ಡಿಸಿಎಂ ಸ್ಥಾನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ; ಹೇಳಿದ್ದಿಷ್ಟು

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 19, 2023 | 2:46 PM

ಮೋದಿ ಸಂಪುಟದಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ತೀರ್ಮಾನ ‘ಇದು ಹೊಸದೇನು ಅಲ್ಲ, ಕಾಂಗ್ರೆಸ್ ಪಕ್ಷ ಹತ್ತು ವರ್ಷಗಳಿಂದ ಸಪೋರ್ಟ್ ಮಾಡಿದೆ. ಈಗ ಅವರು ಲಾಭ ಆಗುತ್ತೆ ಎಂದು ಮಾಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಡಿಸಿಎಂ ಸ್ಥಾನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ; ಹೇಳಿದ್ದಿಷ್ಟು
ಸತೀಶ್​ ಜಾರಕಿಹೋಳಿ
Follow us on

ಬಾಗಲಕೋಟೆ, ಸೆ.19: ಮೂರು ಡಿಸಿಎಂ(DCM) ಸೃಷ್ಟಿ ಬಗ್ಗೆ ಕೆ.ಎನ್ ರಾಜಣ್ಣ ಹೇಳಿಕೆ ವಿಚಾರ ‘ಸಧ್ಯ ಮಂತ್ರಿ ಆಗಿದ್ದೇನೆ, ಕೊಟ್ರೆ ಯಾರು ಬೇಡ ಅಂತಾರೆ ಎನ್ನುವ ಮೂಲಕ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಉಪ ಮುಖ್ಯಮಂತ್ರಿ ಸ್ಥಾನದ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇಂದು(ಸೆ,19) ಬಾಗಲಕೋಟೆ(Bagalkote)ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಸಕರೊಂದಿಗೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದರು.

ಡಿಕೆಶಿಯನ್ನು ಹತ್ತಿಕ್ಕಲು ಸಿದ್ದು ಬಣದಿಂದ ಮೂರು ಡಿಸಿಎಂ ಚರ್ಚೆ ಎಂಬ ವಿಚಾರ

ಇನ್ನು ಸಚಿವ ರಾಜಣ್ಣ ಅವರ ಜೊತೆ ಅನೇಕರು ಡಿಸಿಎಂ ಸ್ಥಾನದ ಕುರಿತು ಹೇಳಿದ್ದಾರೆ. ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವರಿಗೆ ಸ್ವಾತಂತ್ರ್ಯ ಇದ್ದು, ಅಂತಿಮವಾಗಿ ಪಕ್ಷ ನಿರ್ಧಾರ ಮಾಡಬೇಕು. ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಮೂರು ಡಿಸಿಎಂ ಸೃಷ್ಟಿ‌ ಮಾಡುವುದು ಒಂದು ಮಾರ್ಗ ಎಂದರು. ಇದೇ ವೇಳೆ ಡಿಕೆಶಿಯನ್ನು ಕಟ್ಟಿಹಾಕಲು ಮೂರು ಡಿಸಿಎಂ ಸೃಷ್ಟಿ ಎಂಬ ವಿಚಾರ ಕುರಿತು ‘ ನಿಮ್ಮ (ಮಾಧ್ಯಮದ) ದೃಷ್ಟಿಯಿಂದ ಡಿಸಿಎಂ ಕಟ್ಟಿಹಾಕಲು ಅಂದ್ರೆ, ನಮ್ಮ ವಾದ ಸಮಾಜಿಕ ನ್ಯಾಯ ಎಂದು ಹೇಳಿದರು.

ಇದನ್ನೂ ಓದಿ:ಕರ್ನಾಟಕದಲ್ಲಿ ದಿಢೀರ್ 3 ಡಿಸಿಎಂ ಹುದ್ದೆ ಸೃಷ್ಟಿಗೆ ಬೇಡಿಕೆ ಹೆಚ್ಚುತ್ತಿರುವುದೇಕೆ? ಇದರ ಹಿಂದಿನ ರಾಜಕೀಯ ಲೆಕ್ಕಾಚಾರವೇನು?

ಡಿಸಿಎಂ ಸೃಷ್ಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೈಕಮಾಂಡ್ ಒಪ್ಪಿಗೆ ಕೊಟ್ರೆ ಮಾಡ್ತೀವಿ ಎಂದು ಹೇಳಿದ್ದಾರೆ. ಈಗ ಮಂತ್ರಿಯಾಗಿದ್ದೀನಿ, ಸಿಎಂ ಕಡೆಯಿಂದ ಡಿಸಿಎಂ ಎಂದು ಜಸ್ಟ್ ಒಂದು ಲೆಟರ್ ಹೋದ್ರೆ ಆಯ್ತು. ಯಾವಾಗ ತೀರ್ಮಾನ ಮಾಡುತ್ತಾರೆ ಅವರಿಗೆ ಬಿಟ್ಟ ವಿಚಾರವಾಗಿದೆ.

ಮೋದಿ ಸಂಪುಟದಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ತೀರ್ಮಾನ

ಹೌದು, ಮೋದಿ ಸಂಪುಟದಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ತೀರ್ಮಾನ ‘ಇದು ಹೊಸದೇನು ಅಲ್ಲ, ಕಾಂಗ್ರೆಸ್ ಪಕ್ಷ ಹತ್ತು ವರ್ಷಗಳಿಂದ ಸಪೋರ್ಟ್ ಮಾಡಿದೆ. ಈಗ ಅವರು ಲಾಭ ಆಗುತ್ತೆ ಎಂದು ಮಾಡಿದ್ದಾರೆ. ಮೊದಲಿನಿಂದಲೂ ಇದು ಜಾರಿ ಬರಬೇಕು ಎಂದು ಮನಮೋಹನಸಿಂಗ್ ಕಾಲದಿಂದಲೂ ನಮ್ಮ ಪಕ್ಷ ಹೇಳುತ್ತಾ ಬಂದಿದೆ. ಇದೀಗ ಶೇ.33 ಮೀಸಲಾತಿಯನ್ನು ಸ್ವಾಗತಿಸುತ್ತೇವೆ. ಇನ್ನು ಲೋಕಸಭೆ ಚುನಾವಣೆ ಹೊತ್ತಲ್ಲಿ ಈ ತೀರ್ಮಾನ ‘ಎಲ್ಲವನ್ನೂ ರಾಜಕೀಯವಾಗಿ ನೋಡಿದ್ರೆ ಹೇಗೆ, ನೆಗೆಟಿವ್ ಆಗಿಯೇ ಇದ್ದದ್ದನ್ನ ಪಾಸಿಟಿವ್ ಅಗಿಯೂ ತಗೊಳ್ಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬಹಳ ಕೆಳ ಸಮುದಾಯದವರಿದ್ದಾರೆ. ಈಗ ಚರ್ಚೆ ಮಾಡುವುದು ಅನವಶ್ಯಕ ಎಂದರು.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ