Anurag Thakur: ದೇಶದ ಹೆಸರು ಅಳಿಸಲು ಯೋಚಿಸುವವರು; ರಾಹುಲ್ ಗಾಂಧಿಗೆ ಅನುರಾಗ್ ಠಾಕೂರ್ ತಿರುಗೇಟು

Anurag Thakur hits back at Rahul Gandhi; ರಾಹುಲ್ ಗಾಂಧಿ ಅವರಿಗೆ ಕುಟುಂಬದ ಹಿತಾಸಕ್ತಿಯೇ ಮೊದಲು. ಅವರು ದೇಶದ ಹಿತದ ಬಗ್ಗೆ ಯೋಚಿಸುವುದಿಲ್ಲ ಎಂದು ಠಾಕೂರ್ ಟೀಕಿಸಿದ್ದಾರೆ.

Anurag Thakur: ದೇಶದ ಹೆಸರು ಅಳಿಸಲು ಯೋಚಿಸುವವರು; ರಾಹುಲ್ ಗಾಂಧಿಗೆ ಅನುರಾಗ್ ಠಾಕೂರ್ ತಿರುಗೇಟು
ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)
Follow us
TV9 Web
| Updated By: Ganapathi Sharma

Updated on:Dec 24, 2022 | 3:12 PM

ನವದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatra)  ವೇಳೆ ಬಿಜೆಪಿ (BJP) ಮತ್ತು ಆರ್​ಎಸ್​ಎಸ್ (RSS) ವಿರುದ್ಧ ಟೀಕಾ ಪ್ರಹಾರ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ತಿರುಗೇಟು ನೀಡಿದ್ದಾರೆ. ದೇಶದ ಹೆಸರನ್ನು ಅಳಿಸಿಹಾಕಲು ಯೋಚಿಸುವವರು ಭಾರತವನ್ನು ಒಂದುಗೂಡಿಸುವ ಬಗ್ಗೆ ಮಾತನಾಡುವುದು ಹೇಗೆ ಎಂದು ಠಾಕೂರ್ ಪ್ರಶ್ನಿಸಿದ್ದಾರೆ. ತಮ್ಮ ಯಾತ್ರೆಯ ವೇಳೆ ದ್ವೇಷದ ಬೀಜಗಳನ್ನು ಬಿತ್ತುವವರು, ಪ್ರೀತಿಯ ಅಂಗಡಿ ತೆರೆಯುವ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಕುಟುಂಬದ ಹಿತಾಸಕ್ತಿಯೇ ಮೊದಲು. ಅವರು ದೇಶದ ಹಿತದ ಬಗ್ಗೆ ಯೋಚಿಸುವುದಿಲ್ಲ ಎಂದು ಠಾಕೂರ್ ಟೀಕಿಸಿದ್ದಾರೆ.

‘ಚೀನಾ, ಕೊರಿಯಾ, ಜಪಾನ್ ಸೇರಿದಂತೆ ವಿಶ್ವದಾದ್ಯಂತ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಲಕ್ಷಾಂತರ ಜನ ಆಸ್ಪತ್ರೆ ಸೇರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ದೇಶವನ್ನು ಪಿಡುಗಿನಿಂದ ರಕ್ಷಿಸುವ ಬಗ್ಗೆ ಯೋಚಿಸುವ ಬದಲು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ನಿಯಮಗಳನ್ನು ಗಾಳಿಗೆ ತೂರಿ ಬಡ ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ದೇಶದ ಹೆಸರನ್ನೇ ಅಳಿಸಿಹಾಕಲು ಹೊರಟಿದ್ದಾರೆ. ಅವರಿಗೆ (ರಾಹುಲ್ ಗಾಂಧಿ ಉದ್ದೇಶಿಸಿ) ಕುಟುಂಬವೇ ಮೊದಲು. ಕುಟುಂಬದ ಹಿತಾಸಕ್ತಿಯೇ ಮುಖ್ಯ. ಭ್ರಷ್ಟರ ರಕ್ಷಣೆಗಾಗಿ ಯಾತ್ರೆ ಮಾಡುತ್ತಿದ್ದಾರೆ’ ಎಂದು ಠಾಕೂರ್ ಟೀಕಾ ಪ್ರಹಾರ ನಡೆಸಿದ್ದಾರೆ.

ಕೋವಿಡ್ ಆರಂಭದಲ್ಲಿಯೂ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್

ಕೋವಿಡ್ ಸಾಂಕ್ರಾಮಿಕದ ಆರಂಭದ ಸಂದರ್ಭದಲ್ಲಿಯೂ ಕಾಂಗ್ರೆಸ್ ಭಾರೀ ಅಪಪ್ರಚಾರ ಮಾಡಿತ್ತು. ಲಸಿಕೆ ಬಗ್ಗೆ ಜನರಲ್ಲಿ ಸಂಶಯ ಮೂಡುವಂತೆ ಮಾಡಿತ್ತು. ಬಡ ಜನರು ಲಸಿಕೆ ತೆಗೆದುಕೊಳ್ಳಲು ಭಯಪಡುವಂತೆ ಮಾಡಿತ್ತು. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಜನ ಸೋಂಕಿತರಾಗಲು ಕಾರಣವಾಗಿತ್ತು. ಇಂದು ಮತ್ತೆ ಅಂಥದ್ದೇ ಪರಿಸ್ಥಿತಿ ಕಾಣಿಸುತ್ತಿದೆ. ಆದರೆ, ಜವಾಬ್ದಾರಿ ಮರೆತಿರುವ ಕಾಂಗ್ರೆಸ್ ಭ್ರಷ್ಟರನ್ನು ಜತೆಗೂಡಿಸಿಕೊಂಡು ಕುಟುಂಬದ ರಕ್ಷಣೆಗಾಗಿ ಯಾತ್ರೆ ಮಾಡುತ್ತಿದೆ ಎಂದು ಠಾಕೂರ್ ದೂರಿದ್ದಾರೆ.

ಇದನ್ನೂ ಓದಿ: Bharat Jodo Yatra: ದ್ವೇಷದ ಬಜಾರ್​ನಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆ ಎಂದ ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆ ದೆಹಲಿಯ ಗಡಿ ಪ್ರವೇಶಿಸಿದ ಸಂದರ್ಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್​ಎಸ್​​ಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ, ಆರ್​ಎಸ್​ಎಸ್​ನವರು ದ್ವೇಷವನ್ನು ಹರಡುತ್ತಾರೆ, ನಾವು ಪ್ರೀತಿಯನ್ನು ಹರಡುತ್ತೇವೆ ಮತ್ತು ಎಲ್ಲಾ ಭಾರತೀಯರನ್ನು ಅಪ್ಪಿಕೊಳ್ಳುತ್ತೇವೆ. ಈ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರೀತಿ ಇದೆ. ಅದು ಯಾವುದೇ ಜಾತಿ, ಧರ್ಮ, ಶ್ರೀಮಂತ ಅಥವಾ ಬಡವರನ್ನು ನೋಡುವುದಿಲ್ಲ. ಎಲ್ಲರೊಂದಿಗೆ ಅಪ್ಪಿಕೊಳ್ಳುತ್ತದೆ ಎಂದು ಹೇಳಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Sat, 24 December 22