ವಿಧಾನಮಂಡಲ ಅಧಿವೇಶನ, ರಾಜ್ಯಸಭೆ ಚುನಾವಣೆ: ವಿಧಾನಸೌಧ ಸುತ್ತಲೂ 144 ಸೆಕ್ಷನ್ ಜಾರಿ

Rajya Sabha Election: ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ಅಖಾಡ ರಂಗೇರಿದೆ. ಮೈತ್ರಿ ಎರಡನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ ಇಳಿದಿದ್ದು, ಕಾಂಗ್ರೆಸ್​ಗೆ ಅಡ್ಡಮತದಾನದ ಆತಂಕ ಶುರುವಾಗಿದೆ. ಇದೆಲ್ಲದರ ಮಧ್ಯೆ ನಾಳೆ ವಿಧಾನಸೌಧ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳು, ಹಲವು ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ 144ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್​ರಿಂದ ಆದೇಶ ನೀಡಲಾಗಿದೆ.

ವಿಧಾನಮಂಡಲ ಅಧಿವೇಶನ, ರಾಜ್ಯಸಭೆ ಚುನಾವಣೆ: ವಿಧಾನಸೌಧ ಸುತ್ತಲೂ 144 ಸೆಕ್ಷನ್ ಜಾರಿ
ವಿಧಾನಸೌಧ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on:Feb 26, 2024 | 5:34 PM

ಬೆಂಗಳೂರು, ಫೆಬ್ರವರಿ 26: ಅಧಿವೇಶನ ಮತ್ತು ರಾಜ್ಯ ಸಭೆ ಚುನಾವಣೆ ಹಿನ್ನೆಲೆ ವಿಧಾನಸೌಧ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಇಂದಿನಿಂದ 28 ನೇ ತಾರೀಖು ಬೆಳಗ್ಗೆ 6 ಗಂಟೆವರೆಗೆ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದೆ. ವಿವಿಧ ರಾಜಕೀಯ ಪಕ್ಷಗಳು, ಹಲವು ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ 144ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್​ರಿಂದ ಆದೇಶ ನೀಡಲಾಗಿದೆ. ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ (Rajya Sabha Election) ಚುನಾವಣೆ ಮಂಗಳವಾರ ನಡೆಯಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಮತದಾನ ಆರಂಭವಾಗಲಿದ್ದು, ಸಂಜೆ 4 ಗಂಟೆಯವರೆಗೂ ಹಕ್ಕು ಚಲಾವಣೆಗೆ ಅವಕಾಶವಿರಲಿದೆ. ಸಂಜೆ 4 ಗಂಟೆಯಿಂದ 5ಗಂಟೆಯವರೆಗೆ ಮತಗಳ ಎಣಿಕೆ ನಡೆಯಲಿದೆ.

ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ರಾಜ್ಯಸಭೆಯ ಲೆಕ್ಕಾಚಾರ ಜೋರಾಗಿಯೇ ಇದೆ. ಏನಾದರೂ ಮಾಡಿ ಕಾಂಗ್ರೆಸ್​ ಬಿಗ್ ಶಾಕ್​ ಕೊಡಬೇಕು ಅಂತ ತಂತ್ರ ಹೂಡಿರುವ ಬಿಜೆಪಿ-ಜೆಡಿಎಸ್​ ಎರಡನೇ ಅಭ್ಯರ್ಥಿ ಮೂಲಕ ಕಾಂಗ್ರೆಸ್​ಗೆ ಚೆಕ್​ಮೆಟ್​ ಕೊಡುವುದಕ್ಕೆ ಸನ್ನದ್ಧವಾಗಿದ್ದಾರೆ. ಕೊನೆ ಕ್ಷಣದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಯನ್ನ ಅಖಾಡಕ್ಕೆ ಇಳಿಸಿದ್ದು, ಕಾಂಗ್ರೆಸ್​ ಮಣಿಸುವುದಕ್ಕೆ ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿದ್ದಾರೆ.

ಇದನ್ನೂ ಓದಿ: Rajya Sabha Election: ನಾಳೆ ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಭೀತಿ, ಶಾಸಕರ ಹಿಡಿದಿಡಲು ಕಾಂಗ್ರೆಸ್ ಕಸರತ್ತು

ವಿಧಾನಭೆ ಬಲಾಬಲದ ಪ್ರಕಾರ ಕಾಂಗ್ರೆಸ್ ಮೂರು ಸ್ಥಾನ, ಬಿಜೆಪಿ ಒಂದು ಸ್ಥಾನ ಗೆಲ್ಲಲು ಸುಲಭ ಅವಕಾಶ ಇತ್ತು. ಆದರೆ ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿಯ 2ನೇ ಅಭ್ಯರ್ಥಿ ಎಂಟ್ರಿಯಿಂದ ಕಾಂಗ್ರೆಸ್​ಗೆ ಈಗ ಅಡ್ಡಮತದಾನದ ಭೀತಿ ಶುರುವಾಗಿದೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತದೆ. ಕಾಂಗ್ರೆಸ್​ನ ಸಂಖ್ಯಾಬಲ 135 ಇರುವುದರಿಂದ ಮೂರು ಅಭ್ಯರ್ಥಿಗಳನ್ನ ಆರಾಮಾಗಿ ಗೆಲ್ಲಿಸಬಹುದು. ಇನ್ನೊಂದೆಡೆ ಬಿಜೆಪಿ ಸಂಖ್ಯಾಬಲ 66 ಆಗಿದ್ದು, ಕೇವಲ ಒಬ್ಬ ಅಭ್ಯರ್ಥಿಯನ್ನ ಮಾತ್ರ ಗೆಲ್ಲಿಸಬಹುದಾಗಿದೆ. ಇನ್ನು ಮೈತ್ರಿಕೂಟದ ಅಭ್ಯರ್ಥಿ ಆಗಿರುವ ಕುಪೇಂದ್ರ ರೆಡ್ಡಿ ಎಂಟ್ರಿಯಿಂದಾಗಿ ರಾಜ್ಯಸಭೆ ಅಖಾಡ ಹೈವೋಲ್ಟೇಜ್ ಪಡೆದುಕೊಂಡಿದೆ.

ಇದನ್ನೂ ಓದಿ: Rajya Sabha Election: ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಮತ ಕಾಂಗ್ರೆಸ್ ಅಭ್ಯರ್ಥಿಗೆ ಬಹುತೇಕ ಖಚಿತ

ಬಿಜೆಪಿ ಬಳಿ ಇರುವ 66 ಮತಗಳಲ್ಲಿ 45 ಮತಗಳು ಕಳೆದರೆ 21 ಹೆಚ್ಚುವರಿ ಮತ ಉಳಿಯಲಿದೆ. ಬಿಜೆಪಿ 21 ಮತ, ಜೆಡಿಎಸ್‌ ಬಳಿ ಇರುವ 19, ಪಕ್ಷೇತರ 2 ಮತ್ತು ಕೆಆರ್‌ಪಿಪಿಯ, ಸರ್ವೋದಯ ಕರ್ನಾಟಕದ ತಲಾ 1 ಮತಗಳನ್ನ ಪಡೆಯಲು ಸಾಧ್ಯವಾದರೆ 44 ಮತ ಕುಪೇಂದ್ರ ರೆಡ್ಡಿ ಪಾಲಾಗಲಿದೆ. ಕಾಂಗ್ರೆಸ್‌ನಲ್ಲಿರುವ ಅಸಮಾಧಾನಿತರಿಗೆ ಗಾಳ ಹಾಕಿ ಇನ್ನೂ ಎರಡು ಅಥವಾ 3 ಶಾಸಕರಿಂದ ಅಡ್ಡ ಮತದಾನ ಮಾಡಿಸಿದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರ ಹಾಕಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:21 pm, Mon, 26 February 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ