅನರ್ಹತೆಯ ಹಿನ್ನೆಲೆಯಲ್ಲಿ ತಮಗೆಲ್ಲಿ ಅಧ್ಯಕ್ಷ ಸ್ಥಾನ ಕೈತಪ್ಪಿಬಿಡುತ್ತದೋ ಎಂದು ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ರನ್ನು ಅನೇಕ ಬಾರಿ ಭೇಟಿಯಾಗಿದ್ದರು. ರಕ್ಷ ರಾಮಯ್ಯ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ.

ಆದರೆ ಕೆಲ ದಿನಗಳ ಹಿಂದೆ, ಕಡಿಮೆ ಮತಗಳು ಪಡೆದರೂ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ರಕ್ಷಾ ರಾಮಯ್ಯ ಅವರು ಕಡಿಮೆ ಮತ ಪಡೆದಿದ್ದರೂ, ಪ್ರತಿ ಸ್ಪರ್ಧಿ ಅನರ್ಹತೆಯ ಆಧಾರದ ಮೇಲೆ ನನ್ನನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ನನಗೂ ಹೆಚ್ಚಿನ‌ ಮತ ಪಡೆದಿರುವ ವಿಶ್ವಾಸವಿದೆ. ಹಾಗಾಗಿ ಮತಗಳ ಮರು ಎಣಿಕೆ ನಡೆಯಲಿ ಎಂದು ರಕ್ಷ ರಾಮಯ್ಯ ಮನವಿ ಮಾಡಿದ್ದರು. ಅದರಂತೆ ಫೇಮ್ ಸಂಸ್ಥೆ ಮೂಲಕ ((Foundation for Advanced Management of Elections -FAME an NGO)) ಮರು ಮತ ಎಣಿಕೆ ನಡೆಸಲು ಎಐಸಿಸಿ ಸೂಚಿಸಿತ್ತು.

ಇದನ್ನೂ ಓದಿ: 

ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

ಸುಮಲತಾ ಅಂಬರೀಶ್ ನನ್ನ ಸ್ನೇಹಿತನ ಅಗಲುವಿಕೆಯನ್ನು ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ: ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ

(President of the State Congress Youth Unit Mohammed Nalapad from January 31 2022 Until then Raksha Ramaiah continuation)

Published On - 6:07 pm, Mon, 5 July 21