ಸರ್ಕಾರದಲ್ಲಿರುವ ಕೆಲವು ಮಂತ್ರಿಗಳು ಪರ್ಸೆಂಟೇಜ್ ತೆಗೆದುಕೊಳ್ಳುತ್ತಿರುವುದು ಸತ್ಯ : ಶಾಸಕ ಶಿವನಗೌಡ ನಾಯಕ್

| Updated By: ವಿವೇಕ ಬಿರಾದಾರ

Updated on: May 18, 2022 | 1:22 PM

ಸರ್ಕಾರದಲ್ಲಿರುವ ಕೆಲವು ಮಂತ್ರಿಗಳು ಪರ್ಸೆಂಟೇಜ್ ತೆಗೆದುಕೊಳ್ಳುತ್ತಿರುವುದು ಸತ್ಯ ಎಂದು ಟಿವಿ9ಗೆ ದೇವದುರ್ಗ ಕ್ಷೇತ್ರದ ಶಾಸಕ ಶಿವನಗೌಡ ನಾಯಕ್ ಹೇಳಿದ್ದಾರೆ.

ಸರ್ಕಾರದಲ್ಲಿರುವ ಕೆಲವು ಮಂತ್ರಿಗಳು ಪರ್ಸೆಂಟೇಜ್ ತೆಗೆದುಕೊಳ್ಳುತ್ತಿರುವುದು ಸತ್ಯ : ಶಾಸಕ ಶಿವನಗೌಡ ನಾಯಕ್
ಶಾಸಕ ಶಿವನಗೌಡ ನಾಯಕ್
Follow us on

ರಾಯಚೂರು: ಸರ್ಕಾರದಲ್ಲಿರುವ ಕೆಲವು ಮಂತ್ರಿಗಳು ಪರ್ಸೆಂಟೇಜ್ ತೆಗೆದುಕೊಳ್ಳುತ್ತಿರುವುದು ಸತ್ಯ ಎಂದು ಟಿವಿ9ಗೆ ದೇವದುರ್ಗ ಕ್ಷೇತ್ರದ ಶಾಸಕ ಶಿವನಗೌಡ ನಾಯಕ್ ಹೇಳಿದ್ದಾರೆ. ಬಿಜೆಪಿ (BJP) ಶಾಸಕ (MLA) ಶಿವನಗೌಡ ನಾಯಕ್ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಜೊತೆ ಮಾತನಾಡಿದ ಅವರು 7 ತಿಂಗಳ ಹಿಂದೆಯೇ ನಾನು ಇಬ್ಬರು ಸಚಿವರ ಪರ್ಸೆಂಟೇಜ್ ಜಾಸ್ತಿ ಆಗುತ್ತಿದೆ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲೇ ಪ್ರಸ್ತಾಪಿಸಿದ್ದೆ. ಸಭೆಯಲ್ಲಿ ಆಗಿನ ಮುಖ್ಯಮಂತ್ರಿ ಹಾಗೂ ಈಗಿನ ಮುಖ್ಯಮಂತ್ರಿ ಕೂಡಾ ಇದ್ದರು. ಅಲ್ಲದೇ ರಾಜ್ಯದ ಉಸ್ತುವಾರಿಗಳ ಕೂಡಾ ಇದ್ದರು.

ಇದನ್ನು ಓದಿ: ಹದಗೆಟ್ಟ ಕೆಎಸ್‌ಆರ್‌ಟಿಸಿಯ ಸುಮಾರು 400 ಬಸ್, ಬಸ್​ಗಳನ್ನು ತರಗತಿಗಳಾಗಿ ನಿರ್ಮಾಣ ಮಾಡಲು ಕೇರಳ ಸರಕಾರ ಚಿಂತನೆ

ಆಗ ಆ ಸಚಿವರು ಇಂಡೋರ್ ನಲ್ಲಿ ನನಗೆ ಹೇಳಬಹುದಿತ್ತು. ಯಾಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿದ್ರಿ ಅಂತ ಕೇಳಿದರು. ನಾನು ಸಭೆಯಲ್ಲಿ ಪರ್ಸೆಂಟೇಜ್ ವಿಚಾರ ಪ್ರಸ್ತಾಪಿಸಿದ್ದಕ್ಕೆ ಹೊಟ್ಟೆ ಕಿಚ್ಚಿನಿಂದ ಓರ್ವ XYZ ಮಿನಿಸ್ಟರ್  (Minister) ಸೇರಿದಂತೆ ಆಡಿಯೋ ಲೀಕ್ ಮಾಡಿದ್ದಾರೆ. ಮಂತ್ರಿಯದ್ದು ಯಾವ ಇಲಾಖೆ ಎಂದು ಹೇಳುವುದಿಲ್ಲ. ಒಟ್ಟಿನಲ್ಲಿ ಉನ್ನತ ಹುದ್ದೆಯಲ್ಲಿರೋವಂಥವರು ಇದನ್ನು ಮಾಡಿದ್ದಾರೆ. ಇನ್ನೂ ಮೂರ್ನಾಲ್ಕು ವಿಡಿಯೋ ಲೀಕ್ ಆಗಬಹುದು. ಈಗಲೂ ಆ ಮಂತ್ರಿ ನನಗೆ ನೆಗೆಟಿವ್ ಇದ್ದಾರೆ. ಕೆಲಸ ಮಾಡಲ್ಲ ನಂಗೇನು ಬೇಜಾರಿಲ್ಲ ಎಂದು ಶಿವನಗೌಡ ನಾಯಕ್ ಹೇಳಿದ್ದಾರೆ.

ಇದನ್ನೂ ಓದಿ
ಬೆಂಗಳೂರು ಹೊರಮಾವು ಪ್ರದೇಶದಲ್ಲಿ 300-400 ಮನೆಗಳು ಜಲಾವೃತ! 24 ಗಂಟೆಗೆ 114 ಮಿಮೀ ಮಳೆ ದಾಖಲು
ಹದಗೆಟ್ಟ ಕೆಎಸ್‌ಆರ್‌ಟಿಸಿಯ ಸುಮಾರು 400 ಬಸ್, ಬಸ್​ಗಳನ್ನು ತರಗತಿಗಳಾಗಿ ನಿರ್ಮಾಣ ಮಾಡಲು ಕೇರಳ ಸರಕಾರ ಚಿಂತನೆ
ರಾಜೀವ್ ಗಾಂಧಿ ಹತ್ಯೆ ಅಪರಾಧಿ ಪೇರರಿವಾಳನ್ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ
ವಾವ್! ಬಿಳಿಗಿರಿರಂಗನ ಬೆಟ್ಟದಲ್ಲಿ ಮೋಡಗಳಿಂದ ಸೃಷ್ಟಿಯಾದ ಮನಮೋಹಕ ದೃಶ್ಯ

ಇದನ್ನು ಓದಿ: ನೀರು ನುಗ್ಗಿರುವ ಮನೆಗಳಿಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಮಂತ್ರಿಗಳು ಓಎಸ್ ಡಿ‌ ಅಧಿಕಾರಿ ಇಟ್ಟುಕೊಂಡು ಪರ್ಸೆಂಟೇಜ್ ಕಲೆಕ್ಟ್ ಮಾಡ್ತಿದ್ದಾರಂತೆ. ಈ ಬಗ್ಗೆ ಪ್ರಧಾನ ಮಂತ್ರಿಗೆ ಖುದ್ದು ಪತ್ರ ಬರೆಯಲು ಮುಂದಾಗಿದ್ದೆ. ಆದರೆ ಕೆಲವರ ಸಲಹೆ ಮೆರೆಗೆ ಹಿರಿಯರಿಗೆ ಮಾಹಿತಿ ತಿಳಿಸಿ ಸುಮ್ಮನಾಗಿದ್ದೇನೆ.

ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ : ಹಾಲಪ್ಪ ಆಚಾರ್

ಕೊಪ್ಪಳ: ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ. ನಮ್ಮ ಇಲಾಖೆಯಲ್ಲಿ ಇರುವ ಎಲ್ಲರೂ ಸತ್ಯ ಹರಿಶ್ಚಂದ್ರರಲ್ಲ. ಮಕ್ಕಳಿಗೆ ಕೊಡುವುದರಲ್ಲೂ ಆಸೆ ಮಾಡುತ್ತಾರೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರಿನ ವಾರ್ಡ್ ನಂಬರ್ 8 ರಲ್ಲಿ ಅಂಗನವಾಡಿ ನೂತನ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು ಗರ್ಭಿಣಿಯರಿಗೆ ಕೊಡುವುದರಲ್ಲೂ ಆಸೆ ಮಾಡುತ್ತಾರೆ ಪರೋಕ್ಷವಾಗಿ ತಮ್ಮ ಇಲಾಖೆಯಲ್ಲೂ ಭ್ರಷ್ಟಾಚಾರ ಇದೆ ಎಂದು ಒಪ್ಪಿಕೊಂಡಂತಾಗಿದೆ.

 

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:09 pm, Wed, 18 May 22