AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿನಾದ್ರೂ ಕರೆಸಿಕೊಳ್ಳಲಿ ಏನಾದ್ರೂ ಮಾಡಿಕೊಳ್ಳಲಿ, ಮೊದಲು ಹೃದಯಗಳನ್ನು ಜೋಡಿಸೋಣ: ಡಿಕೆಶಿ

ಚಾಮರಾಜಪೇಟೆ ಮೈದಾನ ಬಗ್ಗೆ ಸುಪ್ರೀಂಕೋರ್ಟ್ ಆದೇಶ ವಿಚಾರ ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಬೇಕು ಎಂದ ಡಿ.ಕೆ.ಶಿವಕುಮಾರ್, ನಿನ್ನೆ ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಹೋಗಿದ್ದಾಗ ನಾಚಿಕೆ ಆಯ್ತು. ಅವರು ಮೋದಿನಾದ್ರೂ ಕರೆಸಿಕೊಳ್ಳಲಿ, ಏನಾದ್ರೂ ಮಾಡಿಕೊಳ್ಳಲಿ, ಮೊದಲು ಹೃದಯಗಳನ್ನು ಜೋಡಿಸೋಣ, ಆಮೇಲೆ ಉಳಿದದ್ದು ಎಂದರು.

ಮೋದಿನಾದ್ರೂ ಕರೆಸಿಕೊಳ್ಳಲಿ ಏನಾದ್ರೂ ಮಾಡಿಕೊಳ್ಳಲಿ, ಮೊದಲು ಹೃದಯಗಳನ್ನು ಜೋಡಿಸೋಣ: ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
TV9 Web
| Updated By: Rakesh Nayak Manchi|

Updated on:Aug 31, 2022 | 11:55 AM

Share

ಬೆಂಗಳೂರು: ಚಾಮರಾಜಪೇಟೆ ಮೈದಾನ ಬಗ್ಗೆ ಸುಪ್ರೀಂಕೋರ್ಟ್ ಆದೇಶ ವಿಚಾರ ಸಂಬಂಧ ಪ್ರತಿಯೊಬ್ಬರೂ ಕಾನೂನಿಗೆ ಗೌರವ ಕೊಡಬೇಕು ಎಂದು ಕೆಪಿಸಿಸಿ ಆಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಈ ಬಗ್ಗೆ ನಗರದಲ್ಲಿ ಹೇಳಿಕೆ ನೀಡಿದ ಅವರು, ಅಶಾಂತಿಯನ್ನು ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು. ನಾವೆಲ್ಲ ಹಿಂದೂಗಳಲ್ವೆ, ನಮಗೆ ಹಬ್ಬ ಇಲ್ವೆ? ಭಾವನೆಗಳಿಗೆ ತೊಂದರೆ ಕೊಡುವಂತೆ ಯಾರೂ ನಡೆದುಕೊಳ್ಳಬಾರದು ಎಂದರು.

ನಿರುದ್ಯೋಗದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರು, ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ, ಆರ್ಥಿಕ ವ್ಯವಸ್ಥೆ ಕುಸಿದಿದೆ. ಮಂಗಳೂರು 2ನೇ ಮುಂಬೈ ಆಗಬೇಕಿತ್ತು, ಆದರೆ ಆ ನಗರ ಇನ್ನೂ ಬೆಳವಣಿಗೆ ಆಗುತ್ತಿಲ್ಲ. ಆರ್ಥಿಕ ವ್ಯವಸ್ಥೆ ಬಿದ್ದು ಹೋಗಿದೆ. ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕು. ಹುಬ್ಬಳ್ಳಿಯಲ್ಲಿ ಗಲಾಟೆಯಾದರೆ ಬಂಡವಾಳ ಹೂಡಲು ಯಾರೂ ಬರುವುದಿಲ್ಲ. ನಿನ್ನೆ ಮಳೆ ಹಾನಿ ಪ್ರದೇಶ ವೀಕ್ಷಣೆಗೆ ಹೋಗಿದ್ದಾಗ ನಾಚಿಕೆ ಆಯ್ತು. ಅವರು ಮೋದಿನಾದ್ರೂ ಕರೆಸಿಕೊಳ್ಳಲಿ ಅಥವಾ ಏನಾದರೂ ಮಾಡಿಕೊಳ್ಳಲಿ, ಮೊದಲು ಹೃದಯಗಳನ್ನು ಜೋಡಿಸೋಣ, ಉಳಿದದ್ದೆಲ್ಲಾ ಆಮೇಲೆ ಎಂದರು.

ನಾಡಿನ ಜನತೆಗೆ ವಿಘ್ನಗಳನ್ನು ನಿವಾರಣೆ ಮಾಡಲಿ ಎಂದ ಡಿಕೆಶಿ

ಗಣೇಶ ಚತುರ್ಥಿ ಹಬ್ಬಕ್ಕೆ ನಾಡಿನ ಜನತೆಗೆ ಶುಭಾಹಾರೈಸಿದ ಡಿ.ಕೆ.ಶಿವಕುಮಾರ್, ನಾಡಿನ ಜನತೆಯ ವಿಘ್ನಗಳನ್ನು ನಿವಾರಣೆ ಮಾಡಲಿ ಅಂತಾ ಪ್ರಾರ್ಥನೆ ಮಾಡುತ್ತೇನೆ. ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಕೆಜಿಎಫ್ ಬಾಬುಗೂ, ಚಿಕ್ಕಪೇಟೆಗೂ ಏನು ಸಂಬಂಧ?

ಚಿಕ್ಕಪೇಟೆಯಲ್ಲಿ ಕೆಜಿಎಫ್ ಬಾಬು ಕೆಲಸ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕೆಜಿಎಫ್ ಬಾಬುಗೂ, ಚಿಕ್ಕಪೇಟೆಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬಡವರಿಗೆ ಸಹಾಯ ಮಾಡಲಿ, ಆದರೆ ಪಕ್ಷದ ಚೌಕಟ್ಟಿನಲ್ಲಿ ಇರಲಿ. ಕೆಜಿಎಫ್ ಬಾಬುಗೆ ನೋಟಿಸ್ ಕೊಟ್ಟಿದ್ದಾರೆ, ಮುಂದಿನದ್ದು ಅವರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಹೈಕಮಾಂಡ್ ಸೂಚಿಸಿದರೂ ಕಾರ್ಯಕ್ರಮ ನಿಲ್ಲಿಸಲ್ಲ

ಚೆಕ್​ ವಿತರಣೆ ಕಾರ್ಯಕ್ರಮ ನಿಲ್ಲಿಸುವಂತೆ ಬೆದರಿಕೆ ವಿಚಾರ ನಾನು ಯಾರಿಗೂ ಹೆದರುವುದಿಲ್ಲ ಎಂದ ಕೆಜಿಎಫ್ ಬಾಬು ಕಾರ್ಯಕ್ರಮ ನಿಲ್ಲಿಸುವಂತೆ ಡಿ.ಕೆ.ಶಿವಕುಮಾರ್ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ. ಯಾರು ಹೈಕಮಾಂಡ್​ಗೆ ದೂರು ನೀಡಿದ್ದಾರೆ ಎಂದು ಗೊತ್ತಿದೆ. ಅರ್. ವಿ.ದೇವರಾಜ್ ಅಲ್ಲ ಹೈಕಮಾಂಡ್ ಹೇಳಿದರೂ ಚಕ್ ವಿತರಣೆ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಪಾರ್ಟಿ ಬ್ಯಾನರ್ ಅಡಿಯಲ್ಲಿ ನಾನು ಮಾಡುತ್ತಿಲ್ಲ. ಉಮ್ರಾ ಡೆವಲಪರ್ ಚಾರಿಟೇಬಲ್ ಟ್ರಸ್ಟ್ ಹೆಸರಲ್ಲಿ ಕಾರ್ಯಕ್ರಮ ಕೆಲಸ ಮಾಡಿಸುತ್ತಿದ್ದೇನೆ. ನಾನು ನನ್ನ ಸ್ವಂತ ದುಡ್ಡು ಕೊಡುತ್ತಿದ್ದೇನೆ. ನಾನು ಶ್ರೀಮಂತ, 10 ಜನ ಶ್ರೀಮಂತರದಲ್ಲಿ ನಾನೂ ಒಬ್ಬ. 50 ಸಾವಿರ ಮನೆಗಳಿಗೆ ಚಕ್ ಕೊಟ್ಟೆ ಕೊಡುತ್ತೇನೆ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Wed, 31 August 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!