Independence Day 2022: ಭಾರತ, ಪಾಕಿಸ್ತಾನ ಇಬ್ಭಾಗ: 1947 ಆಗಸ್ಟ್​​ 14ರಂದು ನಡೆದ ಕೆಲ ಸಂಗತಿಗಳು ಇಲ್ಲಿವೆ

ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಗಂಡಿಸಲಾಯಿತು. ಭಾರತದಲ್ಲಿ ನಾವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ, ಪಾಕಿಸ್ತಾನ ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. 

Independence Day 2022: ಭಾರತ, ಪಾಕಿಸ್ತಾನ ಇಬ್ಭಾಗ: 1947 ಆಗಸ್ಟ್​​ 14ರಂದು ನಡೆದ ಕೆಲ ಸಂಗತಿಗಳು ಇಲ್ಲಿವೆ
Independence Day( ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 14, 2022 | 12:33 PM

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಭಾರತವು ಆಗಸ್ಟ್​​ 15ರಂದು ತನ್ನ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಆಚರಿಸಲು ಸಿದ್ಧವಾಗಿದೆ. ಈ ಮಹತ್ವದ ದಿನದ ಸ್ಮರಣಾರ್ಥವಾಗಿ ಭಾರತ ಸರ್ಕಾರವು ಹಲವಾರು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಈ ದಿನವು ತುಂಬಾ ಮಹತ್ವದ್ದಾಗಿರುವುದಕ್ಕೆ ಕಾರಣವೆಂದರೆ 1947 ರಲ್ಲಿ ಇದೇ ದಿನಾಂಕದಂದು ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆಯಿತು. ದೇಶದ ಒಳಿತಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್​ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಿಸ್ವಾರ್ಥ ತ್ಯಾಗದ ಪ್ರತೀಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ನಮಗೆ ದೊರಕಿರುವುದು ಖುಷಿಯ ವಿಚಾರವಾದರು ದೇಶದ ಇಬ್ಬಾಗವೂ ದುಃಖವನ್ನು ತರಿಸಿತು. ದುರದೃಷ್ಟವಶಾತ್ ಬ್ರಿಟಿಷ್​​ ಭಾರತೀಯ ಉಪಖಂಡವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಗಂಡಿಸಲಾಯಿತು. ಭಾರತದಲ್ಲಿ ನಾವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿದರೆ, ಪಾಕಿಸ್ತಾನ ಆಗಸ್ಟ್ 14 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ.

ಇದನ್ನೂ ಓದಿ: Azadi ka Amrit Mahotsav Part 8: 2014-ದೇಶದಲ್ಲಿ ಎದ್ದ ಮೋದಿ ಅಲೆಗೆ ಕಾಂಗ್ರೆಸ್ ತತ್ತರ, ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ದಿಟ್ಟತನ ಮೆರೆದ ಭಾರತೀಯ ಯೋಧರು

ಆಗಸ್ಟ್​ 14ರಂದು ಏನಾಯಿತು? 

  1. ರಾಷ್ಟ್ರಗಳ ವಿಭಜನೆ ಜಾರಿಗೆ ಬಂದ ನಂತರ 1947ರ ಭಾರತೀಯ ಸ್ವಾತಂತ್ರ್ಯ ಕಾಯಿದೆಯು ಬ್ರಿಟಿಷ್ ರಾಜ್​ನ್ನು ಕೊನೆಗೊಳಿಸಿತು. ಆಗಸ್ಟ್ 14, 1947 ರಂದು, ಪಾಕಿಸ್ತಾನವು ಸ್ವಾತಂತ್ರ್ಯವನ್ನು ಗಳಿಸಿತು. ಆದರೆ ಭಾರತವು ಒಂದು ದಿನದ ಬಳಿಕ ಸ್ವಾತಂತ್ರ್ಯವನ್ನು ಪಡೆಯಿತು.
  2. ಭಾರತ ಮತ್ತು ಪಾಕಿಸ್ತಾನ ವಿಭಜನೆಯ ನಂತರ ಎರಡು ರಾಷ್ಟ್ರಗಳು ಕೋಮು ಮಾರ್ಗಗಳಾಗಿ ರೂಪುಗೊಂಡವು. ಪಾಕಿಸ್ತಾನ್ ಡೊಮಿನಿಯನ್ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನವಾದರೆ, ಭಾರತ ಡೊಮಿನಿಯನ್ ಭಾರತ ಗಣರಾಜ್ಯವಾಯಿತು. ಜಾತ್ಯತೀತ ರಾಷ್ಟ್ರವಾಗುವ ನಿರ್ಧಾರ ಕೈಗೊಂಡ ಪಾಕಿಸ್ತಾನದ ಪರಿಸ್ಥಿತಿ ಭಾರತಕ್ಕಿಂತ ಭಿನ್ನವಾಗಿತ್ತು.
  3. ಭಾರತ ಮತ್ತು ಪಾಕಿಸ್ತಾನಗಳಲ್ಲಿ ರಸ್ತೆ ರಸ್ತೆಗಳಲ್ಲಿ ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆ ಹೊಂದಿದ್ದ ಜನರಿಂದ ತುಂಬಿ ತುಳುಕುತ್ತಿತ್ತು.
  4. ಆದರೆ ವಿಭಜನೆಯ ಬಗ್ಗೆ ಪ್ರಜ್ಞೆ ಕಡಿಮೆ ಹೊಂದಿದ್ದರು. ಹಾಗಾಗಿ ಬಂಗಾಳ, ಬಿಹಾರ, ಯುನೈಟೆಡ್ ಪ್ರಾಂತ್ಯಗಳು ಮತ್ತು ಪಂಜಾಬ್‌ನ ಹಲವಾರು ಭಾಗಗಳು ಹಿಂಸಾತ್ಮಕವನ್ನು ಅನುಭವಿಸಬೇಕಾಯಿತು. ವ್ಯಾಪಕವಾದ ಕೊಲೆಗಳು, ಅತ್ಯಾಚಾರಗಳು ಮತ್ತು ಕ್ರೌರ್ಯಗಳು ನಡೆದವು.
  5. ತಮ್ಮ ಧರ್ಮದ ಆಧಾರದ ಮೇಲೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನರು ತಮ್ಮ ಎಲ್ಲಾ ಸ್ಥಿರ ಆಸ್ತಿಗಳನ್ನು ಬಿಟ್ಟು ಹೋಗಬೇಕಾದ ಪರಿಸ್ಥತಿ ಎದುರಾಯಿತು. ಲಕ್ಷಾಂತರ ಜನ ಸ್ಥಳಾಂತರಗೊಂಡು ನಿರಾಶ್ರಿತರ ಶಿಬಿರಗಳನ್ನು ಸೇರಿಕೊಂಡರು. ಹಿಂಸಾಚಾರ ಜೊತೆಗೆ ಅನೈರ್ಮಲ್ಯದಿಂದಾಗಿ ಜನರು ಸತ್ತರು.
  6. ಮಧ್ಯರಾತ್ರಿಯಲ್ಲಿ 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ದೇಶದ ಸ್ವಾತಂತ್ರ್ಯವನ್ನು ಆಚರಿಸಲು ವ್ಯಕ್ತಿಗಳು ಬೀದಿಗಿಳಿದಿದ್ದರು. ಸಂವಿಧಾನ ಸಭೆಯ ನಂತರ ಮಧ್ಯರಾತ್ರಿಯಲ್ಲಿ ಸ್ವತಂತ್ರ ಭಾರತದ ಶಾಸಕಾಂಗ ಸಭೆಯಾಗಿ ತನ್ನ ಹೊಸ ಪಾತ್ರವನ್ನು ವಹಿಸಿಕೊಂಡಿತು.

ಮತ್ತಷ್ಟು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:24 pm, Sun, 14 August 22