ಪ್ರತಿಪಕ್ಷಗಳ ಮಹಾ ಘಟಬಂಧನಕ್ಕೆ ಇದೆ ಸಾಲು ಸಾಲು ಸವಾಲು; ಅವುಗಳು ಯಾವುವು?

| Updated By: ಗಣಪತಿ ಶರ್ಮ

Updated on: Jul 18, 2023 | 7:20 PM

ಸವಾಲುಗಳನ್ನು ಮೀರಿ ನಿಂತರೆ ಮಾತ್ರ ಪ್ರತಿಪಕ್ಷಗಳ ಮೈತ್ರಿಕೂಟ ಬಿಜೆಪಿ ವಿರುದ್ಧ ಸೆಣಸಬಹುದಾಗಿದೆ. ಆದರೆ, ಈ ಮೈತ್ರಿಕೂಟದ ಭವಿಷ್ಯ ಬೇರೆ ಬೇರೆ ರಾಜ್ಯಗಳ ಸ್ಥಿತಿಗತಿಗಳ ಮೇಲೆಯೇ ನಿಂತಿದೆ.

ಪ್ರತಿಪಕ್ಷಗಳ ಮಹಾ ಘಟಬಂಧನಕ್ಕೆ ಇದೆ ಸಾಲು ಸಾಲು ಸವಾಲು; ಅವುಗಳು ಯಾವುವು?
ಪ್ರತಿಪಕ್ಷಗಳ ನಾಯಕರು
Follow us on

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಣಿಸಿಯೇ ತೀರಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿರುವ ಪ್ರತಿಪಕ್ಷಗಳು ‘ಮಹಾಮೈತ್ರಿ ಅಥವಾ ಮಹಾಘಟಬಂಧನ್’ (Opposition Parties Meeting) ಅನ್ನು ಬಲಪಡಿಸಲು ಶ್ರಮಿಸುತ್ತಿವೆ. ಅದರ ಅಂಗವಾಗಿ ಇದೀಗ ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಸಲಾಗುತ್ತಿದೆ. ಆದರೆ, ವಿಪಕ್ಷಗಳ ಮಹಾಘಟಬಂದನ್​​​ ಮುಂದಿರುವ ಹಾದಿ ಅಷ್ಟೊಂದು ಸುಲಭದ್ದಲ್ಲ. ಈ ಮೈತ್ರಿಕೈಟದ ಮುಂದೆ ಸಾಲು ಸಾಲು ಸವಾಲುಗಳಿರುವ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ.

ಸವಾಲುಗಳನ್ನು ಮೀರಿ ನಿಂತರೆ ಮಾತ್ರ ಪ್ರತಿಪಕ್ಷಗಳ ಮೈತ್ರಿಕೂಟ ಬಿಜೆಪಿ ವಿರುದ್ಧ ಸೆಣಸಬಹುದಾಗಿದೆ. ಆದರೆ, ಈ ಮೈತ್ರಿಕೂಟದ ಭವಿಷ್ಯ ಬೇರೆ ಬೇರೆ ರಾಜ್ಯಗಳ ಸ್ಥಿತಿಗತಿಗಳ ಮೇಲೆಯೇ ನಿಂತಿದೆ.

ಮಹಾಘಟಬಂಧನಕ್ಕಿರುವ ಪ್ರಮುಖ ಸವಾಲುಗಳಿವು

  1. ವಿಪಕ್ಷಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವವರು ಯಾರು ಎಂಬುದೇ ಮೊದಲ ಪ್ರಶ್ನೆಯಾಗಿದೆ.
  2. ಆರು ಮಂದಿ ಹಾಲಿ ಮುಖ್ಯಮಂತ್ರಿಗಳು ತಾವೇ ಮುಂಚೂಣಿಯಲ್ಲಿರಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
  3. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕಿರೀಟ ತೊಡಿಸಲು ಮಹಾಘಟಬಂಧನ್ ಪೂರ್ಣಪ್ರಮಾಣದಲ್ಲಿ ಸಿದ್ದವಿಲ್ಲ
  4. ಯಾರ ಸ್ಥಾನ ಏನೇನು ಜವಾಬ್ದಾರಿಗಳೇನು ಎಂಬುದು ಇನ್ನೂ ನಿರ್ಣಯವಾಗಿಲ್ಲ
  5. 24 ಪಕ್ಷಗಳು ಬೇರೆ ಬೇರೆ ರಾಜ್ಯಗಳಲ್ಲಿ ಸ್ಪರ್ಧಿಗಳಾಗಿವೆ
  6. ಕಾಂಗ್ರೆಸ್ ಪಕ್ಷಕ್ಕೆ ಒಕ್ಕೂಟದಲ್ಲಿರುವ ಎಎಪಿ, ತೃಣಮೂಲ ಕಾಂಗ್ರೆಸ್ ಪಕ್ಷಗಳೇ ನೇರ ಸ್ಪರ್ಧಿಗಳಾಗಿವೆ
  7. ವಿಧಾನಸಭೆಗೆ ಒಂದು ಸೂತ್ರ, ಲೋಕಸಭೆಗೆ ಇನ್ನೊಂದು ಸೂತ್ರ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ
  8. ಪಂಜಾಬ್​​ನಲ್ಲಿ ಆಮ್ ಆದ್ಮಿಯ ಬದ್ಧ ವೈರಿ ಹಾಗೂ ನೇರ ಸೆಣಸಾಟ ಇರುವುದು ಕಾಂಗ್ರೆಸ್ ಜೊತೆಗೆ
  9. ಅದೇ ಕಾಂಗ್ರೆಸ್ ದೆಹಲಿಯ ರಾಜಕಾರಣದಲ್ಲಿ ಆಮ್ ಆದ್ಮಿಗೆ ಬೆಂಬಲ ನೀಡುವುದಕ್ಕೆ ಸಿದ್ಧವಿಲ್ಲ, ಆದರೆ ಲೋಕಸಭೆಗೆ ಮಾತ್ರ ಆಮ್ ಆದ್ಮಿ ಜೊತೆಗೆ ಕೈ ಜೋಡಿಸಲು ಸಿದ್ದವಾಗಿದೆ
  10. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬದ್ಧ ವೈರಿಗಳು, ತೃಣಮೂಲ ಕಾಂಗ್ರೆಸ್ ಕಾರಣದಿಂದಾಗಿಯೇ ಕಾಂಗ್ರೆಸ್ ನೆಲಕಚ್ಚಿಹೋಗಿದೆ
  11. ಲೋಕಸಭೆಯಲ್ಲಿ ಪ್ರಮುಖ ಜವಾಬ್ದಾರಿ ನೀಡಲು ಕಾಂಗ್ರೆಸ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡಿದೆ
  12. ತಮಿಳುನಾಡು, ಕೇರಳದಲ್ಲೂ ತ್ರಿಕೋನ‌ ಸ್ಪರ್ಧೆ ಇಲ್ಲ, ನೇರ ಸ್ಪರ್ಧೆ ಇರುವುದು ಕಾಂಗ್ರೆಸ್ ಜೊತೆಗೆ
  13. ನೇರ ಸ್ಪರ್ಧೆ ಇರುವ ಪಕ್ಷಗಳೊಂದಿಗೆ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮಾಡಿಕೊಳ್ಳುತ್ತಿರುವ ಒಕ್ಕೂಟ ಬಾಂಧವ್ಯ ಹೇಗೆ ವರ್ಕ್ ಆಗಬಹುದು ಎಂಬುದು ಸದ್ಯದ ಕುತೂಹಲವಾಗಿದೆ
  14. ಬರುವ ನವೆಂಬರ್ ಒಳಗಾಗಿ ಇನ್ನೂ ಮೂರು ಸುತ್ತಿನ ಸಭೆ ನಡೆಸಲು ಬಿಜೆಪಿಯೇತರ ವಿರೋಧ ಪಕ್ಷಗಳ ನಾಯಕರು ತೀರ್ಮಾನ ಮಾಡಿದ್ದಾರೆ

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Tue, 18 July 23