ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಶಿವಣ್ಣಗೆ ಆಫರ್, ಡಿಕೆಶಿ ಆಹ್ವಾನಕ್ಕೆ ಹ್ಯಾಟ್ರಿಕ್ ಹೀರೋ ಹೇಳಿದ್ದಿಷ್ಟು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಸ್ಯಾಂಡಲ್​ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಅವರಿಗೆ ಲೋಕಸಭಾ ಚುನಾವನೆಗೆ ನಿಲ್ಲುವಂತೆ ಆಫರ್ ನೀಡಿದ್ದಾರೆ. ಆದ್ರೆ, ಶಿವಣ್ಣ, ಡಿಕೆಶಿ ಆಫರ್ ತಿರಸ್ಕರಿಸಿದ್ದಾರೆ. ಹಾಗಾದ್ರೆ ಶಿವರಾಜ್ ಕುಮಾರ್ ಈ ಬಗ್ಗೆ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಶಿವಣ್ಣಗೆ ಆಫರ್, ಡಿಕೆಶಿ ಆಹ್ವಾನಕ್ಕೆ ಹ್ಯಾಟ್ರಿಕ್ ಹೀರೋ ಹೇಳಿದ್ದಿಷ್ಟು
ಶಿವಣ್ಣ-ಡಿಕೆ ಶಿವಕುಮಾರ್
Edited By:

Updated on: Dec 10, 2023 | 4:25 PM

ಬೆಂಗಳೂರು, (ಡಿಸೆಂಬರ್ 10): ಈ ಬಾರಿ ಲೋಕಸಭಾ ಚುನಾವಣೆಗೆ (Loksabha Elections 2024) ಸ್ಪರ್ಧಿಸುವಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar)  ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಹ್ವಾನ ನೀಡಿದ್ದಾರೆ. ಆದ್ರೆ, ಶಿವರಾಜ್ ಕುಮಾರ್ ಅವರು ಡಿಕೆಶಿ ಕೊಟ್ಟ ಆಫರ್​ ಅನ್ನು ನಯಾವಾಗಿ ತಿರಸ್ಕರಿಸಿದ್ದಾರೆ. ನಾನು ನಟ ಮಾತ್ರ. ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ ಎಂದು ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಶಿವಣ್ಣ ಹೇಳಿದ್ದರು. ಇದೀಗ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಈಡಿಗಾ ಸಮಾವೇಶದಲ್ಲಿ ಬಹಿರಂಗಪಡಿಸಿದ ಶಿವಣ್ಣ, ಲೋಕಸಸಭೆಗೆ ರೆಡಿಯಾಗಿ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಆದ್ರೆ, ನಮ್ ತಂದೆ ಕೊಟ್ಟಿರುವ ಬಳುವಳಿ ಮುಂದುವರೆಸಿಕೊಂಡು ಹೋಗಬೇಕಿದೆ. ನಮ್ಮದೇನಿದ್ದರೂ ಮೇಕಪ್ ಹಾಕುವುದು ಸಿನಿಮಾ ಮಾಡುವುದು ಎಂದು ಹೇಳಿದರು. ಈ ಮೂಲಕ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.

ಇದನ್ನೂ ಓದಿ: Shivarajkumar: ‘ನಾನು ನಟ ಮಾತ್ರ.. ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ’: ಚುನಾವಣಾ ಪ್ರಚಾರದ ವೇಳೆ ಶಿವಣ್ಣನ ನೇರ ಮಾತು

ಗೀತಾಗೆ(ಶಿವರಾಜ್ ಕುಮಾರ್ ಪತ್ನಿ) ಆಸಕ್ತಿ ಇದ್ದರೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ. ಹೆಂಡತಿ ಇಷ್ಟ ಪಟ್ಟರೆ ಅವರಿಗೆ ಸಪೋರ್ಟ್ ಮಾಡುವುದು ಗಂಡನ ಕರ್ತವ್ಯ. ಗೀತಾ ಇಷ್ಟ ಪಟ್ಟರೆ ಅದಕ್ಕೆ ಸಪೋರ್ಟ್ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಡಿಕೆ ಶಿವಕುಮಾರ್ ಹೇಳಿದ್ದೇನು?

ಮಧು ಬಂಗಾರಪ್ಪಗೆ ನಾನು ಗಾಳ ಹಾಕಿದ್ದೆ, ಬಿದ್ದಿದ್ದು ತಡವಾಯ್ತು. ಈಗ ಅವರು ಮಂತ್ರಿಯಾಗಿದ್ದಾರೆ. .  ಶಿವರಾಜ್ ಕುಮಾರ್ ಅವರಿಗೂ ಲೋಕಸಭೆ ಚುನಾವಣೆಗೆ ನಿಲ್ಲುವಂತೆ ಹೇಳಿದ್ದೆ. ರೆಡಿಯಾಗು ಪಾರ್ಲಿಮೆಂಟ್​ಗೆ ಹೋಗುವಂತೆ ಎಂದು ಹೇಳಿದ್ದೆ. ಆದ್ರೆ, ಅವರು ಐದಾರು ಸಿನಿಮಾ ಒಪ್ಪಿದ್ದೇನೆ ಎಂದು ಹೇಳಿದ್ದರು ಎಂದು ಡಿಕೆ ಶಿವಕುಮಾರ್​ ತಮ್ಮಿಬ್ಬರ ಮಾತುಕತೆಯನ್ನು ಇಂದಿನ ಈಡಿಗಾ ಸಮಾವೇಶದಲ್ಲಿ ಬಹಿರಂಗಪಡಿಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ