Breaking ನಿಜವಾದ ಶಿವಸೇನಾ ಯಾರು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Aug 04, 2022 | 12:43 PM

ನಿಜವಾದ ಶಿವಸೇನಾ ನಾವೇ ಎಂದು ವಾದಿಸುತ್ತಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳಬೇಡಿ ಎಂದು ಚುನಾವಣಾ ಆಯೋಗಕ್ಕೆ ಹೇಳಿದ ಸುಪ್ರೀಂಕೋರ್ಟ್

Breaking ನಿಜವಾದ ಶಿವಸೇನಾ ಯಾರು ಎಂಬುದರ ಬಗ್ಗೆ  ನಿರ್ಧಾರ ಕೈಗೊಳ್ಳಬೇಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್
ಉದ್ಧವ್ ಠಾಕ್ರೆ- ಏಕನಾಥ್ ಶಿಂಧೆ
Follow us on

ದೆಹಲಿ: ಶಿವಸೇನಾ (Shiv sena) ಮೇಲಿನ ನಿಯಂತ್ರಣ ಯಾರಿಗೆ ಎಂಬ ಹೋರಾಟದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಬಿಗ್‌ ರಿಲೀಫ್‌ ನೀಡಿರುವ ಸುಪ್ರೀಂಕೋರ್ಟ್‌ (Supreme Court), ನಿಜವಾದ ಶಿವಸೇನಾ ನಾವೇ ಎಂದು ವಾದಿಸುತ್ತಿರುವ ಪ್ರತಿಸ್ಪರ್ಧಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳಬೇಡಿ ಎಂದು ಚುನಾವಣಾ ಆಯೋಗಕ್ಕೆ (Election Commission )ಹೇಳಿದೆ. ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ನೀಡಬೇಕೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರಿದ್ದಾರೆ ಹಾಗಾಗಿ ನಾವೇ ನಿಜವಾದ ಶಿವಸೇನಾ ಎಂದು ಶಿಂಧೆ ವಾದಿಸುತ್ತಿದ್ದು, ಬಹುಮತದಿಂದ ಪ್ರಜಾಸತ್ತಾತ್ಮಕವಾಗಿ ತೆಗೆದುಕೊಂಡ ಪಕ್ಷದ ಆಂತರಿಕ ನಿರ್ಧಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಹೇಳಿದ್ದಾರೆ. ನೀವು ಚುನಾಯಿತರಾದ ಮೇಲೆ ಸಂಪೂರ್ಣವಾಗಿ ರಾಜಕೀಯ ಪಕ್ಷವೊಂದನ್ನು ಕಡೆಗಣಿಸುತ್ತಿದ್ದೀರಿ ಎಂದಾದರೆ ಅದು ಪ್ರಜಾತಂತ್ರಕ್ಕೆ ಅಪಾಯಕಾರಿ ಅಲ್ಲವೇ ಎಂದು ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಶಿಂಧೆ ಬಣಕ್ಕೆ ಕೇಳಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ನ್ಯಾಯವಾದಿ, ಶಿಂಧೆ ಬಣದ ಪರ ವಾದಿಸುತ್ತಿರುವ ಹರೀಶ್ ಸಾಳ್ವೆ, ಇಲ್ಲ ಎಂದಿದ್ದಾರೆ.

ಚುನಾವಣಾ ಆಯೋಗ ನಿರ್ಧರಿಸಲಿ ಎಂದು ಠಾಕ್ರೆ ಬಣ ಬಯಸುತ್ತಿಲ್ಲ. ಶಿಂಧೆ ಬಣದಲ್ಲಿರುವ ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ನಿರ್ಧಾರ ಬಾಕಿ ಇದ್ದು ಅಲ್ಲಿಯವರಿಗೆ ನಿಜವಾದ ಶಿವಸೇನಾ ವಿಷಯ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳುವುದಕ್ಕೆ ತಡೆ ನೀಡಿ ಎಂದು ಠಾಕ್ರೆ ಬಣ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಎರಡೂ ಬಣಗಳು ಆಗಸ್ಟ್ 8ಕ್ಕೆ ಮುಂಚಿತವಾಗಿ ಸಾಕ್ಷ್ಯ ಸಲ್ಲಿಸಬೇಕು ಎಂದು ಕೇಳಿರುವ ಚುನಾವಣಾ ಆಯೋಗ ಆನಂತರವೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ.

Published On - 12:23 pm, Thu, 4 August 22