AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್​ ಕಚೇರಿಯೊಳಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು

ಅತ್ತ ದೆಹಲಿಯಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸುತ್ತಿದೆ. ಇತ್ತ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ವೇಳೆ ಕಾಂಗ್ರೆಸ್​ ಕಚೇರಿ ಒಳಗೆ ನುಗ್ಗಿದ ಪ್ರಸಂಗವೂ ನಡೆಯಿತು.

ಬೆಳಗಾವಿ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್​ ಕಚೇರಿಯೊಳಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು
ಕಾಂಗ್ರೆಸ್​ ಕಚೇರಿ ಒಳಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು
Sahadev Mane
| Updated By: ವಿವೇಕ ಬಿರಾದಾರ|

Updated on:Feb 07, 2024 | 1:13 PM

Share

ಬೆಳಗಾವಿ, ಫೆಬ್ರವರಿ 07: ರಾಜ್ಯ ಸರ್ಕಾರದ (Karnataka Congress Government) ವಿರುದ್ಧ ಬಿಜೆಪಿ (BJP) ಕಾರ್ಯಕರ್ತರು ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಿದ್ದು, ಬೆಳಗಾವಿಯಲ್ಲಿ (Belagavi) ಕಾಂಗ್ರೆಸ್​ ಕಚೇರಿಯೊಳಗೆ (Congress Office) ನುಗ್ಗಿದರು. ಸಂಸದ ಡಿಕೆ ಸುರೇಶ್ (DK Suresh) ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಕೊನೆಗೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಚೇರಿಯಿಂದ ಎಳೆದು ಹೊರ ತಂದರು.

ಬಳಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾ ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್​ ಆಗಮಿಸಿದ್ದು, ಬಿಜೆಪಿಗರ ಎದುರೇ ಪ್ರಧಾನಿ ಮೋದಿಗೆ ಧಿಕ್ಕಾರ ಎಂದು ಕೂಗಿದರು. ಕೊನೆಗೆ ಪೊಲೀಸರು 30ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನ ವಶಕ್ಕೆ ಪಡೆದರು.

ಬಿಜೆಪಿ ಕಾರ್ಯಕರ್ತರು ಎಮ್ಮೆ, ಹಾಲಿನ ಕ್ಯಾನ್​ ಹಿಡಿದುಕೊಂಡು ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನಾ ಱಲಿ ನಡೆಸಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ ನೇತೃತ್ವದಲ್ಲಿ ಱಲಿ ನಡೆಯಿತು. ರಾಜ್ಯ ಸರ್ಕಾರ ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೀಡುತ್ತಿಲ್ಲ. ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೀಡುತ್ತಿಲ್ಲ, ಕಳೆದ 10 ತಿಂಗಳಲ್ಲಿ 716ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಕತ್ತರಿ ಹಾಕಲಾಗಿದೆ. ರಾಜ್ಯ ಸರ್ಕಾರ ಕೊಡುತ್ತಿದ್ದ ನಾಲ್ಕು ಸಾವಿರ ರೂಪಾಯಿಗೂ ಕತ್ತರಿ ಹಾಕಲಾಗಿದೆ. ಶೀಘ್ರವೇ 4 ಸಾವಿರ ರೂ. ಅನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇಲ್ಲದಿದ್ದರೆ ರಾಜ್ಯಾದ್ಯಂತ ಜಾನುವಾರು ಸಮೇತ ಧರಣಿ ನಡೆಸುವಂತೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ನಮ್ಮ ಧರಣಿಯನ್ನು ಬಿಜೆಪಿ ಏನಾದರೂ ಹೇಳಲಿ, ನಮಗೆ ರಾಜ್ಯ ಜನತೆಯ ಬದುಕು ಮುಖ್ಯ: ಡಿಕೆ ಶಿವಕುಮಾರ್, ಡಿಸಿಎಂ

ಬಿಜೆಪಿ ಪ್ರತಿಭಟನೆ ಕಾರಣ

ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವತಃ 222ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದರೂ, ಈವರೆಗು ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಬರ ಪರಿಹಾರದ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್ ಅಶೋಕ್​​ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್​ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವರಾದ ಕೋಟಾ ಶ್ರೀನಿವಾಸ್​ ಪೂಜಾರಿ ಸೇರಿದಂತೆ ಇನ್ನೂ ಅನೇಕ ನಾಯಕರು ಭಾಗಿಯಾಗಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:12 pm, Wed, 7 February 24

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?