ರಾಜ್ಯಸಭೆ ಚುನಾವಣೆ: ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಮನವೊಲಿಸುವಲ್ಲಿ ಯಶಸ್ವಿಯಾದ ಕುಮಾರಸ್ವಾಮಿ
ಲೋಕಸಭಾ ಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಇದರಿಂದಾಗಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಅಸಮಾಧಾನಗೊಂಡಿದ್ದರು. ಇದೀಗ ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಜೆಡಿಎಸ್ ಪಾಲಿಗೆ ಒಂದು ಮತ ಕೂಡ ಅತ್ಯಮೂಲ್ಯವಾಗಿದೆ. ಹೀಗಾಗಿ ಶರಣಗೌಡ ಕಂದಕೂರು ಅವರ ಅಸಮಾಧಾನ ಸರಿಪಡಿಸಲು ಕುಮಾರಸ್ವಾಮಿ ಹರಸಾಹಸಪಟ್ಟಿದ್ದು, ಕೊನೆಗೂ ಫಲಪ್ರದವಾಗಿದೆ.
ಬೆಂಗಳೂರು, ಫೆ.26: ನಾಳೆ ರಾಜ್ಯಸಭೆ ಚುನಾವಣೆ (Rajya Sabha Elections) ನಡೆಯಲಿದ್ದು, ಜೆಡಿಎಸ್ (JDS) ಪಾಲಿಗೆ ಒಂದು ಮತ ಕೂಡ ಅತ್ಯಮೂಲ್ಯವಾಗಿದೆ. ಹೀಗಾಗಿ ಬಿಜೆಪಿ (BJP) ಜೊತೆಗಿನ ಮೈತ್ರಿಯಿಂದ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು (Sharanagouda Kundkur) ಅವರನ್ನು ಮನವೋಲಿಸುವಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಯಶಸ್ವಿಯಾಗಿದ್ದಾರೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾರಣದಿಂದ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಶರಣಗೌಡ ಸಹೋದರ ಮಲ್ಲಿಕಾರ್ಜುನ್ ರೆಡ್ಡಿ ಅವರ ನಿವಾಸದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ಅವರು ಶರಣಗೌಡ ಅವರನ್ನು ಮನವೋಲಿಸುವ ಕಸರತ್ತು ನಡೆಸಿದ್ದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಎನ್ಡಿಎಗೆ ಮತ್ತೊಂದು ಶಾಕ್, ಜೆಡಿಎಸ್ ಪ್ಲ್ಯಾನ್ ಠುಸ್!
ಮಲ್ಲಿಕಾರ್ಜುನ್ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಕೊನೆಗೂ ಶರಣಗೌಡ ಅವರನ್ನು ಮನವೋಲಿಸುವಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ಯಶಸ್ವಿಯಾಗಿದ್ದಾರೆ. ನಿಮ್ಮ ಜೊತೆ ಇರುತ್ತೇವೆ ಎಂದ ಶರಣಗೌಡ ಸಹೋದರ ಮಲ್ಲಿಕಾರ್ಜುನ್ ಅವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ