Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆಯಿಂದ ಅನರ್ಹಗೊಳ್ಳಲು ರಾಹುಲ್ ಗಾಂಧಿಯವರ ದುರಹಂಕಾರವೇ ಕಾರಣ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಒಬಿಸಿ ಸಮುದಾಯದ ಅವಹೇಳನದ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದಾಗ, ರಾಹುಲ್ ಗಾಂಧಿ ಇಂದು ನ್ಯಾಯಾಲಯವೇ ತಪ್ಪು ಎಂದು ಹೇಳಿದ್ದಾರೆ. ಈ ದೇಶವನ್ನು ಆಳುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಅವರು ಭಾವಿಸಿದ್ದಾರೆ

ಲೋಕಸಭೆಯಿಂದ ಅನರ್ಹಗೊಳ್ಳಲು ರಾಹುಲ್ ಗಾಂಧಿಯವರ ದುರಹಂಕಾರವೇ ಕಾರಣ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 29, 2023 | 1:40 PM

ಲೋಕಸಭೆಯಿಂದ (Loksabha) ಅನರ್ಹಗೊಳ್ಳಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ (Rahul Gandhi) ದುರಹಂಕಾರವೇ ಕಾರಣ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ. ರಾಹುಲ್ ನಿರ್ದಿಷ್ಟ ಕುಟುಂಬದಲ್ಲಿ ಜನಿಸಿರುವುದರಿಂದ ದೇಶವನ್ನು ಆಳುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದರು ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.ರಾಹುಲ್ ಗಾಂಧಿ ಅವರ ದುರಹಂಕಾರದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ. ಈ ದೇಶವನ್ನು ಆಳುವುದು ಅವರ ಜನ್ಮಸಿದ್ಧ ಹಕ್ಕು ಎಂದು ಅವರು ಭಾವಿಸುತ್ತಾರೆ. ಇದೇ ಅವರ ಮನಸ್ಸಿನಲ್ಲಿನ ಅಹಂಕಾರಕ್ಕೂ ಕಾರಣ ಎಂದು ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಒಬಿಸಿ ಸಮುದಾಯದ ಅವಹೇಳನದ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದಾಗ, ರಾಹುಲ್ ಗಾಂಧಿ ಇಂದು ನ್ಯಾಯಾಲಯವೇ ತಪ್ಪು ಎಂದು ಹೇಳಿದ್ದಾರೆ. ಈ ದೇಶವನ್ನು ಆಳುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಅವರು ಭಾವಿಸಿದ್ದಾರೆ. ಅವರು ಹಕ್ಕು ರಾಜಕಾರಣ ಮಾಡುತ್ತಾರೆ. ಅವರು ಒಂದು ನಿರ್ದಿಷ್ಟ ಕುಟುಂಬದಲ್ಲಿ ಜನಿಸಿದ ಕಾರಣ ದೇಶವನ್ನು ಆಳುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದು ಸಂವಿಧಾನ, ನ್ಯಾಯಾಲಯ ಮತ್ತು ಸಂಸತ್ತಿನ ಮೇಲೆ ತಾವು ಎಂದು ಅಂದುಕೊಂಡಿದ್ದಾರೆ ಎಂದು ವೈಷ್ಣವ್ ಅವರನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ಅವರು ತನ್ನನ್ನು ತಾನು ದೇಶದ ಸಂಸ್ಥೆಗಳಿಗಿಂತ ಹೆಚ್ಚು ಎಂದು ಪರಿಗಣಿಸುತ್ತಾರೆ. ಯಾವುದೇ ನ್ಯಾಯಾಲಯವು ತನ್ನ ವಿರುದ್ಧ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಭಾವಿಸುತ್ತಾರೆ. ಅವರು ಅರ್ಹತೆಯ ಭಾವನೆಯೊಂದಿಗೆ ರಾಜಕೀಯದಲ್ಲಿರುವ ಕಾರಣ ಸಂವಿಧಾನದಲ್ಲಿ ಅನರ್ಹಗೊಳಿಸುವ ಅವಕಾಶವನ್ನು ಅನ್ವಯಿಸಬಾರದು ಎಂದು ಅವರು ಭಾವಿಸುತ್ತಾರೆ ಎಂದು ಕೇಂದ್ರ ರೈಲ್ವೆ ಸಚಿವರು ಹೇಳಿದ್ದಾರೆ. ಅದಾನಿ ವಿಷಯ ಮತ್ತು ರಾಹುಲ್ ಗಾಂಧಿ ಅವರ ಅನರ್ಹತೆಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ಒಂದಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ವೈಷ್ಣವ್, ಎಲ್ಲಾ “ಭ್ರಷ್ಟರು” ಒಂದೇ ವೇದಿಕೆಯಲ್ಲಿ ಒಟ್ಟುಗೂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪಂಜಾಬ್​​ನ ಹೋಶಿಯಾರ್‌ಪುರ್​​ನಲ್ಲಿ ಪೊಲೀಸ್ ಕಾರ್ಯಾಚರಣೆ: ಅಮೃತಪಾಲ್ ಸಿಂಗ್ ಶರಣಾಗುವ ಸಾಧ್ಯತೆ

ಮಂಗಳವಾರ ದೆಹಲಿಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿದ ಮಾತನಾಡಿದ ಪ್ರಧಾನಿ ಭ್ರಷ್ಟಾಚಾರದಲ್ಲಿ ಆಳವಾಗಿ ಬೇರೂರಿರುವವರೆಲ್ಲರೂ ಒಗ್ಗೂಡಿ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಪ್ರತಿಪಕ್ಷಗಳ ವಿರುದ್ಧದ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿಯವರು “ಭ್ರಷ್ಟಾಚಾರಿ ಭಗವೋ ಅಭಿಯಾನ” (ಭ್ರಷ್ಟರನ್ನು ಓಡಿಸುವ ಅಭಿಯಾನವನ್ನು ) ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದೇ ವೇಳೆ ಮೋದಿ ಭ್ರಷ್ಟಾಚಾರ ವಿರೋಧಿ ಎಂದು ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ಖರ್ಗೆ ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ