AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚ್ಚಿದಾನಂದ ಮನವೊಲಿಸಲು ಡಿ ಬಾಸ್ ಮೊರೆ, ಸುಮಲತಾ ರಾಜಕೀಯ ನಡೆ ಇಂದು ನಿರ್ಧಾರ!

ಮಂಡ್ಯ ಅಂದ್ರೆ ಸ್ವಾಭಿಮಾನದ ಕೋಟೆ. ಜಿದ್ದಾಜಿದ್ದಿನ ರಾಜಕೀಯಕ್ಕೆ ಮಂಡ್ಯ ಹೆಸರುವಾಸಿ. ಮಂಡ್ಯದಲ್ಲಿ(Mandya) ರಾಜಕಾರಣದ ಕಿಚ್ಚು ಹೊತ್ತಿಕೊಳ್ತು ಅಂದ್ರೆ ಅದನ್ನು ಇಡೀ ಇಂಡಿಯಾವೇ ತಿರುಗಿ ನೋಡತ್ತೆ. ಕಳೆದ ಲೋಕಸಭಾ ಚುನಾವಣೆ (Loksabha elections 2024) ಅದು ಸಾಬೀತಾಗಿದೆ. ಇದೀಗ ಈ ಬಾರಿಯೂ ಸಹ ಮಂಡ್ಯ ಕ್ಷೇತ್ರವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹೌದು...ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಆದ್ರೆ, ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್​​ಗೆ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದೆ. ಹೀಗಾಗಿ ಸಮಲತಾ ಅಂಬರೀಶ್ (Sumalata Ambarish)ಇದೀಗ ಅತಂತ್ರರಾಗಿದ್ದು, ಮುಂದಿನ ಹೆಜ್ಜೆ ಇಡಲು ಇಂದು(ಫೆಬ್ರವರಿ 25) ಮಹತ್ವದ ಸಭೆ ನಡೆಸಲಿದ್ದಾರೆ. ಇನ್ನು ಪ್ರಮುಖವಾಗಿ ಈ ಸಭೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಪಾಲ್ಗೊಳ್ಳುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಸಚ್ಚಿದಾನಂದ ಮನವೊಲಿಸಲು ಡಿ ಬಾಸ್ ಮೊರೆ, ಸುಮಲತಾ ರಾಜಕೀಯ ನಡೆ ಇಂದು ನಿರ್ಧಾರ!
ರಮೇಶ್ ಬಿ. ಜವಳಗೇರಾ
|

Updated on:Feb 25, 2024 | 12:01 PM

Share

ಬೆಂಗಳೂರು/ಮಂಡ್ಯ, (ಫೆಬ್ರವರಿ 25): ಮಂಡ್ಯ ಲೋಕಸಭಾ (Mandya Loksabha Election 2024))ಅಖಾಡ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಈ ಬಾರಿ ಮಂಡ್ಯ ಬಿಜೆಪಿ ಟಿಕೆಟ್‌ಗೆ ಬಿಗಿಪಟ್ಟು ಹಿಡಿದಿದ್ದಾರೆ. ಆದ್ರೆ, ಬಿಜೆಪಿ ಹೈಕಮಾಂಡ್​, ಮಿತ್ರ ಪಕ್ಷ ಜೆಡಿಎಸ್​ಗೆ ಮಂಡ್ಯ ಬಿಟ್ಟುಕೊಡಲು ಮುಂದಾಗಿದೆ. ಹೀಗಾಗಿ ಸುಮಲತಾ ಅವರು ಇಂದು(ಫೆಬ್ರವರಿ 25) ಬೆಂಬಲಿಗರು, ಹಿತೈಷಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇನ್ನು ಸಂಸದೆಯೊಂದಿಗೆ ಅಂತರ ಕಾಯ್ದುಕೊಂಡಿರುವ ಇಂಡವಾಳು ಸಚ್ಚಿದಾನಂದ (Sachidananda Induvalu ) ಅವರನ್ನು ಸಭೆಗೆ ಕರೆತರಲು ಸುಮಲತಾ ನಟ ದರ್ಶನ್ ಅವರ ಮೊರೆ ಹೋಗಿದ್ದಾರೆ.

ಸಂಸದೆ ಸುಮಲತಾ ಇಂದು ಸಂಜೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬೆಂಬಲಿಗರು, ಆಪ್ತರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಬೆಂಬಲಿಗರು, ಹಿತೈಷಿಗಳು ಪಾಲ್ಗೊಳ್ಳಲಿದ್ದು, ಒಂದು ವೇಳೆ ಮಂಡ್ಯ ಜೆಡಿಎಸ್ ಪಾಲಾದರೆ ಏನು ಮಾಡೋಣ, ಪಕ್ಷೇತರವಾಗಿ ಸ್ಪರ್ಧಿಸಿದರೆ ಹೇಗೆ? ಎಂದು ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇನ್ನು ಈ ಸಭೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪಾಲ್ಗೊಳ್ಳುತ್ತಿರುವುದು ರಾಜ್ಯ ಮತ್ತಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್​ಗೆ ಫಿಕ್ಸ್; ಹೆಚ್​ಡಿ ಕುಮಾರಸ್ವಾಮಿ, ಅಮಿತ್ ಶಾ ಮಾತುಕತೆ

ಸಚ್ಚಿದಾನಂದ ಮನವೊಲಿಸಲು ಡಿ ಬಾಸ್ ಮೊರೆ

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದ ಇಂಡವಾಳು ಸಚ್ಚಿದಾನಂದ, ಸದ್ಯ ಸಮಲತಾ ಅವರಿಂದಅಂತರ ಕಾಯ್ದುಕೊಂಡಿದ್ದಾರೆ. ಇದು ಸುಮಲತಾಗೆ ದೊಡ್ಡ ಹಿನ್ನಡೆಯಾಗಿದೆ. ಇದೀಗ ಮತ್ತೆ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಿದರೆ ಸಚ್ಚಿದಾನಂದ ಅನಿವಾರ್ಯ. ಹೀಗಾಗಿ ಸಚ್ಚಿದಾನಂದ ಜೊತೆ ಮತ್ತೆ ಬಾಂಧವ್ಯ ಬೆಸಯಲು ಸುಮಲತಾ ಕಸರತ್ತು ನಡೆಸಿದ್ದು, ಡಿ ಬಾಸ್ ಮೂಲಕ ಸಚ್ಚಿದಾನಂದ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ.

ಇನ್ನು ದರ್ಶನ್​ ಸಹ ಸಚ್ಚಿದಾನಂದ ಅವರ ಜೊತೆ ಮಾತುಕತೆ ನಡೆಸಿದ್ದು, ಇಂದಿನ ಸಭೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ ಅವರ ಆಹ್ವಾನದ ಮೇರೆಗೆ ಸಚ್ಚಿದಾನಂದ ಅವರು ಸಭೆಗೆ ಹಾಜರಾಗುವ ಸಾಧ್ಯತೆಗಳಿದ್ದು, ಈ ಬಾರಿಯೂ ಸಹ ಸುಮಲತಾ ಅವರ ಜೊತೆ ಇರಿ ಎಂದು ದರ್ಶನ್​ ಮನವೊಲಿಸಲಿದ್ದಾರೆ ಎನ್ನಲಾಗಿದೆ.

ಸಚ್ಚಿದಾನಂದ ಸಂಪರ್ಕಿಸಿರುವ ದಳಪತಿಗಳು

ಈಗಾಗಲೇ ಸುಮಲತಾ ಅವರಿಂದ ಅಂತರ ಕಾಪಾಡಿಕೊಂಡಿರುವ ಇಂಡುವಾಳು ಸಚ್ಚಿದಾನಂದ ಅವರನ್ನು ಸೆಳೆಯಲು ಈಗಾಗಲೇ ಎಚ್​ಡಿ ದೇವೇಗೌಡ ಹಾಗೂ ಎಚ್​ಡಿ ಕುಮಾರಸ್ವಾಮಿ ಪ್ರಯತ್ನಿಸಿದ್ದಾರೆ. ಸಚ್ಚಿದಾನಂದ ಅವರ ಜೊತೆ ಈಗಾಗಲೇ ಅಪ್ಪ-ಮಕ್ಕಳು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಈ ಬಾರಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ದರ್ಶನ್​ ಸಹ ಆದ್ರೆ, ಸಚ್ಚಿದಾನಂದ ಅವರನ್ನು ಸುಮಲತಾ ಅವರ ಸಭೆಗೆ ಕರೆದಿದ್ದು,  ದರ್ಶನ ಅವರ ಮಾತಿಗೆ ಸಚ್ಚಿದಾನಂದ ಬೆಲೆ ಕೊಡುತ್ತಾರಾ? ಅಥವಾ ತಮ್ಮ ಹೆಜ್ಜೆಯಲ್ಲೇ ನಡೆಯುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಮಂಡ್ಯ ಅಂದ್ರೆ ಸ್ವಾಭಿಮಾನದ ಕೋಟೆ. ಜಿದ್ದಾಜಿದ್ದಿನ ರಾಜಕೀಯಕ್ಕೆ ಮಂಡ್ಯ ಹೆಸರುವಾಸಿ. ಮಂಡ್ಯದಲ್ಲಿ(Mandya) ರಾಜಕಾರಣದ ಕಿಚ್ಚು ಹೊತ್ತಿಕೊಳ್ತು ಅಂದ್ರೆ ಅದನ್ನು ಇಡೀ ಇಂಡಿಯಾವೇ ತಿರುಗಿ ನೋಡತ್ತೆ. ಕಳೆದ ಲೋಕಸಭಾ ಚುನಾವಣೆ (Loksabha elections 2024) ಅದು ಸಾಬೀತಾಗಿದೆ. ಇದೀಗ ಈ ಬಾರಿಯೂ ಸಹ ಮಂಡ್ಯ ಕ್ಷೇತ್ರವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:06 am, Sun, 25 February 24

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು