ದೇಶಪ್ರೇಮಿ ಟಿಪ್ಪುವಿನ ಜನ್ಮಸ್ಥಳ ದೇವನಹಳ್ಳಿಯಿಂದ ಕಾಂಗ್ರೆಸ್ ಜನಧ್ವನಿ ಯಾತ್ರೆ ಆರಂಭ: ಸಿದ್ದರಾಮಯ್ಯ

Siddaramaiah: ದೇವನಹಳ್ಳಿ ಟಿಪ್ಪು ಹುಟ್ಟಿದ ಸ್ಥಳ. ಟಿಪ್ಪು ಬ್ರಿಟಿಷರ ವಿರುದ್ದ ಹೋರಾಡಿ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ದೇಶಪ್ರೇಮಿ. ಇದು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಆಡಳಿತ ಮಾಡಿದ ನಾಡು ಸಹ ಹೌದು. ಹೀಗಾಗಿಯೇ ನಮ್ಮ ಸರ್ಕಾರದಲ್ಲಿ ಟಿಪ್ಪು ಜಯಂತಿ, ಕೆಂಪೇಗೌಡ ಜಯಂತಿ ಮಾಡಿದ್ದೆವು.

ದೇಶಪ್ರೇಮಿ ಟಿಪ್ಪುವಿನ ಜನ್ಮಸ್ಥಳ ದೇವನಹಳ್ಳಿಯಿಂದ ಕಾಂಗ್ರೆಸ್ ಜನಧ್ವನಿ ಯಾತ್ರೆ ಆರಂಭ: ಸಿದ್ದರಾಮಯ್ಯ
ಸಂಗ್ರಹ ಚಿತ್ರ
Follow us
Skanda
|

Updated on:Mar 03, 2021 | 5:36 PM

ದೇವನಹಳ್ಳಿ: ಪಕ್ಷ ಸಂಘಟನೆ ಉದ್ದೇಶದಿಂದ ಜನಧ್ವನಿ ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿರುವ ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಈ ವೇಳೆ ಯಾತ್ರೆ ಉದ್ದೇಶಿಸಿ ಮಾತನಾಡಿರುವ ಸಿದ್ದರಾಮಯ್ಯ ಟಿಪ್ಪು ಹಾಗೂ ಕೆಂಪೇಗೌಡರನ್ನು ನೆನೆಸಿಕೊಂಡಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿ ಈ‌ ವರ್ಷವನ್ನು ಸಂಘರ್ಷದ ವರ್ಷ ಎಂದು ಘೋಷಣೆ ಮಾಡಿದೆ. ಹೀಗಾಗಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೂರು ಕ್ಷೇತ್ರಕ್ಕೆ ಭೇಟಿ ಕೊಡಬೇಕು, ಯಾತ್ರೆ ಮಾಡಬೇಕು ಅಂತ ನಿರ್ಧರಿಸಿದ್ದಾರೆ. ಟಿಪ್ಪುವಿನ ಜನ್ಮಸ್ಥಳ ದೇವನಹಳ್ಳಿಯಿಂದ ಯಾತ್ರೆ ಆರಂಭ ಮಾಡಿದ್ದೇವೆ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ಮಾತನಾಡುತ್ತಾ, ಮುರುಗುಮುಲ್ಲಾದಿಂದ ಪಾಂಚಜನ್ಯ ಮೊಳಗಿಸಿದ್ದರು. ಇಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟಿಪ್ಪು ಜನ್ಮಸ್ಥಳದಿಂದ ಪಾದಯಾತ್ರೆ ಆರಂಭಿಸಿದ್ದಾರೆ.

ದೇವನಹಳ್ಳಿ ಟಿಪ್ಪು ಹುಟ್ಟಿದ ಸ್ಥಳ. ಟಿಪ್ಪು ಬ್ರಿಟಿಷರ ವಿರುದ್ದ ಹೋರಾಡಿ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ದೇಶಪ್ರೇಮಿ. ಇದು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಆಡಳಿತ ಮಾಡಿದ ನಾಡು ಸಹ ಹೌದು. ಹೀಗಾಗಿಯೇ ನಮ್ಮ ಸರ್ಕಾರದಲ್ಲಿ ಟಿಪ್ಪು ಜಯಂತಿ, ಕೆಂಪೇಗೌಡ ಜಯಂತಿ ಮಾಡಿದ್ದೆವು. ಜೊತೆಗೆ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇರಿಸಿದ್ದೆವು. ಇವೆಲ್ಲಾ ನಮ್ಮ ಸರ್ಕಾರ ಇದ್ದಾಗ ಆಗಿದ್ದು ಎಂದು ತಿಳಿಸಿದ್ದಾರೆ.

ಇದೇ ವೇಳೆ ಆಡಳಿತ ಪಕ್ಷ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬಿಜೆಪಿಗೆ ಬಡವರ ಬಗ್ಗೆ ಕಾಳಜಿಯಿಲ್ಲ, ಅದು ಬಡವರಿಂದ ಸುಲಿಗೆ ಮಾಡುತ್ತೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡ್ತೀವಿ. ಕಾಂಗ್ರೆಸ್ ಯಾವತ್ತಿಗೂ ಬಡವರ ಪರವಾದ ಪಕ್ಷ. ಆದರೆ, ಬಿಜೆಪಿಯವರಿಗೆ ಲೂಟಿ ಹೊಡೆಯುವುದು ಮಾತ್ರ ಮುಖ್ಯ ಎಂದು ಹರಿಹಾಯ್ದಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇಬ್ಬರು ಮುಖ್ಯಮಂತ್ರಿಗಳನ್ನಿಟ್ಟುಕೊಂಡು ಸರ್ಕಾರ ನಡೆಸಲಾಗುತ್ತಿದೆ. ಒಬ್ಬ ಯಡಿಯೂರಪ್ಪ, ಮತ್ತೊಬ್ಬ ವಿಜಯೇಂದ್ರ ಎಂದು ಕುಹಕವಾಡಿದ್ದಾರೆ.

ಅಂತೆಯೇ ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕಾರವಾಗಿದೆ. ಇದೇ ಸಂದರ್ಭದಲ್ಲಿ ದೇವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಮಾತನಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅದನ್ನು (ಸಿಡಿ) ನನಗೆ ನೋಡುವುದಕ್ಕೆ ಅಸಹ್ಯವಾಗುತ್ತೆ, ಹೇಳುವುದಕ್ಕೂ ನಾಚಿಕೆಯಾಗುತ್ತೆ. ಈಗ ಆ ಸಚಿವ ರಾಜೀನಾಮೆ ಕೊಟ್ಟಿದ್ದಾನಂತೆ. ಅದರೆ, ಆತನ ಸಹೋದರ ಮುಖ್ಯಮಂತ್ರಿಗಳ ಬಳಿ ನಮ್ಮ ಅಣ್ಣನ ರಾಜೀನಾಮೆ ಪಡೆದುಕೊಂಡ್ರೆ ನಿಮ್ಮ ಸಿಡಿ ರಿಲೀಸ್ ಮಾಡ್ತೀನಿ ಎಂದು ಹೇಳ್ತಾನಂತೆ. ಇಂತಹ ಮಾನಗೆಟ್ಟ ಸರ್ಕಾರ ಬೇಕಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಅಣ್ಣನ ರಾಜೀನಾಮೆ ಅಂಗೀಕರಿಸಿದ್ರೆ ನಿಮ್ಮ(ಯಡಿಯೂರಪ್ಪ) ಸಿ.ಡಿ. ರಿಲೀಸ್ ಮಾಡ್ತೀನಿ ಅಂತಿದ್ದಾನಂತೆ: ಇಂಥಾ ಮಾನಗೆಟ್ಟ ಸರ್ಕಾರ ಬೇಕಾ? -ಸಿದ್ದರಾಮಯ್ಯ

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ; ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪಗೆ ಪತ್ರ ರವಾನೆ

Published On - 4:05 pm, Wed, 3 March 21