ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮೇಲೆ ಎಫ್​ಐಆರ್​​​ಗೆ ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ: ಏನದು?

| Updated By: ವಿವೇಕ ಬಿರಾದಾರ

Updated on: Feb 27, 2024 | 11:37 AM

ಇಂದು ಸೋಮವಾರ (ಫೆ.27) ರಾಜ್ಯಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಐವರು ಸ್ಪರ್ಧೆ ಮಾಡಿದ್ದಾರೆ. ವಿಧಾನಸೌಧದ ಮೊದಲ ಮಹಡಿಯಲ್ಲಿನ ಕೊಠಡಿ ಸಂಖ್ಯೆ 106 ರಲ್ಲಿ ಮತದಾನದ ನಡೆಯುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಎನ್​ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿರುದ್ಧ ದೂರು ದಾಖಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ದೂರು ದಾಖಲಾದ ಕಾರಣ ತಿಳಿಸಿದ್ದಾರೆ.

ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮೇಲೆ ಎಫ್​ಐಆರ್​​​ಗೆ ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ: ಏನದು?
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಫೆಬ್ರವರಿ 27: ಇಂದು ಬೆಳಿಗ್ಗೆಯಿಂದಲೇ ರಾಜ್ಯಸಭೆ ಚುನಾವಣೆ (Rajya Sabha Election) ಮತದಾನ ಆರಂಭವಾಗಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಎನ್​ಡಿಎ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ (Kupendra Reddy) ಸ್ಪರ್ಧೆ ಮಾಡಿದ್ದಾರೆ. ಎನ್​ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಶಾಸಕರ ಬಳಿ ಮತಯಾಚಿಸಿದ ಆರೋಪದಡಿ ದೂರು ದಾಖಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾತನಾಡಿ, ನಮ್ಮ ಶಾಸಕರಿಗೆ ಆಸೆ-ಆಮೀಷ ತೋರಿಸಿ ಬೆದರಿಸಿದರು. ಅದಕ್ಕೆ ಎಫ್​ಐಆರ್​ ದಾಖಲಾಗಿದೆ ಎಂದರು.

ವಿಧಾನಸೌದಲ್ಲಿ ಮತ ಚಲಾಯಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಆತ್ಮಸಾಕ್ಷಿ ಮತ ಅಂದ್ರೆ ಏನು? ಆತ್ಮಸಾಕ್ಷಿ ಎಂದು ಮತಗಳು ಇರುತ್ತವಾ? ಅವರ ಮತಗಳೇ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬರುತ್ತವೆ. ನಮ್ಮ ಪಕ್ಷದವರಿಗೆ ಬೆದರಿಕೆ ಹಾಕಿದ್ದಕ್ಕೆ ಎಫ್​ಐಆರ್ ಆಗಿದೆ ಎಂದರು.

ನೀವು ಬೇಕಾದಹಾಗೆ ಕಾನೂನು ತಿದ್ದುಪಡಿ ಮಾಡಿಕೊಂಡಿದ್ದೀರಿ ಎಂಬ ವಿಪಕ್ಷದವರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಅದರ ಬಗ್ಗೆ ಆಮೇಲೆ ಮಾತನಾಡುತ್ತೇನೆ. ನಮ್ಮವರು ಗೆಲ್ತಾರೆ ಅಷ್ಟೆ. ಜೆಡಿಎಸ್​​ನವರಿಗೆ ಮತಗಳೇ ಇಲ್ಲ. ಐದನೇ ಅಭ್ಯರ್ಥಿ ಸ್ಪರ್ಧಿಸಿದ್ದು, ಆಮಿಷವೊಡ್ಡುವ ಸಾಧ್ಯತೆ ಹಿನ್ನೆಲೆ ಒಗ್ಗಟ್ಟಾಗಿ ಬಂದು ಮತ ಹಾಕಿದ್ದೇವೆ. ಜೆಡಿಎಸ್​ನವರಿಗೆ ಆತ್ಮವೇ ಇಲ್ಲ, ಇನ್ನೆಲ್ಲಿ ಆತ್ಮಸಾಕ್ಷಿ ಇದೆ? ಜಾತ್ಯತೀತ ಅಂತಾರೆ, ಇದೀಗ ಯಾರ ಜೊತೆಗಿದ್ದಾರೆ? ಅದಕ್ಕಾಗಿ ಜೆಡಿಸ್​​​ನವರಿಗೆ ಆತ್ಮಸಾಕ್ಷಿಯೇ ಇಲ್ಲ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ವಿಧಾನಮಂಡಲ ಅಧಿವೇಶನ, ರಾಜ್ಯಸಭೆ ಚುನಾವಣೆ: ವಿಧಾನಸೌಧ ಸುತ್ತಲೂ 144 ಸೆಕ್ಷನ್ ಜಾರಿ

ಚುನಾವಣೆಗೆ ನಿಲ್ಲುವವರೆಲ್ಲಾ ಗೆಲ್ಲುತ್ತೇವೆ ಅಂತಾನೇ ಹೇಳುವುದು, ಸೋಲುತ್ತೇವೆ ಅಂತ ಅಲ್ಲ. ನಮ್ಮ ‌ಪ್ರಕಾರ ಅಭ್ಯರ್ಥಿ ಹಾಕಬಾರದಿತ್ತು, ಹಾಕಿದ್ದಾರೆ. ನಮ್ಮ ಕಡೆ 135+1 ಶಾಸಕರ ಮತಗಳಿವೆ. ಪಕ್ಷೇತರರಾದ ಲತಾ, ದರ್ಶನ್, ಪುಟ್ಟಣ್ಣಯ್ಯ, ಪುಟ್ಟ ಸ್ವಾಮಿ‌ಗೌಡ ಮತ್ತು ಜನಾರ್ದನ ರೆಡ್ಡಿ ನಮ್ಮ ಜೊತೆ ಇದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯವರು ಆಮಿಷ, ಬೆದರಿಕೆ ನೀಡುವುದು‌, ನಾವಲ್ಲ. ಬೇರೆ ಪಕ್ಷಗಳಿಂದಲೂ ನಮಗೆ ಅಭಿವೃದ್ಧಿ ಮೆಚ್ಚಿ ಮತಗಳು‌ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ನಾಲ್ಕು ಸ್ಥಾನಗಳಿರುವ ಚುನಾವಣೆಗೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಕ್ಷವಾರು ಸಂಖ್ಯಾ ಬಲ ನೋಡುವುದಾದರೆ ಕಾಂಗ್ರೆಸ್ 134, ಬಿಜೆಪಿ 66, ಜೆಡಿಎಸ್ 19 ಮತ್ತು ನಾಲ್ವರು ಪಕ್ಷೇತರ ಶಾಸಕರು ಮತದಾನ ಮಾಡಲಿದ್ದಾರೆ. ಒಟ್ಟು 223 ಶಾಸಕರು ಮತದಾನ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ