ಬಿಜೆಪಿ ಸೋಲಿಗೆ ಸಂಸದೆ ಸುಮಲತಾ ಪರೋಕ್ಷ ಕಾರಣ: ಅಭ್ಯರ್ಥಿ ಡಾ ಇಂದ್ರೇಶ್ ಆರೋಪ

|

Updated on: May 23, 2023 | 5:23 PM

ಮೇಲುಕೋಟೆಯಲ್ಲಿ ಬಿಜೆಪಿ ಸೋಲಿಗೆ ಪರೋಕ್ಷವಾಗಿ ಸಂಸದೆ ಕಾರಣ ಎಂದು ಸುಮಲತಾ ವಿರುದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಡಾ. ಇಂದ್ರೇಶ್ ಆರೋಪ ಮಾಡಿದ್ದಾರೆ.

ಬಿಜೆಪಿ ಸೋಲಿಗೆ ಸಂಸದೆ ಸುಮಲತಾ ಪರೋಕ್ಷ ಕಾರಣ: ಅಭ್ಯರ್ಥಿ ಡಾ ಇಂದ್ರೇಶ್ ಆರೋಪ
ಸಂಸದೆ ಸುಮಾಲತಾ
Follow us on

ಮಂಡ್ಯ: ಮೇಲುಕೋಟೆಯಲ್ಲಿ ಬಿಜೆಪಿ ಸೋಲಿಗೆ ಪರೋಕ್ಷವಾಗಿ ಸಂಸದೆ ಕಾರಣ ಎಂದು ಸುಮಲತಾ (Sumalatha) ವಿರುದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಡಾ. ಇಂದ್ರೇಶ್ ಆರೋಪ ಮಾಡಿದ್ದಾರೆ. ಜಿಲ್ಲೆಯ ಪಾಂಡವಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದರ್ಶನ್ ಪುಟ್ಟಣ್ಣಯ್ಯ ಗೆಲ್ಲಬೇಕು ಎಂದು ಸುಮಲತಾ ಹೇಳಿದ್ದರು. ಅವರ ಹೇಳಿಕೆ ಬಳಿಕ ನಮ್ಮ ಕ್ಷೇತ್ರದಲ್ಲಿ ಬದಲಾವಣೆ ಆಯ್ತು. ಸಿಎಂ ಇಂಟೆಲಿಜೆನ್ಸ್​ ಪ್ರಕಾರ 38 ಸಾವಿರ ವೋಟ್​ ಬರಬೇಕಿತ್ತು. ಪುಟ್ಟರಾಜು ಗೆಲ್ತಾರೆ ಅನ್ನೋ ಭಯದಿಂದ ನನಗೆ ಮತ ಕಡಿಮೆ ಆಗಿದೆ‌. ಈ ಬಾರಿ ದರ್ಶನ್​ ಬೆಂಬಲಿಸ್ತೇವೆ ದಯಮಾಡಿ ಕ್ಷಮಿಸಿ ಅಂತಾ ಹೇಳಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಅಂತಾ ಹೇಳಿ, ಸುಮಲತಾ ಹೇಳಿಕೆಯಿಂದ ಆರೇಳು ದಿನಕ್ಕೆ ಮತ ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ. ಸುಮಲತಾ ಕೆಲಸವನ್ನ ನಮ್ಮ ಕಾರ್ಯಕರ್ತರು ಕೂಡ ಒಪ್ಪಲ್ಲ. ಪಕ್ಷದ ರಾಜ್ಯಮಟ್ಟದ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಮೋದಿ ನಾಯಕತ್ವದ ಮೇಲೆ ಯಾವತ್ತಿಗೂ ನಂಬಿಕೆ ಇದೆ; ವದಂತಿಗಳನ್ನು ನಿರಾಕರಿಸಿದ ಸುಮಲತಾ ಕೊಟ್ಟ ವಿವರಣೆ ಇಲ್ಲಿದೆ ನೋಡಿ

ಡಾ. ಇಂದ್ರೇಶ್​ಗೆ ಸುಮಲತಾ ಆಪ್ತ ಬೇಲೂರು ಸೋಮಶೇಖರ್ ಟಕ್ಕರ್

ಈ ವಿಚಾರವಾಗಿ ಡಾ. ಇಂದ್ರೇಶ್​ಗೆ ಸುಮಲತಾ ಆಪ್ತ ಬೇಲೂರು ಸೋಮಶೇಖರ್ ಟಕ್ಕರ್ ನೀಡಿದ್ದಾರೆ. ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ರೈತ ಸಂಘ ನಮ್ಮನ್ನ ಬೆಂಬಲಿಸಿತ್ತು. ಸುಮಲತಾ ಅಂಬರೀಷ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವಾಗ ಸಹ ಕೆಲ ಕಂಡಿಷನ್ ಹಾಕಿದ್ದರು. ರೈತ ಸಂಘದ ಅಭ್ಯರ್ಥಿ ವಿರುದ್ದ ಪ್ರಚಾರ ಮಾಡಲು ಸಾದ್ಯವಿಲ್ಲವೆಂದು ತಿಳಿಸಿದ್ದರು. ಈ ವಿಚಾರ ಬಿಜೆಪಿಯ ಹೈ ಕಮಾಂಡ್​ಗೂ ಸಹ ಗೊತ್ತಿದೆ. ಎಲ್ಲಾ ಗೊತ್ತಿದ್ದರು ಡಾ. ಇಂದ್ರೇಶ್ ಈಗ ವ್ಯತರಿಕ್ತ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

ಸಂಸದರು ದರ್ಶನ್ ಪುಟ್ಟಣ್ಣಯ್ಯ ಪರ ನಿಲ್ಲುತ್ತಾರೆಂದು ಮೊದಲೇ ಗೊತ್ತಿತ್ತು. ಸಂಸದೆ ಸುಮಲತಾ ಅಂಬರೀಷ್ ಎಲ್ಲಿಯೂ ನೇರವಾಗಿ ಹೋಗಿ ದರ್ಶನ್ ಪುಟ್ಟಣ್ಣಯ್ಯರ ಪರ ಪ್ರಚಾರ ನಡೆಸಿಲ್ಲ. ಒಂದು ವೇಳೆ ನೇರವಾಗಿ ಹೋಗಿ ಪ್ರಚಾರ ಮಾಡಿದ್ರೆ ದರ್ಶನ್​ಗೆ ಇನ್ನು 15 ಸಾವಿರ ಲೀಡ್ ಹೆಚ್ಚಾಗುತ್ತಿತ್ತು. ನಾವೆಲ್ಲೂ ಕದ್ದು ಮುಚ್ಚಿ ಹೋಗಿ ಕೆಲಸ ಮಾಡಿಲ್ಲ.

ಇದನ್ನೂ ಓದಿ: Karnataka Polls 2023: ಕಾಂಗ್ರೆಸ್​ ಕಾರ್ಯಕರ್ತರ ಕ್ಷಮೆಯಾಚಿಸಿದ ಸುಮಲತಾ ಅಂಬರೀಶ್, ಯಾಕೆ ಗೊತ್ತಾ?

ಇಂದ್ರೇಶ್​ರ ಹೇಳಿಕೆ ಹಿಂದೆ ಬೇರೆಯವರ ಕೈ ವಾಡವಿದೆ

ಇಂದ್ರೇಶ್ ಅವರ ಹೇಳಿಕೆ ಸರಿಯಲ್ಲಾ. ಸುಮಲತಾ ಅವರು ಮೇಲುಕೋಟೆ ಕ್ಷೇತ್ರ ಹೊರತು ಪಡಿಸಿ ಬೇರೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿದ್ದರು. ಮೇಲುಕೋಟೆಗೆ ಬಿಜೆಪಿ ಪರ ಪ್ರಚಾರ ಮಾಡಲು ಬರುವುದಿಲ್ಲವೆಂದು ಸ್ವತಃ ಇಂದ್ರೇಶ್​ಗೆ ತಿಳಿದಿತ್ತು. ಇಂದ್ರೇಶ್​ರ ಹೇಳಿಕೆ ಹಿಂದೆ ಬೇರೆಯವರ ಕೈ ವಾಡವಿದೆ ಎಂದು ಬೇಲೂರು ಸೋಮಶೇಖರ್​ ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.