ಬೆಂಗಳೂರು, (ನವೆಂಬರ್ 28): ತೆಲಂಗಾಣದಲ್ಲಿ(Telangana) ಕರ್ನಾಟಕ ಸರ್ಕಾರದ ಜಾಹೀರಾತಿಗೆ ಕೇಂದ್ರ ಚುನಾವಣೆ ಆಯೋಗ ತಡೆ ನೀಡಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು, ಕರ್ನಾಟಕದಲ್ಲಿ ಮಾಡಿರುವ ಸಾಧನೆಯನ್ನು ನಾವು ಅಲ್ಲಿ (ತೆಲಂಗಾಣ) ಹಾಕಿದ್ದೇವೆ. ತೆಲಂಗಾಣ ಮತದಾರರ ಮೇಲೆ ಪ್ರಭಾವ ಬೀರಲು ನಾವು ಮಾಡಿಲ್ಲ. ಚುನಾವಣಾ ಆಯೋಗ ಸೂಚನೆ ಬಳಿಕ ಜಾಹೀರಾತು ತೆರವುಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ನಿಗಮ ಮಂಡಳಿ ನೇಮಕ ವಿಚಾರಕ್ಕೆ ನನ್ನನ್ನು ಪರಿಗಣಿಸಿಲ್ಲ ಎಂಬ ಪರಮೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಪರಮೇಶ್ವರ್ ಅಷ್ಟೇ ಅಲ್ಲ, ಯಾರ ಅಭಿಪ್ರಾಯವನ್ನೂ ನಾವು ಪಡೆದಿಲ್ಲ. ನಿಗಮ ಮಂಡಳಿ ನೇಮಕ ಪಟ್ಟಿ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಫೈನಲ್ ಆಗಿಲ್ಲ, ಯಾರ ಅಭಿಪ್ರಾಯವನ್ನು ನಾವು ಪಡೆದಿಲ್ಲ. ಈಗ ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಡೆ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಕೋರ್ಟ್ಗೆ ಹೋಗಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಪಾಪ ಅವರು ಕೊರ್ಟ್ ಗೆ ಹೋಗಲು ನಾವು ಯಾಕೆ ಬೇಡ ಅಂತೀವಿ. ಕೋರ್ಟ್ ಗೆ ಹೋಗೋದು ಚಾಲೆಂಜ್ ಮಾಡುವುದು. ಲಾಯರ್ ಇಟ್ಟುಕೊಂಡು ವಾದ ಮಾಡುವುದು ಅವರಿಗೆ ಬಿಟ್ಟಿದ್ದು. ಅದು ಅವರ ಇಷ್ಟ. ಅದಕ್ಕೆ ನಾವು ಬೇಡ ಎನ್ನುವುದಕ್ಕೆ ಆಗುತ್ತಾ? ಅಂತಿಮ ತೀರ್ಮಾನ ಮಾಡುವುದು ಕೋರ್ಟ್ ಎಂದು ತಿಳಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ