ಹುಲಿ, ನರಿ ನ್ಯಾಯದ ಕಥೆ ಹೇಳಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ RSS ಮುಖಂಡ
ಆರ್ಎಸ್ಎಸ್ ನಾಯಕರು ಅನಕ್ಷರಸ್ಥರಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಆರ್ಎಸ್ಎಸ್ ಮುಖಂಡ ಹನುಮಂತ ಮಳಲಿ, ಮುಖಾಮುಖಿ ಚರ್ಚೆಗೆ ಆಹ್ವಾನಿಸಿದ್ದಾರೆ.
ಗದಗ: ಆರ್ಎಸ್ಎಸ್ (RSS) ಬಗ್ಗೆ ಟೀಕೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಧರ್ಮ ಜಾಗರಣಾ ಕರ್ನಾಟಕ ಉತ್ತರ ಪ್ರಾಂತ ಸಹ ಸಂಯೋಜಕ ಹನುಮಂತ ಮಳಲಿ (Hanumantha Malali) ಅವರು ಹುಲಿ ಮತ್ತು ನರಿ ನ್ಯಾಯದ ಕಥೆ ಹೇಳಿ ತಿರುಗೇಟು ನೀಡಿದರು. ಕಥೆಯಲ್ಲಿ ಸಿದ್ದರಾಮಯ್ಯ ಅವರನ್ನು ನರಿಗೆ ಹೋಲಿಕೆ ಮಾಡಿ ವಾಗ್ದಾಳಿ ನಡೆಸಿದರು.
ಆರ್ಎಸ್ಎಸ್ ನಾಯಕರು ಅನಕ್ಷರಸ್ಥರಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ತಪ್ಪು ನರಿದ್ದಾಗಿದ್ದರೂ ಶಿಕ್ಷೆ ಆಗಿದ್ದು ಹುಲಿಗೆ. ಯಾರ ಜೊತೆಗೆ ವಾದ ಮಾಡಬೇಕು ಅನ್ನೋದು ಗೋತ್ತಾಗಲಿಲ್ಲ ಅಂತ ಕಾಡಿನ ರಾಜ ಹುಲಿಗೆ ಶಿಕ್ಷೆ ನೀಡಿದ್ದ. ನಾವು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಆ ರೀತಿ ಭಾವಿಸಿಕೊಳ್ಳುತ್ತೇವೆ. ಆರ್ಎಸ್ಎಸ್ ಬಗ್ಗೆ ತಿಳಿದುಕೊಳ್ಳದವರು ಈ ರೀತಿ ಮಾತನಾಡುತ್ತಾರೆ. ಸಿದ್ದರಾಮಯ್ಯನವರ ಹೇಳಿಕೆಗೆ ಉತ್ತರ ಕೊಡಲು ನನಗೆ ಮನಸ್ಸಿಲ್ಲ. ಅವರನ್ನು ಮುಖಾಮುಖಿಯಾಗಿ ಸರಿಯಾಗಿ ಉತ್ತರ ನೀಡುತ್ತೇವೆ ಎಂದು ಮುಖಾಮುಖಿ ಚರ್ಚೆಗೆ ಅಹ್ವಾನಿಸಿದರು.
ಸಣ್ಣ ಜವಾಬ್ದಾರಿ ಇರುವವರು ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುವಷ್ಟು ಶಿಕ್ಷಣ ಕೊಡಲಾಗಿದೆ. ನೇರವಾಗಿ ಮಾತನಾಡಿದರೆ ಅನಕ್ಷರಸ್ಥರೋ ಅಕ್ಷರಸ್ಥರೋ ಅಂತ ಮುಖಾಮುಖಿಯಾಗಿ ಸರಿಯಾಗಿ ಉತ್ತರ ನೀಡುತ್ತೇವೆ. ಸಂಘದ ಬಗ್ಗೆ ಪೂರ್ಣ ಗೊತ್ತಿಲ್ಲದಿದ್ದರೆ ವಿಶೇಷ ಆಹ್ವಾನ ಮಾಡುತ್ತೇವೆ. ನಮ್ಮ ವರ್ಗದಲ್ಲಿ ಭಾಗವಹಿಸುವಂತೆ ಸಿದ್ದರಾಮಯ್ಯಗೆ ಆಹ್ವಾನಿಸುತ್ತೇವೆ. ಹೊರ ಬಂದ ಬಳಿಕ ಲೋಪ, ದೋಷ ಇದ್ದರೆ ಹೇಳಲಿ, ತಿದ್ದಿಕೊಳ್ಳುತ್ತೇವೆ. ಸುಮ್ಮನೆ ಮಾತನಾಡಿದವರ ಬಗ್ಗೆ ಮಾತನಾಡೋದು ಸಮಯ ಹಾಳು ಎಂದು ಆಕ್ರೋಶ ಹೊರಹಾಕಿದರು.
ಸಿದ್ದರಾಮಯ್ಯನವರೇ ನಿಮ್ಮ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ವ್ಯಕ್ತಿ ಭೇದ ಯಾವತ್ತೂ ಮಾಡಲ್ಲ, ವಿಚಾರ ಭೇದ ಮಾತ್ರ ಮಾಡುತ್ತೇವೆ. ಆರ್ಎಸ್ಎಸ್ನಲ್ಲಿ ಶಿಕ್ಷಣ ಪಡೆದವರು ಬಹುತೇಕ ಎಲ್ಲ ಪಕ್ಷದಲ್ಲೂ ಇದ್ದಾರೆ. ಇದನ್ನು ಕೆಲವರು ಹೇಳಿಕೊಳ್ಳುವುದಿಲ್ಲ. ನಿಮ್ಮ ಮಾತು ಕೇಳಿದರೆ ಅಸಹ್ಯವಾಗುತ್ತದೆ. ಅಯ್ಯೋಪಾಪ ಅನಿಸುತ್ತದೆ ಎಂದರು.
ಇದನ್ನೂ ಓದಿ: ಸೋನಿಯಾ ಗಾಂಧಿಯವರ ಮೂಲ ಯಾವುದು ಅಂತ ಸಿದ್ದರಾಮಯ್ಯ ಮೊದಲು ಹೇಳಲಿ: ಪ್ರತಾಪ್ ಸಿಂಹ
ದೇಶ ವಿಂಗಡನೆ ಮಾಡಲು RSS ಹುಟ್ಟಿದ್ದು
ಕೊಪ್ಪಳ: ದೇಶದಲ್ಲಿ ನಡೆಯುವ ಎಲ್ಲ ಕೆಲಸದ ಹಿಂದೆ ಆರ್ಎಸ್ಎಸ್ ಪಾತ್ರ ಇದೆ. ಸಂಘ ಪರಿವಾರ ಹುಟ್ಟಿರುವುದೇ ದೇಶ ವಿಂಗಡನೆ ಮಾಡಲು ಎಂದು ಗಂಗಾವತಿ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪೂರ ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲೆ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಮಾತನಾಡಿದ ಅವರು, ಹಿಜಾಬ್, ಮೈಕ್ ವಿವಾದದ ಸೂತ್ರಧಾರರು ಆರ್ಎಸ್ಎಸ್ ಮುಖ್ಯಸ್ಥರು ಬಿಜೆಪಿಯವರ ಪಾತ್ರ ಏನೂ ಇಲ್ಲ ಎಂದರು.
ಸಿದ್ದರಾಮಯ್ಯ ಅವರು ಇತಿಹಾಸ ಓದಿಕೊಂಡು ಮಾತನಾಡಿದ್ದಾರೆ. ನಾನು ಹೆಚ್ಚಿನ ಮಾಹಿತಿಯನ್ನ ಸಿದ್ದರಾಮಯ್ಯರನ್ನ ಕೇಳುತ್ತೇನೆ. ಸೋನಿಯಾ ಗಾಂಧಿ ಇಟಲಿ ಮೂಲ ಎನ್ನುತ್ತಿದ್ದಾರೆ. ಸೋನಿಯಾ ಗಾಂಧಿಯವರು ಇಟಲಿಯವರಾಗಿರಬಹುದು. ಅವರು ಇಲ್ಲಿಯವರನ್ನ ಮದುವೆಯಾಗಿರುವ ಹಿನ್ನೆಲೆ ಅವರು ಇಲ್ಲಿಯ ಪ್ರಜೆ ಎಂದರು. ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಹೈಕಮಾಂಡ್ ಇದೆ. ಅವರ ಇವಾಗ ಡಿಕೆ ಶಿವಕುಮಾರ್ ಅವರು ಕೇಳುತ್ತಾರೆ. ನಾನು ಕೂಡ ಮುಖ್ಯಮಂತ್ರಿ ಆಗಬೇಕು ಅಂತೀನಿ. ನನಗೂ ಅರ್ಹತೆ ಇದೆ ಎಂದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ