ತಮಿಳುನಾಡು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆತ; ಮಧುರೈ ಜಿಲ್ಲಾಧ್ಯಕ್ಷ ಸರವಣನ್​​ನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 14, 2022 | 2:03 PM

ಸಚಿವರ ಕಾರು ಮೇಲೆ ನಡೆದ ದಾಳಿ ನನಗೆ ನೋವುಂಟು ಮಾಡಿದೆ. ನಾನು ಸಚಿವರನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದೇನೆ. ನಾನು ಬಿಜೆಪಿಯೊಂದಿಗೆ ಮುಂದುವರಿಯಲು ಬಯಸುತ್ತಿಲ್ಲ. ದ್ವೇಷ ಮತ್ತು ಧಾರ್ಮಿಕ ರಾಜಕಾರಣ ನನಗೆ ಹಿಡಿಸುತ್ತಿಲ್ಲ...

ತಮಿಳುನಾಡು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆತ; ಮಧುರೈ ಜಿಲ್ಲಾಧ್ಯಕ್ಷ ಸರವಣನ್​​ನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ
ಪಿ ಸರವಣನ್
Follow us on

ಮಧುರೈ ವಿಮಾನ ನಿಲ್ದಾಣದಲ್ಲಿ ತಮಿಳುನಾಡು (Tamil nadu)  ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ (Palanivel Thiaga Rajan) ಅವರ ಕಾರಿಗೆ ಪಕ್ಷದ ಕೆಲವು ಕಾರ್ಯಕರ್ತರು ಚಪ್ಪಲಿ ಎಸೆದ ಘಟನೆಯ ಬೆನ್ನಲ್ಲೇ ಪಕ್ಷ ತೊರೆಯುವುದಾಗಿ ಬಿಜೆಪಿ (BJP) ಮಧುರೈ ಜಿಲ್ಲಾಧ್ಯಕ್ಷ ಪಿ.ಸರವಣನ್ ಶನಿವಾರ ತಡರಾತ್ರಿ ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿ, ಸರವಣನ್ ಅವರನ್ನು ಉಚ್ಚಾಟಿಸಿರುವುದಾಗಿ ಹೇಳಿದೆ. ಆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ನೀಡಿರುವ ಹೇಳಿಕೆಯನ್ನು ಬಿಜೆಪಿ ಟ್ವೀಟ್ ಮಾಡಿದೆ. ಇದರ ಪ್ರಕಾರ ಪಕ್ಷದ ಶಿಸ್ತು ಉಲ್ಲಂಘಿಸಿದ ಮತ್ತು ಪಕ್ಷದ ಹೆಸರಿಗೆ ಕಳಂಕ ತಂದ ಕಾರಣಕ್ಕಾಗಿ ಸರವಣನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ರಾಜೀನಾಮೆ ಘೋಷಣೆ ಮಾಡುವ ಮುನ್ನ ಸರವಣನ್ ರಾಜ್ಯ ಹಣಕಾಸು ಸಚಿವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ, ಕ್ಷಮೆ ಕೇಳಿದ್ದರು. ಭೇಟಿ ನಂತರ ಮಾತನಾಡಿದ ಸರವಣನ್, ಈ ಘಟನೆ ನನಗೆ ತುಂಬಾ ನೋವು ತಂದಿದೆ ಎಂದಿದ್ದಾರೆ. ನಾನು “ನಾನು ಸಚಿವರ ಕೆಲವು ತೀಕ್ಷ್ಣವಾದ ಮಾತುಗಳನ್ನು ವೈಯಕ್ತಿಕ ದಾಳಿಯಾಗಿ ತೆಗೆದುಕೊಂಡೆ. ನಾನು ಒಂದು ವರ್ಷದ ಹಿಂದೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತೊರೆದು ಬಿಜೆಪಿ ಸೇರಿದ್ದೇನೆ. ಆದರೆ ಈಗ ನಾನು ಬಿಜೆಪಿಯನ್ನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಸಚಿವರ ಕಾರು ಮೇಲೆ ನಡೆದ ದಾಳಿ ನನಗೆ ನೋವುಂಟು ಮಾಡಿದೆ. ನಾನು ಸಚಿವರನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದೇನೆ. ನಾನು ಬಿಜೆಪಿಯೊಂದಿಗೆ ಮುಂದುವರಿಯಲು ಬಯಸುತ್ತಿಲ್ಲ. ದ್ವೇಷ ಮತ್ತು ಧಾರ್ಮಿಕ ರಾಜಕಾರಣ ನನಗೆ ಹಿಡಿಸುತ್ತಿಲ್ಲ. ನಾನು ಬೆಳಗ್ಗೆ ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಆದಾಗ್ಯೂ, ಡಿಎಂಕೆಗೆ ಹಿಂತಿರುಗುವ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಶನಿವಾರ ಮಧುರೈ ವಿಮಾನ ನಿಲ್ದಾಣದಲ್ಲಿ ಐದು ಜನರ ಗುಂಪೊಂದು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದಿತ್ತು. ಗುರುವಾರ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ನಾಲ್ವರು ಯೋಧರಲ್ಲಿ ಒಬ್ಬರಾದ ಭಾರತೀಯ ಸೇನೆಯ ರೈಫಲ್‌ಮನ್ ಡಿ ಲಕ್ಷ್ಮಣನ್ ಅವರಿಗೆ ಗೌರವ ಸಲ್ಲಿಸಿ ಹಿಂತಿರುಗುತ್ತಿದ್ದಾಗ ಸಚಿವರ ಅಧಿಕೃತ ವಾಹನದ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ.

ಇದನ್ನೂ ಓದಿ
ದೇಶ ವಿಭಜನೆಗೆ ಜವಾಹರ್​​ಲಾಲ್​​ ನೆಹರು ಕಾರಣ ಎಂದು ವಿಡಿಯೊ ಟ್ವೀಟ್ ಮಾಡಿದ ಬಿಜೆಪಿ, ಕಾಂಗ್ರೆಸ್ ತಿರುಗೇಟು
Independence Day 2022: ಭಾರತ, ಪಾಕಿಸ್ತಾನ ಇಬ್ಭಾಗ: 1947 ಆಗಸ್ಟ್​​ 14ರಂದು ನಡೆದ ಕೆಲ ಸಂಗತಿಗಳು ಇಲ್ಲಿವೆ
Rakesh Jhunjhunwala: ‘ಬಿಗ್​​ ಬುಲ್’​ ರಾಕೇಶ್ ಜುಂಜುನ್​ವಾಲಾ ಬಗ್ಗೆ ನೀವು ತಿಳಿಯಬೇಕಾದ 5 ಅಪರೂಪದ ಸಂಗತಿಗಳಿವು

ಪೊಲೀಸರ ಪ್ರಕಾರ, ರಾಜ್ಯ ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಿಜೆಪಿ ಕಾರ್ಯಕರ್ತರು ಏಕೆ ಬಂದಿದ್ದಾರೆ ಎಂದು ಕೇಳಿದ್ದಕ್ಕೆ  ಹಣಕಾಸು ಸಚಿವರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ