ಟೀಕೆ ಮಾಡುವವರು ಅನ್ನಭಾಗ್ಯ ಫಲಾನುಭವಿಗಳಲ್ಲ: ಬಿಜೆಪಿ ನಾಯಕರಿಗೆ ಶಾಸಕ ರಾಘವೇಂದ್ರ ಹಿಟ್ನಾಳ್​ ತಿರುಗೇಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jun 29, 2023 | 2:51 PM

ಶಕ್ತಿ ಯೋಜನೆಯಿಂದ ಈಗಾಗಲೇ ಮಹಿಳೆಯರಿಗೆ ಅನುಕೂಲ ಆಗಿದೆ. ಅನ್ನಭಾಗ್ಯ ಯೋಜನೆಯಿಂದ ಸಹ ಬಡವರಿಗೆ ಉಪಯೋಗ ಆಗುತ್ತೆ. ಟೀಕೆ ಮಾಡುವವರು ಅನ್ನಭಾಗ್ಯ ಫಲಾನುಭವಿಗಳಲ್ಲ ಎಂದು ಬಿಜೆಪಿ ವಿರುದ್ಧ ಶಾಸಕ ರಾಘವೇಂದ್ರ ಹಿಟ್ನಾಳ್ ಕಿಡಿಕಾರಿದ್ದಾರೆ.

ಟೀಕೆ ಮಾಡುವವರು ಅನ್ನಭಾಗ್ಯ ಫಲಾನುಭವಿಗಳಲ್ಲ: ಬಿಜೆಪಿ ನಾಯಕರಿಗೆ ಶಾಸಕ ರಾಘವೇಂದ್ರ ಹಿಟ್ನಾಳ್​ ತಿರುಗೇಟು
ಶಾಸಕ ರಾಘವೇಂದ್ರ ಹಿಟ್ನಾಳ್
Follow us on

ಕೊಪ್ಪಳ: ಶಕ್ತಿ ಯೋಜನೆಯಿಂದ ಈಗಾಗಲೇ ಮಹಿಳೆಯರಿಗೆ ಅನುಕೂಲ ಆಗಿದೆ. ಅನ್ನಭಾಗ್ಯ ಯೋಜನೆಯಿಂದ ಸಹ ಬಡವರಿಗೆ ಉಪಯೋಗ ಆಗುತ್ತೆ. ಟೀಕೆ ಮಾಡುವವರು ಅನ್ನಭಾಗ್ಯ ಫಲಾನುಭವಿಗಳಲ್ಲ ಎಂದು ಬಿಜೆಪಿ ವಿರುದ್ಧ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಕಿಡಿಕಾರಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಇರುವುದೇ ಟೀಕೆ ಮಾಡುವುದಕ್ಕೆ. ಎಲ್ಲಾ ಕಡೆ ಕೇಳಿದರೂ ಅಕ್ಕಿ ಸಿಕ್ಕಿಲ್ಲ, ಹೀಗಾಗಿ ಹಣ ನೀಡುತ್ತಿದ್ದೇವೆ ಎಂದು ಹೇಳಿದರು.

ಬಡವರು ನಮ್ಮ ಯೋಜನೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ‌. ಮುಂದೆ ಬರುವ ಚುನಾವಣೆಯಲ್ಲೂ ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ. ಬಿಜೆಪಿಯವರು ಏನು ಅವಾಂತರ ಮಾಡಿದ್ದಾರೆ ಅನ್ನೋದು ಗೊತ್ತು. ಕೇಂದ್ರದ ಬೆಲೆ ಏರಿಕೆ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ ಎಂದರು.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಗೆಲ್ಲದವರು ನಮಗೆ ಮಾರ್ಗದರ್ಶನ ಮಾಡ್ತಾರೆ: ಸ್ವಪಕ್ಷದ ನಾಯಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಪ್ರತಾಪ್ ಸಿಂಹಗೆ ಟಾಂಗ್ ನೀಡಿದ ರಾಘವೆಂದ್ರ ಹಿಟ್ನಾಳ್

ಕೊರೊನಾ ಸ್ಕ್ಯಾಮ್ ಎಲ್ಲವೂ ಗೊತ್ತು. ರಾಜ್ಯ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಸಂಸದ ಪ್ರತಾಪ್​​ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಹೊಸ ಸರ್ಕಾರ ಬಂದ ಮೇಲೆ ವರ್ಗಾವಣೆ ಸಾಮಾನ್ಯ. ಪ್ರತಾಪ್ ಸಿಂಹ ಎರಡೂ ಭಾರಿ ಎಂಪಿ ಆದವರು.

ಇದನ್ನೂ ಓದಿ: ಆಪ್ತನ ಸೋಲನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ, ಈ ಇಬ್ಬರು ನಾಯುಕರ ವಿರುದ್ಧ ಶಿಸ್ತು ಕ್ರಮಕ್ಕೆ ಪತ್ರ

ಅವರಿಗೆ ವಿಧಾನಸೌಧದಲ್ಲಿ ಏನ್ ನಡಿಯುತ್ತೆ ಗೊತ್ತಿಲ್ವಾ. ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ, ಪೈಲ್ ಹಿಡ್ಕೊಂಡು ಫೋಟೋ ತೆಗೆದುಕೊಳ್ಳೋಕೆ ಹೋಗಿ ಫಜೀತಿ ಮಾಡಿಕೊಂಡಿರಲಿಲ್ವಾ ಎಂದು ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:47 pm, Thu, 29 June 23