ಅದು ರಾಜಕೀಯ ಪ್ರತಿಭಟನೆಯೇ ಹೊರತು.. ರೈತರ ಪ್ರತಿಭಟನೆಯಲ್ಲ: ಸಿ.ಟಿ. ರವಿ
ರೈತರ ಪರವಾಗಿಯೇ ನಾವು ಕ್ರಮ ತೆಗೆದುಕೊಂಡಿದ್ದೇವೆ ಅದನ್ನೇ ಮುಂದುವರೆಸುತ್ತೇವೆ. ಎಪಿಎಂಸಿ ಯಾವುದೇ ಕಾರಣಕ್ಕೂ ಬಂದ್ ಮಾಡೋದಿಲ್ಲ

ಸಿ.ಟಿ. ರವಿ
ಬೆಂಗಳೂರು: ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯಿದೆಯನ್ನು ವಿರೋಧಿಸಿ ನಿನ್ನೆ ನಡೆದ ಪ್ರತಿಭಟನೆ ರಾಜಕೀಯ ಪ್ರತಿಭಟನೆ ಆಗಿತ್ತೇ ಹೊರತು ರೈತರ ಪ್ರತಿಭಟನೆ ಆಗಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಾಖ್ಯಾನಿಸಿದ್ದಾರೆ.
ರೈತರ ಪರವಾಗಿಯೇ ನಾವು ಕ್ರಮ ತೆಗೆದುಕೊಂಡಿದ್ದೇವೆ.. ಅದನ್ನೇ ಮುಂದುವರೆಸುತ್ತೇವೆ. ಎಪಿಎಂಸಿ ಯಾವುದೇ ಕಾರಣಕ್ಕೂ ಬಂದ್ ಮಾಡೋದಿಲ್ಲ. ಅದು ಹಾಗೆಯೇ ಇರುತ್ತದೆ. ನಂತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗೂ ಮೋಸ ಆಗುವುದಿಲ್ಲ ಎಂದಿದ್ದಾರೆ.
ಭಾರತ್ ಬಂದ್ ಇದುವರೆಗೆ ಯಾವತ್ತೂ ಯಶಸ್ವಿಯಾಗಿಲ್ಲ.. ತಲೆಕೆಡಿಸಿಕೊಳ್ಳಬೇಡಿ: ಮುಖ್ಯಮಂತ್ರಿ ಯಡಿಯೂರಪ್ಪ



